ಬ್ರೇಕಿಂಗ್ ನ್ಯೂಸ್
16-01-25 03:10 pm HK News Desk ಕ್ರೈಂ
ಬೀದರ್ , ಜ 16: ಬೆಳ್ಳಬೆಳಗ್ಗೆ ನಗರದಲ್ಲಿ ಗುಂಡಿನ ದಾಳಿ ನಡೆದಿದೆ. ಎಟಿಎಂಗೆ ಹಣ ಹಾಕಲು ಸಿಎಂಎಸ್ ಎಜೆನ್ಸಿ ಎಂಬ ಖಾಸಗಿ ಸಂಸ್ಥೆಯ ಸಿಬ್ಬಂದಿಗಳು ವಾಹನದಲ್ಲಿ ಬಂದಿದ್ದಾಗ ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ಬಂದು ಗುಂಡು ಹಾರಿಸಿದ್ದಾರೆ.
ಎಟಿಎಂಗೆ ಹಣ ಹಾಕಲು ಬಂದ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ, ಗುಂಡು ಹಾರಿಸಿ ಹಣದ ಸಮೇತ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ. ಗುಂಡಿನ ದಾಳಿ ಪರಿಣಾಮ ಇಬ್ಬರು ಎಸ್‌ಬಿಐ ಬ್ಯಾಂಕ್ ಸಿಬ್ಬಂದಿಗಳು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.
ಘಟನೆಯಲ್ಲಿ ಎಟಿಎಂಗೆ ಹಣ ತುಂಬುತ್ತಿದ್ದ ವ್ಯವಸ್ಥಾಪಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೋರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಮೃತರನ್ನು ಗಿರಿ ವೆಂಕಟೇಶ್ ಮತ್ತು ಶಿವ ಕಾಶಿನಾಥ್ ಎಂದು ಪೊಲೀಸರು ಗುರುತಿಸಿದ್ದಾರೆ. ಇಬ್ಬರು CMS ಏಜೆನ್ಸಿಯ ಸಿಬ್ಬಂದಿಯಾಗಿದ್ದರು.
ಕಣ್ಣಿಗೆ ಖಾರದ ಪುಡಿ ಎರಚಿ ಹಣ ಕದ್ದು ಖದೀಮರು ಪರಾರಿ ;
ಏಜೆನ್ಸಿಯ ಸಿಬ್ಬಂದಿಗಳು ಎಟಿಎಂಗೆ ದುಡ್ಡು ಹಾಕಲು ಪಿಎಸ್‌ಸಿ ವಾಹನದಲ್ಲಿ ಲಕ್ಷಾಂತರ ರೂ. ಹಣ ತಂದಿದ್ದರು. 93 ಲಕ್ಷ ಹಣ ಡ್ರಾ ಮಾಡಿ ಬೇರೆ ಎಟಿಎಂಗೆ ತುಂಬುವಾಗ ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿದೆ. ಐದು ಸುತ್ತಿನ ಗುಂಡಿನ ದಾಳಿ ನಡೆದ ಬಳಿಕ, ಸಿಬ್ಬಂದಿಯ ಕಣ್ಣಿಗೆ ಖಾರದ ಪುಡಿ ಎರಚಿ ಹಣ ತೆಗೆದುಕೊಂಡು ಖದೀಮರು ಪರಾರಿಯಾಗಿದ್ದಾರೆ.
ಎಸ್‌ಬಿಐ ಮುಖ್ಯ ಕಚೇರಿ ಮುಂದೆ ಗುಂಡಿನ ದಾಳಿ ;
ಬೀದರ್‌ನ ಎಸ್‌ಬಿಐ ಮುಖ್ಯ ಕಚೇರಿ ಮುಂದೆ ಗುಂಡಿನ ದಾಳಿ ನಡೆದಿದ್ದು, ಬ್ಯಾಂಕ್ ಕಚೇರಿಯ ಮುಂದೆಯೇ ಮೃತದೇಹ ಬಿದ್ದಿದೆ. ಸ್ಥಳಕ್ಕೆ ಬೀದರ್ ಎಸ್‌ಪಿ ಪ್ರದೀಪ್ ಗುಂಟಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನ ದಳದ ಆಗಮಿಸಿದ್ದು, ಪೊಲೀಸರು ಪ್ರತಿಯೊಂದನ್ನು ಪರಿಶೀಲನೆ ಮಾಡುತ್ತಿದ್ದಾರೆ. ಸ್ಥಳದಲ್ಲಿ ಜಮಾಯಿಸಿರುವ ಜನರನ್ನು ಪೊಲೀಸರು ಚದುರಿಸುತ್ತಿದ್ದಾರೆ.
