ಬ್ರೇಕಿಂಗ್ ನ್ಯೂಸ್
17-01-25 02:48 pm HK News Desk ಕ್ರೈಂ
ಹೈದರಾಬಾದ್/ಬೀದರ್, ಜ 17: ಬೀದರ್ನಲ್ಲಿ ಗುರುವಾರ ಬೆಳಗ್ಗೆ ಎಟಿಎಂಗೆ ಹಣ ತುಂಬಿಸುವ ಬ್ಯಾಂಕ್ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಗಳು ಹೈದರಾಬಾದ್ನಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಹಿಡಿಯುವ ವೇಳೆ ಮತ್ತೆ ಗುಂಡು ಹಾರಿಸಿದ್ದಾರೆ.
ಬೀದರ್ನಲ್ಲಿ ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಎಟಿಎಂಗೆ ಹಣ ತುಂಬಿಸಲು ಬ್ಯಾಂಕ್ ಸಿಬ್ಬಂದಿ ತೆರಳಿದ್ದಾಗ, ದರೋಡೆಕೋರರು ಗುಂಡು ಹಾರಿಸಿ ಓರ್ವನನ್ನು ಕೊಂದು ಹಣದ ಸಮೇತ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಬೆನ್ನುಬಿದ್ದಿದ್ದ ಪೊಲೀಸರು, ಸುಳಿವು ಆಧರಿಸಿ ಹೈದರಾಬಾದ್ನಲ್ಲಿ ಶೋಧ ನಡೆಸುತ್ತಿರುವ ವೇಳೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಅಲ್ಲಿಯೂ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಬಸ್ ಟ್ರಾವೆಲ್ ಮ್ಯಾನೇಜರ್ ಗಾಯಗೊಂಡಿದ್ದಾರೆ.
ರಾಯಪುರಕ್ಕೆ ಎಸ್ಕೇಪ್ ಪ್ಲಾನ್:
ಬೀದರ್ನಲ್ಲಿ ಹಣ ದೋಚಿಕೊಂಡು ಬಂದಿದ್ದ ಆರೋಪಿಗಳು ಹೈದರಾಬಾದ್ ಮೂಲಕ ಛತ್ತೀಸ್ಗಢದ ರಾಯಪುರಕ್ಕೆ ಪರಾರಿಯಾಗಲು ಯೋಜನೆ ರೂಪಿಸಿದ್ದರು. ಇದಕ್ಕಾಗಿ ಮೂವರು ದುಷ್ಕರ್ಮಿಗಳು ಖಾಸಗಿ ಬಸ್ ಟ್ರಾವೆಲ್ನಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಸಂಜೆ 7.30 ಕ್ಕೆ ಬಸ್ ಹೊರಡಬೇಕಿತ್ತು. ಅದಕ್ಕೂ ಮೊದಲು ಆರೋಪಿಗಳನ್ನು ಟ್ರಾವೆಲ್ ಏಜೆನ್ಸಿ ಅವರನ್ನು ಪಿಕಪ್ ಮಾಡಿದ್ದಾರೆ.
ಈ ವೇಳೆ ಆರೋಪಿಗಳ ಲಗೇಜ್ ಅನ್ನು ಬಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಗ್ಗಳಲ್ಲಿ ಭಾರೀ ಪ್ರಮಾಣದಲ್ಲಿ ಹಣ ಕಂಡು ಬಂದಿದೆ. ಇದನ್ನು ಸಿಬ್ಬಂದಿ ಪ್ರಶ್ನಿಸಿದಾಗ ಅವರಿಗೇ ಸ್ವಲ್ಪ ಹಣ ನೀಡಲು ಮುಂದಾಗಿದ್ದಾರೆ. ಈ ವೇಳೆ, ಅದೇ ಪಿಕಪ್ ವ್ಯಾನ್ನಲ್ಲಿ ಇದ್ದ ಕರ್ನಾಟಕ ಪೊಲೀಸರು ಇದನ್ನ ಗಮನಿಸಿದ್ದಾರೆ. ಪೊಲೀಸರು ಎಂದು ತಿಳಿದ ತಕ್ಷಣವೇ ಆರೋಪಿಗಳು ತಮ್ಮ ಬ್ಯಾಗ್ನಲ್ಲಿದ್ದ ಬಂದೂಕುಗಳಿಂದ ಗುಂಡು ಹಾರಿಸಿದ್ದಾರೆ. ಇದರಿಂದ ಟ್ರಾವೆಲ್ ಏಜೆನ್ಸಿ ಮ್ಯಾನೇಜರ್ ಹೊಟ್ಟೆಗೆ ಬುಲೆಟ್ ಹೊಕ್ಕಿದೆ. ಸ್ಥಳದಲ್ಲಿದ್ದ ಮತ್ತೊಬ್ಬರಿಗೂ ಗಾಯವಾಗಿದೆ. ತಪ್ಪಿಸಿಕೊಂಡವರ ಬಂಧನಕ್ಕೆ ಹೈದರಾಬಾದ್ ಪೊಲೀಸರು ತೀವ್ರ ಪ್ರಯತ್ನ ಆರಂಭಿಸಿದ್ದಾರೆ.
ಕರ್ನಾಟಕವನ್ನೇ ನಡುಗಿಸುತ್ತಿದೆಯಾ ಅದೊಂದು ಗ್ಯಾಂಗ್?
ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಮತ್ತೊಂದು ವಿಚಾರ ಮುನ್ನೆಲೆಗೆ ಬಂದಿದೆ. ಬೀದರ್ನಲ್ಲಿ ನಡೆದ ದರೋಡೆಗೂ ಬೆಂಗಳೂರಿನಲ್ಲಿ 2023ರ ಅಕ್ಟೋಬರ್ನಲ್ಲಿ ನಡೆದಿದ್ದ ರಾಬರಿಗೂ ಸಾಮ್ಯತೆ ಕಾಣಿಸಿಕೊಂಡಿದೆ. ಬ್ಯಾಡರಹಳ್ಳಿಯಲ್ಲೂ ಎರಡು ವರ್ಷಗಳ ಹಿಂದೆ ಇಂತಹದ್ದೇ ಕೃತ್ಯ ನಡೆದಿತ್ತು. ಚಿನ್ನಾಭರಣ ಮಾಲೀಕನ ಮೇಲೆ ಗುಂಡು ಹಾರಿಸಿದ್ದ ದುಷ್ಕರ್ಮಿಗಳು 1 ಕೆ.ಜಿ ಚಿನ್ನ ಕದ್ದೊಯ್ದಿದ್ದರು. ಈ ಪ್ರಕರಣದ ಆರೋಪಿಗಳ ಸಣ್ಣ ಸುಳಿವು ಕೂಡ ಈವರೆಗೆ ಸಿಕ್ಕಿಲ್ಲ. ಹೀಗಾಗಿ ಇದೇ ಗ್ಯಾಂಗ್ನಿಂದಲೇ ಬೀದರ್ನಲ್ಲಿ ದರೋಡೆ ನಡೆಯಿತೇ ಎಂಬ ಶಂಕೆ ಮೂಡಿದೆ.
ದರೋಡೆಕೋರ ಕೊಲೆಪಾತಕಿಗಳಿಗೆ ರಾಜ್ಯದ ಪೊಲೀಸರು ಬಲೆ ಬೀಸಿದ್ದಾರೆ. ಕಲಬುರಗಿಯ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಬೀದರ್ ಸಾಥ್ ಕೊಟ್ಟಿದ್ದಾರೆ. ಕಲಬುರಗಿಯ ಟೆಕ್ನಿಕಲ್ ಏಕ್ಸಪರ್ಟ್ಗಳು ಆರೋಪಿಗಳ ಮೊಬೈಲ್ ಟವರ್, ಸಿಸಿಟಿವಿ ಆಧರಿಸಿ ಆಪರೇಷನ್ ಶುರು ಮಾಡಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಆಗ್ತಿಲ್ಲ: ವಿಜಯೇಂದ್ರ
ಬೀದರ್ನಲ್ಲಿ ನಡೆದ ದರೋಡೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ದೇಶದಲ್ಲೇ ಇಂತಹ ಘಟನೆಗಳ್ಯಾವುವೂ ಆಗಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
On the run from Karnataka police after shooting two security guards and looting over Rs 90 lakh from an ATM cash vehicle in Bidar, two members of an interstate gang reached Afzalgunj in Hyderabad on Thursday evening. They opened fire at the police and a travel agent employee, injuring the latter, who was hospitalised.
22-07-25 11:10 pm
Bangalore Correspondent
GST Notices: ಜಿಎಸ್ಟಿ ತೆರಿಗೆ ನೋಟಿಸ್ ; ವ್ಯಾಪಾರಸ...
22-07-25 10:41 pm
GST Notice, Union Minister Pralhad Joshi: ರಾಜ...
22-07-25 10:30 pm
Mandya Bakery, Cake, Sealed: ಕಲರ್ ಫುಲ್ ಕೇಕ್ ನ...
22-07-25 03:02 pm
Dharmasthala Case, SIT, BJP: ಧರ್ಮಸ್ಥಳ ಪ್ರಕರಣ...
21-07-25 10:38 pm
22-07-25 07:21 pm
HK News Desk
Shashi Tharoor, Thiruvananthapuram: ಶಶಿ ತರೂರ್...
22-07-25 03:04 pm
ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ;...
22-07-25 12:58 pm
ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ, ಸಿಪಿಎಂ ಸ್ಥಾಪಕ...
21-07-25 11:23 pm
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
22-07-25 11:13 pm
Mangalore Correspondent
ಧರ್ಮಸ್ಥಳ ಕೇಸ್ ; ಸಹಾಯವಾಣಿ ಆರಂಭಿಸುವಂತೆ ರಾಜ್ಯ ಸರ...
22-07-25 10:57 pm
Mangalore Yathicorp AI: ಯತಿಕಾರ್ಪ್ ಸಂಸ್ಥೆಯಿಂದ...
22-07-25 09:42 pm
Mangalore Hotel Kodakkene Owner Suicide: ಹೊಟೇ...
22-07-25 01:27 pm
Mangalore Landslide, Permanki: ಕೆತ್ತಿಕಲ್ ರೀತಿ...
22-07-25 11:19 am
22-07-25 09:45 pm
Mangalore Correspondent
Kalaburagi Jewellery Robbery, Arrest: ಕಲಬುರಗಿ...
22-07-25 12:38 pm
BJP MLA Prabhu Chauhan Son, Rape; ಮದುವೆ ಆಗ್ತೀ...
21-07-25 11:01 pm
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm