ಬ್ರೇಕಿಂಗ್ ನ್ಯೂಸ್
30-01-25 11:37 am Mangalore Correspondent ಕ್ರೈಂ
ಮಂಗಳೂರು, ಜ 31: 15 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 55 ಸಾವಿರ ರೂಪಾಯಿ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಎಫ್.ಟಿ.ಎಸ್.ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಬೆಳ್ತಂಗಡಿ ತಾಲೂಕಿನ 43 ವರ್ಷದ ವ್ಯಕ್ತಿ ಶಿಕ್ಷೆಗೊಳಗಾದ ಅಪರಾಧಿ. ಆರೋಪಿ 15 ವರ್ಷದ ಅಪ್ರಾಪ್ತ ಬಾಲಕಿಯ ಮನೆಗೆ ಹೆಚ್ಚಾಗಿ ಬಂದು ಹೋಗಿ ಮನೆಯವರೊಂದಿಗೆ ಆತ್ಮೀಯನಾಗಿದ್ದನು. ಬಾಲಕಿ ಮನೆಯವರು ಇಲ್ಲದ ವೇಳೆ ಮನೆಗೆ ಬಂದು ಬಾಲಕಿ ವಿರೋಧಿಸಿದರೂ ಬಲವಂತವಾಗಿ ಮೈ-ಕೈ ಮುಟ್ಟುತ್ತಾ ಲೈಂಗಿಕವಾಗಿ ಉಪಯೋಗಿಸುತ್ತಿದ್ದನು. ಈ ವಿಚಾರವನ್ನು ತಂದೆ - ತಾಯಿಗೆ ಹೇಳಿದರೆ ನಿನಗೆ ಶಿಕ್ಷೆಯಾಗುತ್ತದೆ ಎಂದು ಹೆದರಿಸುತ್ತಾ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ನ. 2023ರಲ್ಲಿ ಬಾಲಕಿಯ ಕಾಲಿನಲ್ಲಿ ಊತ ಕಂಡು ಬಂದಿದ್ದು, ಬಾಲಕಿಯ ತಾಯಿ ಆರೋಪಿ ಬಳಿ ಈ ವಿಚಾರವನ್ನು ತಿಳಿಸಿದ್ದಲ್ಲದೇ ಆತನೊಂದಿಗೆ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ಆಕೆ ಗರ್ಭಿಣಿ ಎಂದು ತಿಳಿಸಿದ್ದಾರೆ.
ಗರ್ಭಿಣಿ ಎಂದು ತಿಳಿದ ಕೂಡಲೇ ಆರೋಪಿ ತನ್ನ ಹೆಸರನ್ನು ಹೇಳಬೇಡ, ಬೇರೆ ಯಾರದ್ದಾದರೂ ಹೆಸರು ಹೇಳು, ಇಲ್ಲದಿದ್ದರೆ ನಮ್ಮಿಬ್ಬರಿಗೂ ಶಿಕ್ಷೆಯಾಗುತ್ತದೆ ಎಂದು ಬೆದರಿಸಿದ ಕಾರಣ ನೊಂದ ಬಾಲಕಿ ಬೇರೊಬ್ಬ ಕಾಲ್ಪನಿಕ ಹೆಸರನ್ನು ಹೇಳಿದ್ದರಿಂದ ಪ್ರಕರಣ ದಾಖಲಾಗಿತ್ತು. ನಂತರ ಕಾಲ್ಪನಿಕ ವ್ಯಕ್ತಿ ಬಾಲಕಿ ಹೇಳಿದ ಸ್ಥಳದಲ್ಲಿ ಇಲ್ಲದಿರುವುದರಿಂದ ಆಕೆಗೆ ಆಪ್ತ ಸಮಾಲೋಚನೆ ಮಾಡಿ ಧೈರ್ಯ ತುಂಬಿ ಪುನಃ ವಿಚಾರಿಸಿದಾಗ ನಿಜವಾದ ಆರೋಪಿ ಹೆಸರು ಹೇಳಿದ್ದಲ್ಲದೇ ಆತನೇ ನನ್ನ ಗರ್ಭಕ್ಕೆ ಕಾರಣ ಎಂದು ತಿಳಿಸಿದ್ದಾಳೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದ್ದು, ಧರ್ಮಸ್ಥಳ ಪೊಲೀಸ್ ನಿರೀಕ್ಷಕರಾದ ನಾಗೇಶ್ ಕೆ ಅವರು ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
ಈ ಪ್ರಕರಣದಲ್ಲಿ ಬಾಲಕಿಗೆ ಗರ್ಭಪಾತ ಮಾಡಿಸಿದ್ದು ನಂತರ ಭ್ರೂಣದ ಅಂಶವನ್ನು ಮತ್ತು ನೊಂದ ಬಾಲಕಿ ಹಾಗೂ ಆರೋಪಿಯ ಮಾದರಿ ರಕ್ತವನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಿದಾಗ ಆರೋಪಿಯೇ ಬಾಲಕಿಯಿಂದ ಸಂಗ್ರಹಿಸಿದ ಭ್ರೂಣದ ಅಂಶದ ಜೈವಿಕ ತಂದೆ ಎನ್ನುವ ವರದಿ ಬಂದಿದೆ.
ಈ ಪ್ರಕರಣವು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 16 ಸಾಕ್ಷಿದಾರರನ್ನು ವಿಚಾರಿಸಲಾಗಿರುತ್ತದೆ ಮತ್ತು 33 ದಾಖಲೆಗಳನ್ನು ಗುರುತಿಸಲಾಗಿರುತ್ತದೆ.
