ಬ್ರೇಕಿಂಗ್ ನ್ಯೂಸ್
24-01-25 10:27 pm Mangalore Correspondent ಕ್ರೈಂ
ಉಳ್ಳಾಲ, ಜ.24 : ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಕಾಲಕ್ಕಾಡ್ ಗ್ರಾಮದಲ್ಲಿ ದರೋಡೆಗೈದ ಚಿನ್ನವನ್ನು ಬಚ್ಚಿಟ್ಟಿದ್ದ ಷಣ್ಮುಗಂ ಸುಂದರಮ್ (62) ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧಿಸಿ ಇತರೇ ಆರೋಪಿಗಳ ಪತ್ತೆಗಾಗಿ ಮಂಗಳೂರು ಪೊಲೀಸರು ತಮಿಳುನಾಡಿನಲ್ಲಿ ಬೀಡು ಬಿಟ್ಟಿದ್ದಾರೆ. ಮೂವರ ಬಂಧನ ಬಳಿಕ ದರೋಡೆಗೈದ ಚಿನ್ನಾಭರಣದ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಈ ನಡುವೆ, ದರೋಡೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಮುರುಗಂಡಿ ದೇವರ್ ಮನೆಯಲ್ಲಿ ಶೋಧ ನಡೆಸಿದ್ದು 16.250 ಕೆ.ಜಿ ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ. ಷಣ್ಮುಗಂ ಈಗಾಗಲೇ ಬಂಧಿತನಾಗಿರುವ ಮುರುಗಂಡಿ ದೇವರ್ ತಂದೆಯಾಗಿದ್ದು ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನವನ್ನು ಪೊಲೀಸರು ವಶಪಡಿಸಿರುವುದಾಗಿ ತಿಳಿದುಬಂದಿದೆ. ಷಣ್ಮುಗಂ ಸುಂದರಮ್ ದರೋಡೆ ಪ್ರಕರಣದಲ್ಲಿ ನೇರವಾಗಿ ಭಾಗವಹಿಸದೆ ಆರೋಪಿಗಳಿಗೆ ಸಹಕರಿಸಿರುವುದಾಗಿ ಹೇಳಲಾಗಿದೆ.


ಶುಕ್ರವಾರ ಮಧ್ಯಾಹ್ನವೇ ಆರೋಪಿಗಳ ಸ್ಥಳ ಮಹಜರು
ಇದೇ ವೇಳೆ, ಕೋಟೆಕಾರು ಸಹಕಾರಿ ಸಂಘದ ಕೆ.ಸಿ ರೋಡ್ ಶಾಖೆಯ ದರೋಡೆ ಪ್ರಕರಣಕ್ಕೆ ವಾರ ಪೂರೈಕೆಯಾಗಿದ್ದು, ಪ್ರಕರಣದ ರೂವಾರಿಗಳು ತಮಿಳುನಾಡಿನಲ್ಲಿ ಬಂಧಿತರಾಗಿ ಉಳ್ಳಾಲ ಪೊಲೀಸರ ಕಸ್ಟಡಿಯಲ್ಲಿರುವ ಮುರುಗಂಡಿ ದೇವರ್ ಮತ್ತು ಯೋಶುವಾ ರಾಜೇಂದ್ರನ್ ಅವರನ್ನು ಪೊಲೀಸರು ಶುಕ್ರವಾರ ಮಧ್ಯಾಹ್ನದಂದೇ ಬಿಗಿ ಬಂದೋಬಸ್ತಿನಲ್ಲಿ ದರೋಡೆ ನಡೆದಿದ್ದ ಸ್ಥಳಕ್ಕೆ ಕರೆದೊಯ್ದು ಮಹಜರು ಮಾಡಿದ್ದಾರೆ.
ಇಬ್ಬರನ್ನು ಉಳ್ಳಾಲ ಪೊಲೀಸರು ಶುಕ್ರವಾರ ಮಧ್ಯಾಹ್ನ ದರೋಡೆ ನಡೆದಿದ್ದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆ.ಸಿ ರೋಡ್ ಶಾಖೆ ಮತ್ತು ದರೋಡೆಗೆ ಸ್ಕೆಚ್ ಹಾಕಲಾಗಿದ್ದ ಅಲಂಕಾರ ಗುಡ್ಡೆಯ ಖಾಸಗಿ ಪ್ರದೇಶಕ್ಕೆ ಕರೆದೊಯ್ದು ಸ್ಥಳ ಮಹಜರು ಮಾಡಿದ್ದಾರೆ. ಕಳೆದ ಶುಕ್ರವಾರ ಆರೋಪಿಗಳು ಕೆ.ಸಿ ರೋಡಿನ ಬ್ಯಾಂಕನ್ನ ದರೋಡೆ ಮಾಡಿದ್ದರು. ಕೆ.ಸಿ ರೋಡ್ ಜಂಕ್ಷನಲ್ಲಿ ಬಹುತೇಕ ಮುಸ್ಲಿಮರ ಅಂಗಡಿ, ಮುಂಗಟ್ಟುಗಳೇ ಹೆಚ್ಚಿದ್ದು, ಶುಕ್ರವಾರ ಮಧ್ಯಾಹ್ನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ವ್ಯಾಪಾರಿಗಳು ಮಸೀದಿಗೆ ತೆರಳುತ್ತಾರೆ. ಇದೇ ಸಮಯ ಸಂದರ್ಭವನ್ನೇ ಬಳಸಿದ ಆರೋಪಿಗಳು ಬ್ಯಾಂಕನ್ನ ದರೋಡೆಗೈದಿದ್ದರು.
ಆರೋಪಿಗಳನ್ನ ಸ್ಥಳ ಮಹಜರಿಗೆ ಕರೆತರುವ ವೇಳೆ ಸ್ಥಳೀಯರು ದಾಳಿ ನಡೆಸಬಾರದೆನ್ನುವ ಮುಂಜಾಗ್ರತೆಯಿಂದ ಪೊಲೀಸರು ಬಂಧಿತರನ್ನ ಶುಕ್ರವಾರ ಮಧ್ಯಾಹ್ನವೇ ದರೋಡೆ ನಡೆದ ಸ್ಥಳಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ. ಆರೋಪಿಗಳಿಗೆ ಫೆ.3ರ ತನಕ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
Mangalore Kotekar bank robbery, another accused arrested, the arrested has been identified as Shanmugam Sundaram. Also 16 kilo gold has been recovered from murgan devar house in Tirunelveli by mangalore police.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
23-01-26 09:36 pm
Mangaluru Staffer
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm
ಜೂಜಾಡಿ ಸಾಲ ; ಹಣದಾಸೆಗೆ ಇಂಜೆಕ್ಷನ್ ನೀಡಿ ಸ್ವಂತ...
21-01-26 09:35 pm