ಬ್ರೇಕಿಂಗ್ ನ್ಯೂಸ್
18-01-25 10:47 pm Mangalore Correspondent ಕ್ರೈಂ
ಮಂಗಳೂರು, ಜ.18: ಕರಾವಳಿಯಲ್ಲಿ ಎಲ್ಲಿ ಕೇಳಿದರೂ ಕೋಟೆಕಾರು ಸಹಕಾರಿ ಬ್ಯಾಂಕಿನ ದರೋಡೆಯದ್ದೇ ಸುದ್ದಿ. ಹಗಲು ಹೊತ್ತಿನಲ್ಲೇ ಬ್ಯಾಂಕ್ ಕಚೇರಿಗೆ ನುಗ್ಗಿದ ದರೋಡೆಕೋರರು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದು ಜನರಲ್ಲಿ ಆತಂಕ ಮತ್ತು ನಾನಾ ರೀತಿಯ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಬ್ಯಾಂಕ್ ಒಳಗಿನ ಸಿಸಿಟಿವಿ ಸಂಪರ್ಕವನ್ನು ಕಡಿತ ಮಾಡಿರುವುದು, ಅದೇ ಸಂದರ್ಭದಲ್ಲಿ ಚಿನ್ನದ ಲಾಕರನ್ನು ತೆರೆದಿಟ್ಟಿದ್ದು ಮತ್ತು ಅಂತಹದ್ದೇ ಸಮಯ ನೋಡಿಕೊಂಡು ದರೋಡೆಕೋರರು ಎಂಟ್ರಿ ಕೊಟ್ಟಿದ್ದು ಒಂದಕ್ಕೊಂದು ಹೋಲಿಕೆ ಮೂಡಿಸಿದೆ.
ಹೀಗಾಗಿ ಈ ಕೃತ್ಯದಲ್ಲಿ ಬ್ಯಾಂಕ್ ಅಧಿಕಾರಿಗಳು ಮತ್ತು ಆಡಳಿತ ವರ್ಗದ್ದೇ ಕೈವಾಡ ಇದ್ದಿರಬಹುದೇ ಎನ್ನುವ ಸಂಶಯದ ಮಾತುಗಳು ಜನರ ಬಾಯಲ್ಲಿ ಹರಿದಾಡುತ್ತಿವೆ. ಸಿಸಿಟಿವಿಯಲ್ಲಿ ದೃಶ್ಯಗಳು ಚೂರು ಬ್ಲರ್ ಆಗಿ ಕಾಣುತ್ತಿತ್ತು ಎಂಬ ಒಂದೇ ಕಾರಣಕ್ಕೆ ಅದನ್ನು ರಿಪೇರಿ ಮಾಡಲು ಟೆಕ್ನೀಶಿಯನ್ ಕರೆಸಲಾಗಿತ್ತು. ಆತ ಮಧ್ಯಾಹ್ನ 12 ಗಂಟೆ ವೇಳೆಗೆ ಬ್ಯಾಂಕ್ ಕಚೇರಿಗೆ ಬಂದಿದ್ದು, ಕಚೇರಿಯೊಳಗೆ ರಿಪೇರಿ ಕೆಲಸದಲ್ಲಿ ತೊಡಗಿದ್ದ. ಇದೇ ವೇಳೆಗೆ, ಗ್ರಾಹಕರೊಬ್ಬರು ಬಂದಿದ್ದು, ಚಿನ್ನದ ಒಡವೆಯನ್ನು ಹಿಂಪಡೆಯುವುದಕ್ಕಾಗಿ ಸಿಬಂದಿ ಲಾಕರ್ ಓಪನ್ ಮಾಡಿದ್ದರು ಎನ್ನಲಾಗುತ್ತಿದೆ. ಅಂಥ ಹೊತ್ತಲ್ಲೇ ದರೋಡೆಕೋರರು ಒಳನುಗ್ಗಿರುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲದಾಗಿದೆ. ಹೀಗಾಗಿ ದರೋಡೆ ಕೃತ್ಯವೇ ಒಂದು ನಾಟಕ ಎನ್ನುವಂತಿದೆ, ಬ್ಯಾಂಕ್ ಸಿಬಂದಿ, ನಿರ್ದೇಶಕರ ಪಾತ್ರ ಇಲ್ಲದೆ ಈ ದರೋಡೆ ನಡೆಯೋಕೆ ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದಾರೆ, ಮಂಗಳೂರಿನ ಖ್ಯಾತ ಕ್ರಿಮಿನಲ್ ವಕೀಲ ಎಸ್.ಎಸ್ ಖಾಜಿ.
