Udupi crime, Assult: ಸಾಲ ತೀರಿಸದ ಕೋಪದಲ್ಲಿ ಯಕ್ಷಗಾನ ಕಲಾವಿದನಿಗೆ ಬಾರುಕೋಲಿನಲ್ಲಿ ಹೊಡೆದು ಹಲ್ಲೆ ; ಸಸಿಹಿತ್ಲು ಮೇಳದ ಕಲಾವಿದನಿಗೆ ಪಾವಂಜೆ ಮೇಳದ ಕಲಾವಿದನಿಂದ ಹಲ್ಲೆ ! 

24-01-25 04:28 pm       Udupi Correspondent   ಕ್ರೈಂ

ಸಾಲ ತೀರಿಸಿಲ್ಲ ಎಂಬ ಕೋಪದಲ್ಲಿ ಯಕ್ಷಗಾನ ಕಲಾವಿದರೊಬ್ಬರ ಮೇಲೆ ಇನ್ನೊಬ್ಬ ಕಲಾವಿದ ಸೇರಿ ಮೂವರು ಬಾರುಕೋಲಿನಲ್ಲಿ ಹೊಡೆದು ಹಲ್ಲೆಗೈದ ಘಟನೆ ನಡೆದಿದ್ದು, ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಉಡುಪಿ, ಜ.24: ಸಾಲ ತೀರಿಸಿಲ್ಲ ಎಂಬ ಕೋಪದಲ್ಲಿ ಯಕ್ಷಗಾನ ಕಲಾವಿದರೊಬ್ಬರ ಮೇಲೆ ಇನ್ನೊಬ್ಬ ಕಲಾವಿದ ಸೇರಿ ಮೂವರು ಬಾರುಕೋಲಿನಲ್ಲಿ ಹೊಡೆದು ಹಲ್ಲೆಗೈದ ಘಟನೆ ನಡೆದಿದ್ದು, ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪಡುಬಿದ್ರಿ ನಡ್ಸಾಲು ಗ್ರಾಮದ ನಿತಿನ್ ಆಚಾರ್ಯ(31) ಹಲ್ಲೆಗೆ ಒಳಗಾಗಿರುವ ಕಲಾವಿದ. ಸಚಿನ್‌ ಅಮೀನ್‌ ಉದ್ಯಾವರ, ಆತನ ತಂದೆ ಕುಶಾಲಣ್ಣ ಹಾಗೂ ಇನ್ನೋರ್ವ ಫೈನಾನ್ಶಿಯರ್‌ ಹಲ್ಲೆ ಮಾಡಿದವರು. ಸಸಿಹಿತ್ಲು ಶ್ರೀ ಭಗವತಿ ಯಕ್ಷಗಾನ ಮೇಳದ ಕಲಾವಿದರಾಗಿರುವ ನಿತಿನ್ ಆಚಾರ್ಯ, ತನ್ನ ಸ್ನೇಹಿತ ಪಾವಂಜೆ ಮೇಳದ ಕಲಾವಿದ ಸಚಿನ್‌ ಬಳಿಯಿಂದ 2020ರಲ್ಲಿ ಬಡ್ಡಿಗೆ ಸಾಲ ಪಡೆದುಕೊಂಡು ಅಸಲು ಹಾಗೂ ಬಡ್ಡಿ ಕಟ್ಟುತ್ತಿದ್ದರು. ಪಡೆದ ಸಾಲ ಹಿಂದಿರುಗಿಸಿಲ್ಲ ಎನ್ನುವ ಕಾರಣಕ್ಕೆ ನಿತಿನ್‌ನನ್ನು ಆರೋಪಿ ಸಚಿನ್‌, ಆತನ ತಂದೆ ಕುಶಾಲಣ್ಣ ಹಾಗೂ ಇನ್ನೋರ್ವ ಸೇರಿ ಉದ್ಯಾವರದ ಮನೆಯೊಂದರಲ್ಲಿ ಜನವರಿ 21ರಂದು ಕಂಬಳದ ಕೋಣಗಳಿಗೆ ಹೊಡೆಯುವ ಬಾರುಕೋಲಿನಲ್ಲಿ ಹೊಡೆದು ಹಲ್ಲೆಗೈದಿದ್ದರು.

ಬೆತ್ತದಿಂದ ನಿತಿನ್‌ ಅವರ ಬೆನ್ನು, ಕಾಲಿಗೆ ಹೊಡೆದು ಕಾಲಿನಿಂದ ತುಳಿದು ಖಾಲಿ ಬಾಂಡ್‌ ಪೇಪರ್‌ಗೆ ಬಲಾತ್ಕಾರವಾಗಿ ಸಹಿ ಪಡೆದಿದ್ದಾರೆ. ಬಳಿಕ ಸಂಜೆಯ ವೇಳೆಗೆ ವಾಪಸು ಪಡುಬಿದ್ರಿಗೆ ಆರೋಪಿಗಳೇ ಕಳುಹಿಸಿಕೊಟ್ಟಿದ್ದಾರೆ. ಬೆನ್ನಿಗೆ ಬಿದ್ದ ಏಟಿನ ಗಾಯದ ನಡುವೆಯೂ ಜನವರಿ 21ರ ರಾತ್ರಿ ಪುತ್ತೂರಿನಲ್ಲಿ ನಡೆದ ಯಕ್ಷಗಾನಕ್ಕೆ ಹೋಗಿ ಅಲ್ಲಿ ನರ್ತನ ಮಾಡಿದ್ದರು. ಜನವರಿ 22ರಂದು ಬೆಳಗ್ಗೆ ನೋವು ಜಾಸ್ತಿಯಾದ್ದರಿಂದ ಪಡುಬಿದ್ರೆ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A case has been registered at the Padubidri police station after a Yakshagana artiste was physically assaulted by three individuals over an alleged failure to repay a loan. The victim, Nithin Kumar from Sasihitlu Mela, is a resident of Padubidri. The accused include Sachin Amin of Udyavara, his father Kushalanna, and another financier.