Bangalore honeytrap case, Crime: ಮದುವೆಗೆ ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ; ಪೊಲೀಸರ ಸೋಗಿನಲ್ಲಿ ಬಂದು ಧಮ್ಕಿ , ನಾಲ್ವರು ಅಂಟಿಗಳಿಗೆ ಬಿತ್ತು ಪೊಲೀಸರ ಲಾಟಿ ರುಚಿ 

02-02-25 09:00 pm       Bangalore Correspondent   ಕ್ರೈಂ

ಮದುವೆಗೆ ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡುತ್ತಿದ್ದ ನಾಲ್ವರು ಮಹಿಳೆಯರೂ ಸೇರಿದಂತೆ ಆರು ಆರೋಪಿಗಳನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ಫೆ 02: ಮದುವೆಗೆ ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡುತ್ತಿದ್ದ ನಾಲ್ವರು ಮಹಿಳೆಯರೂ ಸೇರಿದಂತೆ ಆರು ಆರೋಪಿಗಳನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭದ್ರಪ್ಪ ಲೇಔಟ್‌ನ ಮಂಜುಳಾ (45), ಮಂಗನಹಳ್ಳಿ ತಾವರೆಕೆರೆಯ ಶಿಲ್ಪಾ (45), ಎಂ.ಎಸ್‌.ಪಾಳ್ಯದ ಲೀಲಾವತಿ (37), ಹೆಬ್ಬಾಳದ ವಿಜಯಮ್ಮ (52) ಹಾಗೂ ಎಚ್‌.ವೆಂಕಟೇಶ್‌, ವಿದ್ಯಾರಣ್ಯಪುರದ ಎಂ.ಹರೀಶ್‌ (41) ಬಂಧಿತರು.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪ್ರಮುಖ ಆರೋಪಿ ಮಂಜುಳಾಗೆ ಕೆಲ ದಿನಗಳ ಹಿಂದೆ ಯುವಕನೊಬ್ಬ ಪರಿಚಯವಾಗಿದ್ದ. 'ವಧು ಹುಡುಕುತ್ತಿದ್ದು, ಕನ್ಯೆ ಇದ್ದರೆ ಹೇಳಿ' ಎಂದು ಮಂಜುಳಾ ಬಳಿ ಯುವಕ ಹೇಳಿದ್ದ. ಹೆಬ್ಬಾಳದ ತನ್ನ ಸ್ನೇಹಿತೆ ಮನೆಗೆ ಹೋದರೆ ಕನ್ಯೆ ತೋರಿಸುವುದಾಗಿ ಮಂಜುಳಾ ಹೇಳಿದ್ದಳು. ಅದರಂತೆ ಮಂಜುಳಾ ಸ್ನೇಹಿತೆ ವಿಜಯಲಕ್ಷ್ಮಿ ಮನೆಗೆ ಯುವಕ ಹೋಗಿದ್ದ. 

ಮನೆಯಲ್ಲಿ ಲೀಲಾವತಿ ಎಂಬ ಯುವತಿಯನ್ನು ವಿಜಯಲಕ್ಷ್ಮಿ ಪರಿಚಯಿಸಿದ್ದಳು. ಕೆಲವೇ ಹೊತ್ತಿನಲ್ಲಿ ಇಬ್ಬರೂ ಮಾತನಾಡುತ್ತಿರಿ ಎಂದು ಹೇಳಿ ವಿಜಯಲಕ್ಷ್ಮಿ ಹೊರಕ್ಕೆ ಹೋಗಿದ್ದಳು. ಕೆಲವೇ ಹೊತ್ತಿನಲ್ಲಿ ಪೊಲೀಸರ ಸೋಗಿನಲ್ಲಿ ಗೀತಾ, ಹರೀಶ ಮತ್ತು ವೆಂಕಟೇಶ ಮನೆಗೆ ಬಂದಿದ್ದರು. ಮನೆಯಲ್ಲಿ ವೈಶ್ಯಾವಾಟಿಕೆ ನಡೆಯುತ್ತಿದೆ ಎಂದು ಬೆದರಿಸಿದ್ದರು. ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು. ಬೆದರಿದ್ದ ಯುವಕ, ಫೋನ್‌ ಪೇ ಮೂಲಕ 50 ಸಾವಿರ ಕಳಿಸಿದ್ದಾನೆ. 

ಯುವಕ ನೀಡಿದ ದೂರು ಆಧರಿಸಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

Four women arrested by Bangalore police over honeytrap case. They also used to pose as police officers and threaten the victim and loot money. Hebbal police have arrested four in connection to this case..