ಏಳು ವರ್ಷದ ಹಿಂದೆ ಇದೇ ಬ್ಯಾಂಕಿನ ಕೆ.ಸಿ ರೋಡ್ ಶಾಖೆಗೆ ಆಡಳಿತ ಮಂಡಳಿಯ ನಿರ್ದೇಶಕಿಯೊಬ್ಬರ ಪತಿಯೇ ಚಿನ್ನಾಭರಣ ದರೋಡೆಗೆ ಯತ್ನಿಸಿ ಸಿಕ್ಕಿಬಿದ್ದಿದ್ದ ಘಟನೆ ನಡೆದಿತ್ತು. ಪ್ರಕರಣದಲ್ಲಿ ಆರೋಪಿಗಳನ್ನ ಕ್ಷಿಪ್ರವಾಗಿ ಬಂಧಿಸಿದ್ದರೂ ಪ್ರತ್ಯಕ್ಷದರ್ಶಿ ಸಾಕ್ಷಿಯೊಬ್ಬ ದಿಢೀರ್ ಎನ್ನುವಂತೆ ಆತ್ಮಹತ್ಯೆ ಮಾಡಿಕೊಂಡಿದ್ದು ಮತ್ತು ಕೆಲವರ ಪ್ರಭಾವದಿಂದಾಗಿ ಕೇಸನ್ನು ಹಳ್ಳ ಹಿಡಿಸಲಾಗಿತ್ತು. ಆನಂತರ, ಬ್ಯಾಂಕಿಗೆ ಸೆಕ್ಯುರಿಟಿ ಹಾಕಿದ್ದರೂ ಹೆಚ್ಚು ದಿನ ಇರಲಿಲ್ಲ. ಈ ನಡುವೆ, ಕರೆಂಟ್ ಇಲ್ಲವೆಂದು ರಾತ್ರಿ ವೇಳೆ ಜನರೇಟರ್ ಆನ್ ಮಾಡಿ ಅದೇ ಕೋಣೆಯಲ್ಲಿ ಮಲಗಿದ್ದರಿಂದ ಮೂವರು ಸೆಕ್ಯುರಿಟಿ ಸಿಬಂದಿ ದುರಂತ ಸಾವು ಕಂಡ ಘಟನೆಯೂ ನಡೆದಿತ್ತು. ಆನಂತರ, ಕೋಟೆಕಾರು ಬ್ಯಾಂಕಿನ ಕೆಸಿ ರೋಡ್ ಶಾಖೆಯ ಕಚೇರಿಯನ್ನು ಅಲ್ಲಿಯೇ ಪಕ್ಕದ ಕಟ್ಟಡದ ಮೇಲಂತಸ್ತಿಗೆ ಸ್ಥಳಾಂತರ ಮಾಡಲಾಗಿತ್ತು. ಕೋಟ್ಯಂತರ ಮೌಲ್ಯದ ಚಿನ್ನಾಭರಣ ಇದ್ದರೂ, ಪೂರ್ಣಕಾಲಿಕ ಸೆಕ್ಯುರಿಟಿ ನೇಮಕ ಮಾಡಿರಲಿಲ್ಲ. ರಾತ್ರಿಗೆ ಮಾತ್ರ ಸೆಕ್ಯುರಿಟಿ ಇಟ್ಟುಕೊಂಡಿದ್ದಾರೆ.
ಬ್ಯಾಂಕ್ ಸಿಬಂದಿ ಮತ್ತು ಆಡಳಿತ ವರ್ಗ ಹೇಳುವ ಪ್ರಕಾರ, ಲಾಕರಿನಲ್ಲಿ 15 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನದೊಡವೆಗಳಿದ್ದವು. ಅದರಿಂದ 12 ಬಾಕ್ಸ್ ಗಳಲ್ಲಿ ಇಟ್ಟಿದ್ದ ಚಿನ್ನವನ್ನು ದರೋಡೆಕೋರರು ಎಗರಿಸಿದ್ದಾರೆ. ಇನ್ನೂ ಎಂಟು ಬಾಕ್ಸ್ ಗಳಲ್ಲಿ ಚಿನ್ನ ಇದ್ದರೂ, ತರಾತುರಿಯಲ್ಲಿ ಅದನ್ನು ಬಿಟ್ಟು ಹೋಗಿದ್ದಾರೆ. ಒಟ್ಟು ಹತ್ತು ಕೋಟಿಗೂ ಹೆಚ್ಚು ಚಿನ್ನ ಹೋಗಿರಬಹುದೆಂದು ಬ್ಯಾಂಕಿನ ನಿರ್ದೇಶಕರೇ ಹೇಳುತ್ತಿದ್ದಾರೆ. ಅಲ್ಲದೆ, ಖಚಿತವಾಗಿ ನಾವು ಲೆಕ್ಕ ಹಾಕಿದ ಬಳಿಕವಷ್ಟೇ ಸಿಗಬೇಕು. ಈಗ ಪೊಲೀಸರೇ ಒಳಗಡೆ ತಪಾಸಣೆ ನಿರತರಾಗಿದ್ದಾರೆ. ನಮ್ಮನ್ನು ಲೆಕ್ಕ ಮಾಡಲು ಬಿಟ್ಟಿಲ್ಲ ಎನ್ನುತ್ತಿದ್ದಾರೆ. ಆದರೆ ಪೊಲೀಸರು ಹೋಗಿದ್ದು ಬರೀ ನಾಲ್ಕು ಕೋಟಿ ಎಂದು ಕಡಿಮೆ ತೋರಿಸಿದ್ದಾರೆ. ಇಲ್ಲಿ ಉಳ್ಳಾಲ ಇನ್ಸ್ ಪೆಕ್ಟರ್ ದರೋಡೆಯಲ್ಲೂ ಕೃಷ್ಣನ ಲೆಕ್ಕಾಚಾರ ಮಾಡಿರುವಂತಿದೆ. ಪ್ರಕರಣದ ಪತ್ತೆಗಾಗಿ ಐದು ಪೊಲೀಸ್ ತಂಡಗಳನ್ನು ರಚಿಸಿದ್ದರೂ, ಈವರೆಗೂ ಯಾವುದೇ ಕ್ಲೂ ಪಡೆಯಲು ಸಾಧ್ಯವಾಗಿಲ್ಲ. ಸಿಂಗಾರಿ ಬೀಡಿ ಮಾಲೀಕನ ದರೋಡೆಯಲ್ಲೂ ತಿಂಗಳು ಕಳೆದರೂ ಸಣ್ಣ ಸುಳಿ ಹಿಡಿಯೋದಕ್ಕೂ ಆಗಿಲ್ಲ.
