ಬ್ರೇಕಿಂಗ್ ನ್ಯೂಸ್
10-01-25 11:05 pm HK News Desk ಕ್ರೈಂ
ಮುಂಬೈ, ಜ.10: ಟೊರೇಝ್ ಜುವೆಲ್ಲರಿ ಹೆಸರಲ್ಲಿ ಚಿನ್ನ, ವಜ್ರದ ಮೇಲೆ ದೊಡ್ಡ ಮಟ್ಟದ ಬಡ್ಡಿ ಆಮಿಷದ ಚೈನ್ ಸ್ಕೀಂ ಮಾಡಿ ಒಂದು ಲಕ್ಷಕ್ಕೂ ಹೆಚ್ಚು ಮಂದಿಗೆ ಟೋಪಿ ಹಾಕಿರುವ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಿನ್ನ, ಅಮೆರಿಕನ್ ವಜ್ರ, ಬೆಳ್ಳಿ ಹೆಸರಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಮೊತ್ತದ ಬಡ್ಡಿ ಸಿಗುತ್ತದೆ ಎಂದು ನಂಬಿಸಿ ಜನರಿಂದ ಹಣ ಸಂಗ್ರಹ ಮಾಡುತ್ತಿದ್ದರು. ಇದೀಗ ಟೊರೇಝ್ ಕಂಪನಿಯಿಂದ ವಂಚನೆಗೊಳಗಾದ 66 ಮಂದಿ ದೂರು ಕೊಟ್ಟಿದ್ದು, ಎಫ್ಐಆರ್ ದಾಖಲಾಗಿದೆ. ಪೊಲೀಸರು ಕಂಪನಿಗೆ ಸಂಬಂಧಪಟ್ಟ ಮೂವರನ್ನು ಬಂಧಿಸಿದ್ದು, ಕಂಪನಿಯ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ ಮೂರು ಕೋಟಿ ರೂಪಾಯಿ ಫ್ರೀಜ್ ಮಾಡಿದ್ದಾರೆ. ಸದ್ಯ, ದೂರು ನೀಡಿರುವ 66 ಮಂದಿಗೆ 13.48 ಕೋಟಿ ರೂಪಾಯಿ ಮೋಸ ಆಗಿರುವ ಬಗ್ಗೆ ಎಫ್ಐಆರ್ ನಲ್ಲಿ ಉಲ್ಲೇಖವಾಗಿದೆ.
2023ರ ಎಪ್ರಿಲ್ ನಲ್ಲಿ ಟೊರೇಝ್ ಹೆಸರಲ್ಲಿ ಜುವೆಲ್ಲರಿ ಶುರುವಾಗಿದ್ದು ದಾದರ್, ಗ್ರಾಂಟ್ ರೋಡ್, ಕಾಂಡೀವಲಿ, ಥಾಣೆಯ ಕಲ್ಯಾಣ್, ನವಿ ಮುಂಬೈನ ಸನ್ ಪಾಡ ಮತ್ತು ಪಾಲ್ಘಾರ್ ಬಳಿಯ ಮೀರಾ ರೋಡ್ ನಲ್ಲಿ ಆರು ಶಾಖೆಗಳು ಆರಂಭಗೊಂಡಿದ್ದವು. ಅಂದಾಜು ಪ್ರಕಾರ, 1.25 ಲಕ್ಷ ಮಂದಿಗೆ ದೋಖಾ ಮಾಡಲಾಗಿದ್ದು, ಸುಮಾರು ಒಂದು ಸಾವಿರ ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ. ಮುಖ್ಯವಾಗಿ ಚಿನ್ನಾಭರಣ, ಅಮೆರಿಕನ್ ವಜ್ರದ ಮೇಲೆ ಹೂಡಿಕೆ ಮಾಡುವಂತೆ ಜನರನ್ನು ನಂಬಿಸುತ್ತಿದ್ದರು. ಹೂಡಿಕೆಯ ಮೇಲೆ ವಾರಕ್ಕೆ 3ರಿಂದ 7 ಪರ್ಸೆಂಟ್ ಬಡ್ಡಿ ನೀಡುವ ಬಗ್ಗೆ ಹೇಳುತ್ತಿದ್ದರು. ಇದನ್ನು ನಂಬಿದ ಜನರು ಹಣ ಕಟ್ಟಲು ತೊಡಗಿದ್ದರು. ಆರಂಭದಲ್ಲಿ ರಿಟರ್ನ್ಸ್ ಕೂಡ ಸಿಗುತ್ತಿದ್ದುದರಿಂದ ಗ್ರಾಹಕರ ಸಂಖ್ಯೆಯೂ ಹೆಚ್ಚಿತ್ತು. ಚೈನ್ ರೂಪದಲ್ಲಿ ಸ್ಕೀಮ್ ಮಾಡುತ್ತಿದ್ದು, ಇದರ ಬಗ್ಗೆ ಅಲ್ಲಲ್ಲಿ ಜನರನ್ನು ಆಕರ್ಷಿಸಲು ಕಾರ್ಯಾಗಾರವನ್ನೂ ಮಾಡುತ್ತಿದ್ದರು.