ಎಟಿಎಂ ಹಣ ತುಂಬಲು ವಾಹನದ ಡೋರ್ ತೆಗೆಯುತ್ತಿದ್ದಂತೆ ಅಟ್ಯಾಕ್ ;
ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲೇ ಇರುವ ಎಸ್‌ಬಿಐ ಬ್ಯಾಂಕ್‌ನ ಎದುರು ಈ ಘಟನೆ ನಡೆದಿದೆ. ಎಟಿಎಂಗೆ ಹಣ ಹಾಕುವ ಪಿಸಿಎಸ್ ಏಜೆನ್ಸಿಯ ಸಿಬ್ಬಂದಿ ಬ್ಯಾಂಕ್‌ನ ಎದುರುಗಡೆ ಬಂದು ತಮ್ಮ ವಾಹನ ನಿಲ್ಲಿಸಿ, ಎಟಿಎಂ ಹಣ ತುಂಬಲು ವಾಹನದ ಡೋರ್ ತೆಗೆಯುತ್ತಿದ್ದಂತೆ ಅವರ ಮೇಲೆ ಐದು ಸುತ್ತು ಗುಂಡಿನ ದಾಳಿಯಾಗಿದೆ.
ಈ ವೇಳೆ ಸಿಬ್ಬಂದಿಯ ಕಣ್ಣಿಗೆ ಖಾರದ ಪುಡಿಯನ್ನೂ ಎರಚಲಾಗಿದೆ. ದಾಳಿ ನಡೆದ ಬಳಿಕ ಹಣದ ಬಾಕ್ಸ್ ತೆಗೆದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಾಯಗೊಂಡಿರುವ ಇನ್ನೊಬ್ಬ ಸಿಬ್ಬಂದಿಯ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ವರದಿಯಾಗಿದೆ.
Bidar SBI Bank robbery, Burglars open fire on ATM cash depositors; two killed, 92 lakh cash looted. The deceased are identified as Girish and Venkatesh. They had arrived at the main branch of Bidar in the van to deposit cash into the ATM machine, during which two robbers who came on the bike opened fire and shot the employees.
15-01-25 09:17 pm
HK News Desk
ಮುಡಾ ಪ್ರಕರಣ ; ಸಿಬಿಐ ತನಿಖೆ ಕೋರಿದ್ದ ಅರ್ಜಿ ಜ.27ಕ...
15-01-25 08:22 pm
Dolly Chaiwala, Mangalore; ಅಮೆರಿಕದ ಬಿಲ್ ಗೇಟ್ಸ...
15-01-25 06:37 pm
Minister Zameer Ahmed, Bangalore; ಹಸು ಕೆಚ್ಚಲು...
15-01-25 06:21 pm
Keonics, Priyank Kharge; ದಯಾಮರಣಕ್ಕಾಗಿ ರಾಷ್ಟ್ರ...
15-01-25 12:19 pm
16-01-25 04:24 pm
HK News Desk
Bonnie Blue: 12 ಗಂಟೆಯಲ್ಲಿ 1,000ಕ್ಕೂ ಅಧಿಕ ಪುರು...
15-01-25 10:51 pm
Mallikarjun Kharges, L N T chairman: ಕಾಂಗ್ರೆಸ...
15-01-25 10:06 pm
ಮಹಾ ಕುಂಭ ಮೇಳಕ್ಕೆ ಗೂಗಲ್ ಪುಷ್ಪ ವೃಷ್ಟಿ ! ಮೊಬೈಲ್...
14-01-25 07:18 pm
Mahakumbh 2025: ಮಹಾ ಕುಂಭ ಮೇಳದಲ್ಲಿ ಭಾರತ ದರ್ಶನ...
13-01-25 10:49 pm
16-01-25 03:54 pm
Mangalore Correspondent
Mangalore, MP Brijesh Chowta: ಪಾಕಿಸ್ತಾನಕ್ಕೆ ಜ...
16-01-25 12:58 pm
Udupi Yakshagana News, Police ಅನುಮತಿ ಇಲ್ಲದೆ ರ...
15-01-25 10:47 pm
Banner, Nalin Kumar Kateel, D V Sadananda Gow...
15-01-25 08:01 pm
Mangalore crime, Jail; ಮಂಗಳೂರಿನ ಜೈಲಿನಲ್ಲಿ ಕೈದ...
15-01-25 12:09 pm
16-01-25 03:10 pm
HK News Desk
Fake Stock Market scam, Mangalore, Police: ನಕ...
15-01-25 11:06 pm
Kerala rape News: ಇನ್ಸ್ಟಾಗ್ರಾಂನಲ್ಲಿ ಪರಿಚಯ, ರ...
14-01-25 10:40 pm
Mangalore crime, Diesel thieves: ಸುರತ್ಕಲ್ ; ಟ...
14-01-25 04:47 pm
Mangalore, Tannirbhavi beach, crime: ತಣ್ಣೀರುಬ...
13-01-25 03:30 pm