ವಿಶೇಷ ಅಂದ್ರೆ, ಬ್ಯಾಂಕ್ ಸಿಬಂದಿಯ ಮೊಬೈಲನ್ನು ದರೋಡೆಕೋರರು ಎಗರಿಸಿದ್ದರು. ಮೂಲೆಯಲ್ಲಿದ್ದ ಟೆಕ್ನೀಶಿಯನ್ ಬಳಿಯಿದ್ದ ಮೊಬೈಲನ್ನು ಕೇಳಿ ಪಡೆದಿಲ್ವಂತೆ. ದರೋಡೆಕೋರರು ಒಳಗೆ ಬಂದವರೇ ಕೋವಿ, ಚೂರಿ ತೋರಿಸಿ ನಾವು ಏನೂ ಮಾಡುವುದಿಲ್ಲ, ನೀವು ಮಾತಾಡದೆ ಕುಳಿತುಕೊಳ್ಳಿ, ಮೊಬೈಲ್ ಕೊಟ್ಟುಬಿಡಿ ಎಂದು ಹೇಳಿದ್ದಾರೆ. ಅಲ್ಲಿದ್ದ ನಾಲ್ವರು ಮಹಿಳಾ ಮತ್ತು ಒಬ್ಬರು ಪುರುಷ ಸಿಬಂದಿ ತಮ್ಮ ಮೊಬೈಲ್ ಕೊಟ್ಟಿದ್ದಾರೆ. ಟೆಕ್ನೀಶಿಯನ್ ಸಂದೀಪ್ ಕೈಮುಗಿದು ತನ್ನ ಮೇಲೇನೂ ಮಾಡದಿರಿ ಎಂದು ಅಂಗಲಾಚಿದ್ದಾರೆ. ಆಗ ಅವರ ಕೈಯಲ್ಲಿದ್ದ ಉಂಗುರವನ್ನೂ ಕಿತ್ತುಕೊಂಡಿದ್ದಾರಂತೆ. ತನ್ನ ಕೈಲಿ ಮೊಬೈಲ್ ಇದ್ದರೂ, ಅದರಲ್ಲಿ ಪೊಲೀಸರಿಗೆ ರಿಂಗ್ ಮಾಡುವ ಧೈರ್ಯ ಮಾಡಿಲ್ಲ. ದರೋಡೆಕೋರರು ಹೊರಗೆ ಓಡಿದರೂ, ಹೊರಗೆ ಬಂದು ಬೊಬ್ಬೆ ಹಾಕುವ ಪ್ರಯತ್ನವನ್ನೂ ಮಾಡಿಲ್ಲ. ಕೇವಲ ಹತ್ತು ನಿಮಿಷದಲ್ಲಿ ಕೃತ್ಯ ಮುಗಿಸಿ ಹೋಗಿದ್ದಾರೆ ಎನ್ನುವುದೇ ದೊಡ್ಡ ಸಸ್ಪೆನ್ಸ್.
ಇದೇ ವೇಳೆ, ದರೋಡೆಗೆ ಬಳಸಿದ್ದ ಫಿಯೇಟು ಕಾರು ಕೇರಳ ಗಡಿಭಾಗ ತಲಪಾಡಿಯಲ್ಲಿ ಟೋಲ್ ಗೇಟ್ ಹಾದು ಹೋಗಿರುವುದಾಗಿ ಹೇಳಲಾಗುತ್ತಿದೆ. ಕಾರಿನ ಚಾಲಕ ನಗದು ಹಣ ಕೊಟ್ಟು ಅಲ್ಲಿಂದ ಮುಂದೆ ಸಾಗಿದ್ದಾನೆ. ಕಾರಿನಲ್ಲಿ ಬೇರೆ ಯಾರೂ ವ್ಯಕ್ತಿಗಳು ಕುಳಿತುಕೊಂಡ ರೀತಿ ಕಾಣುವುದಿಲ್ಲ. ಕಾರು ಸಾಗಿರುವುದು ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿದೆ. ಆದರೆ ಈ ಕಾರು ಮಂಜೇಶ್ವರ ದಾಟಿ ಉಪ್ಪಳ ವರೆಗೆ ಹೆದ್ದಾರಿಯಲ್ಲಿ ತಲುಪಿಲ್ಲ ಎನ್ನುವ ಮಾತೂ ಕೇಳಿಬರುತ್ತಿದೆ. ಈ ಕಾರು ಬೆಂಗಳೂರು ನೋಂದಣಿ ಹೊಂದಿದ್ದು ಅದು ನಕಲಿ ಎಂದು ಪೊಲೀಸರು ತಿಳಿಸಿದ್ದಾರೆ. ಆ ನಂಬರನ್ನು ಟ್ರೇಸ್ ಮಾಡಿದರೆ, ಬೆಂಗಳೂರು ನೋಂದಣಿಯ ಎರ್ಟಿಕಾ ಕಾರನ್ನು ತೋರಿಸುತ್ತದೆ ಎನ್ನುವ ಮಾಹಿತಿ ಪೊಲೀಸರದ್ದು. ಸಿಸಿಟಿವಿಯಲ್ಲಿ ಕಾರು ಬರುವುದಕ್ಕೂ ಮೊದಲು ಒಂದು ಬೈಕ್ ಬರುತ್ತದೆ, ಕೃತ್ಯದ ಬಳಿಕ ಕಾರಿನ ಹಿಂದೆಯೇ ಆತನೂ ಹೋಗುವುದು ದಾಖಲಾಗಿದೆ. ಹೀಗಾಗಿ ಇವೆಲ್ಲ ಪ್ರೀ ಪ್ಲಾನ್ಡ್ ಎನ್ನುವಂತಿದೆ.