ಹೊಸಬರನ್ನು ಸೇರಿಸಿದರೆ ಡಬಲ್ ಬಡ್ಡಿ
ಗ್ರಾಹಕರು ಹೊಸಬರನ್ನು ಕಂಪನಿಯ ಹೂಡಿಕೆ ಮಾಡಲು ಸೇರಿಸಿದರೆ ಅಂಥವರಿಗೆ 11 ಪರ್ಸೆಂಟ್ ಬಡ್ಡಿ ನೀಡುವ ಆಮಿಷ ಒಡ್ಡಿತ್ತು. ಇದೇ ರೀತಿ ಹಣದ ವಹಿವಾಟು ನಡೆಯುತ್ತಿರುವಾಗಲೇ ಡಿಸೆಂಬರ್ ಮೊದಲ ವಾರದಲ್ಲಿ ಜುವೆಲ್ಲರಿ ಶಾಪ್ ಬಾಗಿಲು ಹಾಕ್ಕೊಂಡಿದೆ. ಸಡನ್ನಾಗಿ ಜುವೆಲ್ಲರಿ ಬಂದ್ ಆಗಿದ್ದರಿಂದ ಗ್ರಾಹಕರು ಕಂಗಾಲಾಗಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆರು ಕಡೆಗಳಲ್ಲಿಯೂ ಶಾಪ್ ಬಂದ್ ಆಗಿದ್ದು ವಿಷಯ ತಿಳಿಯುತ್ತಲೇ ನೂರಾರು ಮಂದಿ ತಾವು ಕಟ್ಟಿದ ಹಣದ ಬಗ್ಗೆ ದಾಖಲೆ ಮುಂದಿಟ್ಟು ಪೊಲೀಸರಲ್ಲಿ ನ್ಯಾಯ ಕೇಳಿದ್ದಾರೆ.
ವ್ಯಾಪಾರಿಗಳೇ ಹಣ ಕಳಕೊಂಡವರು
ವರ್ಷದ ಕೊನೆಯಲ್ಲಿ ಹೆಚ್ಚಿನ ಮೊತ್ತ ಬಡ್ಡಿ ರೂಪದಲ್ಲಿ ಸಿಗುವುದಾಗಿ ಹೇಳುತ್ತ ಬಂದಿದ್ದರು. ಅಲ್ಲದೆ, ಹೊಸ ಗ್ರಾಹಕರನ್ನು ಸೇರಿಸಿದವರಿಗೆ ತಾವು ಕಟ್ಟಿದ ಹಣದ ಮೇಲೆ ವಾರಕ್ಕೆ 11 ಪರ್ಸೆಂಟ್ ಬಡ್ಡಿ ನೀಡುವುದಾಗಿ ತಿಳಿಸಿದ್ದರು. ಇದರಂತೆ, ಹೊಸಬರನ್ನು ಸೇರಿಸುವ ಪ್ರಕ್ರಿಯೆಯೂ ಜೋರಾಗಿತ್ತು. ಹೂ ಮಾರುವವರು, ಅಂಗಡಿ ವ್ಯಾಪಾರಿಗಳು ಹೀಗೆ ಎಲ್ಲ ರೀತಿಯ ವರ್ಗದವರೂ ಈ ಜುವೆಲ್ಲರಿ ಮೇಲೆ ಹಣ ತೊಡಗಿಸಿದ್ದರು. ತರಕಾರಿ ವ್ಯಾಪಾರಿ ಪ್ರದೀಪ್ ಕುಮಾರ್ ವೈಶ್ಯ 4.55 ಕೋಟಿ ಹೂಡಿಕೆ ಮಾಡಿದ್ದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕಂಪನಿಯ ಜನರಲ್ ಮ್ಯಾನೇಜರ್ ಉಜ್ಬೇಕಿಸ್ತಾನ್ ಮೂಲದ ತಾನಿಯಾ ಕ್ಸಸಟೋವಾ, ಡೈರೆಕ್ಟರ್ ಸರ್ವೇಶ್ ಅಶೋಕ್ ಸರ್ವೆ ಹಾಗೂ ಸ್ಟೋರ್ ಇನ್ ಚಾರ್ಜ್ ಆಗಿದ್ದ ವ್ಯಾಲೆಂಟಿನಾ ಗಣೇಶ್ ಕುಮಾರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ವ್ಯಾಲೆಂಟಿನಾ ರಶ್ಯಾ ಮೂಲದಳಾಗಿದ್ದು, ಭಾರತದ ನಾಗರಿಕತ್ವ ಸ್ವೀಕರಿಸಿ ಮುಂಬೈ ವ್ಯಕ್ತಿಯನ್ನು ಮದುವೆಯಾಗಿದ್ದಳು.