ಪ್ರಕರಣದ ಸಾಕ್ಷ್ಯ ದಾಖಲೆಗಳು ಹಾಗೂ ಪೂರಕ ಸಾಕ್ಷ್ಯ ಹಾಗೂ ವಾದ ವಿವಾದವನ್ನು ಆಲಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ಆರೋಪಿಗೆ 20 ವರ್ಷಗಳ ಕಾಲ ಶಿಕ್ಷೆ, 50,000 ರೂ. ದಂಡದ ಜೊತೆಗೆ ಜೀವ ಬೆದರಿಕೆ ಹಾಕಿರುವುದಕ್ಕೆ ಭಾರತೀಯ ದಂಡ ಸಂಹಿತೆಯ ಕಲಂ 506ರ ಪ್ರಕಾರ 3 ತಿಂಗಳ ಸಾದಾ ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿದ್ದಾರೆ. ದಂಡದ ಒಟ್ಟು ಹಣವಾದ 55,000 ರೂ.ಗಳನ್ನು ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯವು ಆದೇಶಿಸಿದೆ. ಅಲ್ಲದೇ ದಂಡ ಪ್ರಕ್ರಿಯೆ ಸಂಹಿತೆಯ ಕಲಂ: 357(ಎ) ಪ್ರಕಾರ ಮತ್ತು ಸಂತ್ರಸ್ಥರ ಪರಿಹಾರ ಯೋಜನೆ ಅಡಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ 6,45,000 ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡುವಂತೆ ತೀರ್ಪಿನಲ್ಲಿ ನಿರ್ದೇಶನ ನೀಡಿರುತ್ತದೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸ್ಪೆಶಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ ಬದರಿನಾಥ ನಾಯರಿ ಅವರು ಸಾಕ್ಷಿದಾರರನ್ನು ವಿಚಾರಿಸಿ ವಾದ ಮಂಡಿಸಿರುತ್ತಾರೆ.
Rape accused gets 20 years imprisonment by Mangalore court for rape of 15 year old minor girl at Belthangady.
27-12-25 02:40 pm
Bangalore Correspondent
ಚಿತ್ರದುರ್ಗ ಬಸ್ ದುರಂತ ; ಗಾಯಗೊಂಡಿದ್ದ ಸೀಬರ್ಡ್...
26-12-25 09:38 pm
ಬೈಕ್ ಗೆ ಟಿಪ್ಪರ್ ಡಿಕ್ಕಿ ; ಚರ್ಚ್ ನಲ್ಲಿ ಕ್ರಿಸ್ ಮ...
26-12-25 01:35 pm
ಸದ್ಯಕ್ಕಿಲ್ಲ ಸಿಎಂ ಬದಲಾವಣೆ ! ರಾಜ್ಯದಿಂದ ಕೇಂದ್ರ ನ...
25-12-25 08:00 pm
Chitradurga Seabird Bus accident: ಚಿತ್ರದುರ್ಗ...
25-12-25 06:26 pm
27-12-25 04:29 pm
HK News Desk
ನಮ್ಮನ್ನಿಲ್ಲಿ ಬದುಕಲು ಬಿಡುತ್ತಿಲ್ಲ, ಗಡಿಯನ್ನು ತೆರ...
27-12-25 01:46 pm
ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೇಯರ್...
26-12-25 09:41 pm
ಕ್ರೈಸ್ತರ ಮೇಲೆ ದಾಳಿ ; ನೈಜೀರಿಯಾದಲ್ಲಿ ಐಸಿಸ್ ಉಗ್ರ...
26-12-25 05:50 pm
ರೈಲ್ವೆಯಲ್ಲಿ ಒಂದೇ ವರ್ಷಕ್ಕೆ ಎರಡನೇ ಬಾರಿ ಪ್ರಯಾಣ ದ...
26-12-25 03:04 pm
28-12-25 03:44 pm
Mangalore Correspondent
Mangalore, Pandeshwar ASI : ಪಾಂಡೇಶ್ವರ ಠಾಣೆ ಎಎ...
28-12-25 11:50 am
ನವ ವಿಧ - ನವ ವರ್ಷ ಮಂಗಳೂರು ಕಂಬಳ ; ಒಂಬತ್ತು ಮಂದಿ...
26-12-25 10:34 pm
Grace Ministry Christmas 2025: ಗ್ರೇಸ್ ಮಿನಿಸ್ಟ...
26-12-25 06:37 pm
ಎಂಆರ್ ಜಿ ಗ್ರೂಪಿನಿಂದ ಆಶಾ ಪ್ರಕಾಶ್ ಶೆಟ್ಟಿ ನೆರವು...
25-12-25 10:54 pm
28-12-25 05:19 pm
HK News Desk
ಬೈಕಿನಲ್ಲಿ 19 ಕೇಜಿ ಗೋಮಾಂಸ ಸಾಗಣೆ ; ಬಜ್ಪೆ ಮಳಲಿಯಲ...
27-12-25 07:42 pm
ಧನದಾಹಕ್ಕೆ ನವ ವಿವಾಹಿತೆ ಗಾನವಿ ಬಲಿ ಪ್ರಕರಣ ; ತಲೆಮ...
27-12-25 02:28 pm
ಪ್ಯಾಲೆಸ್ ಗ್ರೌಂಡ್ನಲ್ಲಿ ಅದ್ದೂರಿ ರಿಸೆಪ್ಷನ್, ಶ್...
26-12-25 11:21 pm
ಪಡುಬಿದ್ರೆ ; ನೇಮೊತ್ಸದಲ್ಲಿ ವೃದ್ಧೆಯ ಸರ ಕಳ್ಳತನ, ಮ...
26-12-25 11:06 pm