19 ಕೋಟಿ ವಿಮೆ ಇದ್ಯಂತೆ, ಭಯ ಬೇಡ
ಕೋಟ್ಯಂತರ ಮೌಲ್ಯದ ಚಿನ್ನಾಭರಣ ಕಳವಾಗಿದ್ದರಿಂದ ಚಿಂತೆಗೆ ಬಿದ್ದ ಗ್ರಾಹಕರು ಶನಿವಾರ ಮುಂಜಾನೆಯಿಂದಲೇ ಬ್ಯಾಂಕ್ ಮುಂದೆ ಜಮಾಯಿಸಿದ್ದಾರೆ. ಬ್ಯಾಂಕ್ ಸಿಬಂದಿ, ಆಡಳಿತ ವರ್ಗದ ಮುಂದೆ ತಮ್ಮ ಚಿನ್ನಕ್ಕೇನು ಗ್ಯಾರಂಟಿ ಎಂದು ಅಳಲು ಹೇಳಿಕೊಂಡಿದ್ದಾರೆ. ಆದರೆ, ಬ್ಯಾಂಕಿನ ನಿರ್ದೇಶಕರು ನಮ್ಮ ಬ್ಯಾಂಕಿಗೆ 19 ಕೋಟಿ ಇನ್ಶೂರೆನ್ಸ್ ಇದೆ, ಏನೂ ಭಯ ಪಡುವ ಅಗತ್ಯವಿಲ್ಲ ಎಂದು ಸಂತೈಸುವ ಮಾತನ್ನಾಡಿದ್ದಾರೆ. ನಾವು ಗ್ರಾಹಕರು ಅಡವಿಟ್ಟ ಚಿನ್ನಾಭರಣಕ್ಕೆ ಮಾರುಕಟ್ಟೆ ಮೌಲ್ಯದ ಎಂಭತ್ತು ಶೇಕಡಾದಷ್ಟು ಮೊತ್ತವನ್ನು ಸಾಲ ಕೊಟ್ಟಿದ್ದೇವೆ. ಹಾಗಾಗಿ ಗ್ರಾಹಕರಿಗೆ ಇಪ್ಪತ್ತು ಶೇಕಡ ಹಣ ಪಾವತಿಸಲು ಬಾಕಿ ಇರೋದು. ಅಡವಿಟ್ಟ ಚಿನ್ನಾಭರಣಕ್ಕೆ 19 ಕೋಟಿ ರೂಪಾಯಿ ವಿಮೆ ಇದೆ. ಭಯ ಪಡುವ ಅಗತ್ಯವಿಲ್ಲ. ಅಪಪ್ರಚಾರಕ್ಕೆ ಕಿವಿ ಕೊಡಬೇಡಿ ಎಂದು ಬ್ಯಾಂಕಿನ ಅಧ್ಯಕ್ಷ ಕೋಟೆಕಾರು ಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಗ್ರಾಹಕರು ತಮ್ಮ ಅಮೂಲ್ಯ ಒಡವೆಗಳಲ್ಲಿ ಭಾವನಾತ್ಮಕ ಸಂಬಂಧ ಹೊಂದಿದ್ದು ಕಷ್ಟ ಕಾಲದ ನೆರವಿಗಾಗಿ ಅದನ್ನ ಅಡವಿಡುತ್ತಾರೆಯೇ ಹೊರತು ಒಡವೆಗಳನ್ನ ಕಳಕೊಳ್ಳಲು ಯಾರೂ ಇಷ್ಟಪಡಲ್ಲ. ಬ್ಯಾಂಕ್ ಆಡಳಿತದವರು ಗಾಬರಿಗೊಳ್ಳಬೇಡಿ ಅಂದಾಕ್ಷಣಕ್ಕೆ ಗ್ರಾಹಕರು ಸಮಾಧಾನರಾಗಲ್ಲ. ಕೋಟಿಗಟ್ಟಲೆ ಮೌಲ್ಯದ ಒಡವೆಗಳಿಗೆ ಕನಿಷ್ಠ ರಕ್ಷಣೆಯನ್ನೂ ನೀಡದೇ ಇರೋದರ ಬಗ್ಗೆ ಕೋಟೆಕಾರು ಸಹಕಾರಿ ಸಂಘದ ಆಡಳಿತದವರು ವಿಷಾದ ವ್ಯಕ್ತಪಡಿಸಿಲ್ಲ. ಬ್ಯಾಂಕ್ ಆಡಳಿತದ ನಿರ್ಲಕ್ಷ್ಯಕ್ಕೆ ವಿಮಾ ಕಂಪನಿಯವರು ಪರಿಹಾರ ನೀಡುವರೇ ಎಂಬುದನ್ನ ಕಾದು ನೋಡಬೇಕಿದೆ.