ಹಣ ಲಪಟಾಯಿಸಿ ವಿದೇಶಕ್ಕೆ ಪರಾರಿ ?
ವಿದೇಶಿ ಪ್ರಜೆ ತೌಸಿಫ್ ರಿಯಾಜ್ ಅಲಿಯಾಸ್ ಜಾನ್ ಕಾರ್ಟರ್ ಎಂಬಾತ ಟೊರೇಝ್ ಕಂಪನಿಯ ಸಿಇಓ ಆಗಿದ್ದು, ಕೇಸು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ. ಮತ್ತೊಬ್ಬ ಡೈರೆಕ್ಟರ್ ಆಗಿರುವ ವಿಕ್ಟೋರಿಯಾ ಕೊವಲೆಂಕೋ ಕೂಡ ನಾಪತ್ತೆಯಾಗಿದ್ದು ವಿದೇಶಕ್ಕೆ ಹಾರಿರುವ ಶಂಕೆಯಿದೆ. ಇವರಿಬ್ಬರು ಸಂಸ್ಥೆಯ ಸ್ಥಾಪಕರು ಎನ್ನಲಾಗುತ್ತಿದ್ದು, ಇವರ ಪತ್ತೆಗಾಗಿ ಪೊಲೀಸರು ಲುಕೌಟ್ ನೋಟೀಸ್ ಮಾಡಿದ್ದಾರೆ. ಉಕ್ರೇನ್ ಮೂಲದ ಒಲೇನಾ ಸ್ಟೋಯನ್ ಈ ಜಾಲದ ಮಾಸ್ಟರ್ ಮೈಂಡ್ ಎನ್ನಲಾಗುತ್ತಿದ್ದು ಆತನೂ ತಪ್ಪಿಸಿಕೊಂಡಿದ್ದಾನೆ. ಈತ ಟರ್ಕಿ ದೇಶದಲ್ಲೂ ಇದೇ ರೀತಿಯ ನಕಲಿ ಸ್ಕೀಮ್ ಮಾಡಿ ಟೋಪಿ ಹಾಕಿದ್ದಾನೆ ಎನ್ನಲಾಗುತ್ತಿದೆ.
ಇದೇ ವೇಳೆ, ನಕಲಿ ಕಂಪನಿಯ ದೋಖಾದ ಬಗ್ಗೆ ಪೊಲೀಸರಿಗೆ ಮೊದಲೇ ಗೊತ್ತಿತ್ತು ಎನ್ನುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಸಿಎ ಅಭಿಷೇಕ್ ಗುಪ್ತಾ ಮತ್ತು ಬಂಧಿತನಾಗಿರು ಸರ್ವೇಶ್ ಸರ್ವೆ ತಾವು, ಕಂಪನಿ ಕುರಿತ ಅಕ್ರಮದ 154 ಪುಟಗಳ ವರದಿಯನ್ನು ಮುಂಬೈ ಪೊಲೀಸರಿಗೆ ಮೈಲ್ ಮಾಡಿದ್ದೇವೆ. ಅಲ್ಲದೆ, ಜನವರಿ 2, 3ರಂದು ಸಿಬಿಐ, ಇಡಿಯವರಿಗೂ ದೂರು ನೀಡಿದ್ದೆವು ಎಂದು ಹೇಳಿದ್ದಾರೆ.
Mumbai police on Tuesday arrested three senior functionaries of financial company Platinum Hern Pvt Ltd that operated an alleged ponzi scheme under the brand name of Torres jewelry store chain and alleged to have defrauded 1.25 lakh investors to the tune of Rs 1,000 crore. Two founders of the companies, suspected to be Ukrainian nationals, have allegedly fled the country. The police have issued Look Out Circular (LOCs) against the two masterminds of the mass investment fraud.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
02-04-25 07:35 pm
HK News Desk
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
02-04-25 11:02 pm
Mangalore Correspondent
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
02-04-25 05:49 pm
Mangalore Correspondent
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm