Mangalore crime, Diesel thieves: ಸುರತ್ಕಲ್ ; ಟ್ಯಾಂಕರ್ ಗಳಿಂದ ಡೀಸೆಲ್ ಕಳವು ಮಾಡುತ್ತಿದ್ದ ನಾಲ್ವರ ಸೆರೆ 

14-01-25 04:47 pm       Mangalore Correspondent   ಕ್ರೈಂ

ಯಾರ್ಡ್ ನಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ಗಳಿಂದ ಡೀಸೆಲ್ ಕಳವು ಮಾಡುತ್ತಿದ್ದ ಖದೀಮರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. 

ಮಂಗಳೂರು, ಜ.13: ಯಾರ್ಡ್ ನಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ಗಳಿಂದ ಡೀಸೆಲ್ ಕಳವು ಮಾಡುತ್ತಿದ್ದ ಖದೀಮರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. 

ಸುರತ್ಕಲ್ ಬಳಿಯ ಬಾಳದಲ್ಲಿ ಯಾರ್ಡ್ ನಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ಗಳಿಂದ ಡೀಸೆಲ್ ಕಳವು ಮಾಡುತ್ತಿದ್ದವರನ್ನು ಪತ್ತೆ ಮಾಡಿ ಪೊಲೀಸರು ಬಂಧಿಸಿದ್ದಾರೆ. ಕುಳಾಯಿಗುಡ್ಡೆ ನಿವಾಸಿ ಸಂತೋಷ್ (42), ಕಾಟಿಪಳ್ಳ ನಿವಾಸಿ ಐರನ್ ರಿತೇಶ್ ಮಿನೇಜ್ (36), ಬೆಳ್ತಂಗಡಿಯ ನಾರಾಯಣ್ (23), ಉಡುಪಿ ಹೆಜಮಾಡಿ ನಿವಾಸಿ ರವಿ ಪುತ್ರನ್ (59) ಬಂಧಿತರು. 

ಖಚಿತ ಮಾಹಿತಿ ಆಧರಿಸಿ ಡಿಸೇಲನ್ನು ಕಳವು ಮಾಡಿ ದಾಸ್ತಾನು ಇರಿಸಿದ್ದ ಶೆಡ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಶೆಡ್ ನಲ್ಲಿ ಆರೋಪಿಗಳು ಶೇಖರಿಸಿಟ್ಟಿದ್ದ 1685 ಲೀಟರ್  ಡಿಸೇಲ್ ಮತ್ತು 20 ಲೀಟರ್ ಪೆಟ್ರೋಲ್ ವಶಕ್ಕೆ ಪಡೆದಿದ್ದಾರೆ. ಯಾರ್ಡ್ ನಲ್ಲಿ ಟ್ಯಾಂಕರ್ ಗಳಿಂದ ಡೀಸೆಲ್‌ ಕಳವು ಮಾಡುತ್ತಿರುವ ಬಗ್ಗೆ ದೂರು ನೀಡಲಾಗಿತ್ತು.

Surathkal four diesel thieves arrested by Mangalore police.