Mangalore Kotekar bank robbery, more than 10 crores gold looted, bank assures customers of insurance. Following the armed robbery at the Kotekar Vyavasaaya Seva Sahakaari Bank’s K C Road branch in Ullal on Friday, the police have formed five teams to nab the accused. The police are also checking CCTV footage from near the bank to establish the identities of the robbers.
13-03-25 02:56 pm
HK News Desk
Karwar, Honnavar, Cow Slaughter, Crime; ಗರ್ಭ...
13-03-25 12:32 pm
Madikeri Earthquake: ಮಡಿಕೇರಿಯಲ್ಲಿ ಲಘು ಭೂಕಂಪನ...
13-03-25 11:57 am
Pramod Muthalik, Love Jihad: ವೇಶ್ಯಾವಾಟಿಕೆ, ಭಯ...
12-03-25 03:51 pm
Mangalore Chakravarti Sulibele, Prakash Raj:...
11-03-25 06:19 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
13-03-25 09:20 pm
Mangalore Correspondent
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
Mangalore News, crime, Suicide: ಉತ್ತರ ಪ್ರದೇಶ...
13-03-25 10:08 am
Mangalore rain, Heat wave: ಮಂಗಳೂರು ನಗರಕ್ಕೆ ಸಿ...
12-03-25 11:10 pm
Diganth Missing case, Reunite with family: 17...
12-03-25 10:16 pm
13-03-25 06:44 pm
Mangalore Correspondent
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm
Bangalore Suicide, Bank Staff, Crime; ಹಿರಿಯ ಅ...
09-03-25 03:06 pm