Mangalore Crime, Bantwal Toll, Kodikere Gang: ತುಂಬೆ ಟೋಲ್ ಗೇಟ್ ನಲ್ಲಿ ಹುಡುಗನ ಮೇಲೆ ಯುವಕರ ತಂಡದಿಂದ ಹಲ್ಲೆ ; ವಿಡಿಯೋ ವೈರಲ್, ರೌಡಿ ತಂಡದ ಕೃತ್ಯವೆಂದು ಬರಹ !

01-02-25 10:11 pm       Mangalore Correspondent   ಕ್ರೈಂ

ಬಂಟ್ವಾಳ ಠಾಣೆ ವ್ಯಾಪ್ತಿಯ ತುಂಬೆ ಟೋಲ್ ಗೇಟ್ ನಲ್ಲಿ ಸ್ಕೂಟರಿನಲ್ಲಿ ತೆರಳುತ್ತಿದ್ದ ಹುಡುಗನೊಬ್ಬನಿಗೆ ಕಾರಿನಲ್ಲಿ ಬಂದಿದ್ದ ಯುವಕರು ತದ್ವಾತದ್ವಾ ಹಲ್ಲೆಗೈದ ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಜೊತೆಗೆ, ಈ ಕೃತ್ಯವನ್ನು ಇಂಥವರೇ ಮಾಡಿದ್ದಾರೆಂದು ಬರೆದಿರುವ ಬರಹವೂ ವೈರಲ್ ಆಗುತ್ತಿದೆ.

ಮಂಗಳೂರು, ಫೆ.1: ಬಂಟ್ವಾಳ ಠಾಣೆ ವ್ಯಾಪ್ತಿಯ ತುಂಬೆ ಟೋಲ್ ಗೇಟ್ ನಲ್ಲಿ ಸ್ಕೂಟರಿನಲ್ಲಿ ತೆರಳುತ್ತಿದ್ದ ಹುಡುಗನೊಬ್ಬನಿಗೆ ಕಾರಿನಲ್ಲಿ ಬಂದಿದ್ದ ಯುವಕರು ತದ್ವಾತದ್ವಾ ಹಲ್ಲೆಗೈದ ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಜೊತೆಗೆ, ಈ ಕೃತ್ಯವನ್ನು ಇಂಥವರೇ ಮಾಡಿದ್ದಾರೆಂದು ಬರೆದಿರುವ ಬರಹವೂ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಸ್ಕೂಟರಿನಲ್ಲಿ ಹರೆಯದ ಹುಡುಗನೊಬ್ಬ ಟೋಲ್ ಗೇಟ್ ಮುಂದೆ ಬಂದು ನಿಂತಿದ್ದು ಈ ವೇಳೆ ಕಾರಿನಿಂದ ಇಳಿದು ಬಂದ ನಾಲ್ವರು ದೃಢಕಾಯದ ಯುವಕರು ಆತನ ಮೇಲೆ ಹಲ್ಲೆ ನಡೆಸುತ್ತಾರೆ. ಸ್ಕೂಟರ್ ಮೇಲೆ ತುಳಿದು ಹುಡುಗನ ತಲೆ, ಮುಖಕ್ಕೆ ತದ್ವಾತದ್ವಾ ಏಟು ನೀಡುತ್ತಾರೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ. ಕೃತ್ಯವನ್ನು ರೌಡಿ ಮನೋಜ್ ಕೋಡಿಕೆರೆ ತಂಡದ ಯುವಕರು ಮಾಡಿದ್ದಾರೆಂದು ಜೊತೆಗಿರುವ ಬರಹದಲ್ಲಿ ಬರೆಯಲಾಗಿದೆ. ಅಲ್ಲದೆ, ಇಂಥವರೇ ಮಾಡಿದ್ದಾರೆಂದು ನಾಲ್ವರ ಹೆಸರನ್ನೂ ಬರೆದಿದ್ದಾರೆ. ಅಮಾಯಕ ಹುಡುಗನ ಮೇಲೆ ಹಲ್ಲೆ ಮಾಡಿದ್ದರೂ, ಮಂಗಳೂರಿನ ಪೊಲೀಸರು ಸುಮ್ಮನಿದ್ದಾರೆಂದು ಟೀಕಿಸಲಾಗಿದೆ.

ಈ ಬಗ್ಗೆ ಬಂಟ್ವಾಳ ಠಾಣೆ ಪೊಲೀಸರನ್ನು ಕೇಳಿದರೆ, ಆ ಹುಡುಗನಲ್ಲಿ ದೂರು ಕೊಡಲು ಹೇಳಿದ್ದೇವೆ, ಆತ ಕೊಟ್ಟಿಲ್ಲ. ಹಾಗಾಗಿ ಪ್ರಕರಣ ದಾಖಲು ಮಾಡಿಲ್ಲ. ಹಲ್ಲೆ ಕೃತ್ಯದ ಸಿಸಿಟಿವಿ ವಿಡಿಯೋ ನೋಡಿದ್ದೇವೆ ಎಂದು ತಿಳಿಸಿದ್ದಾರೆ. ಒದೆ ತಿಂದ ಯುವಕ ಯಾರು, ಆತನಿಗೂ ಯುವಕರ ತಂಡಕ್ಕೂ ಏನು ದ್ವೇಷ ಇತ್ತು ಅನ್ನೋದು ತಿಳಿದಿಲ್ಲ. ಏನೋ ಓವರ್ ಟೇಕ್ ದ್ವೇಷದಿಂದ ಹುಡುಗ ಕಾರಿಗೆ ಅಡ್ಡಲಾಗಿ ಸ್ಕೂಟರ್ ಇಟ್ಟಿರುವಂತೆ ತೋರುತ್ತಿದೆ. ಅದಕ್ಕಾಗಿ ಯುವಕರು ಹಲ್ಲೆ ಮಾಡಿದ್ದಾರೆ.

Mangalore Two wheeler guy assulted near bantwal toll, kodikere gang alleged behind Assult, video goes viral. Complainant has not filed any case in this matter said Bantwal Town Police Inspector.