ಬ್ರೇಕಿಂಗ್ ನ್ಯೂಸ್
06-02-25 09:32 pm HK News Desk ಕ್ರೈಂ
ಕಾಸರಗೋಡು, ಫೆ.6: ಅರ್ಚಕರೊಬ್ಬರನ್ನು ಫೇಸ್ಬುಕ್ ಮೂಲಕ ಫ್ರೆಂಡ್ ಮಾಡಿಕೊಂಡು ಲೈಂಗಿಕವಾಗಿ ಆಕರ್ಷಿಸಿ ಫೋಟೋ, ವಿಡಿಯೋ ಷೇರ್ ಮಾಡಿ ಅದನ್ನೇ ಮುಂದಿಟ್ಟು ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದ ಆರೋಪದಲ್ಲಿ ಮಂಗಳೂರಿನ ಯುವಕನೊಬ್ಬನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ತಾಲೂಕಿನ ಕೊಳಂಬೆ ನಿವಾಸಿ ಅಶ್ವಥ್ ಆಚಾರ್ಯ (33) ಬಂಧಿತ ವ್ಯಕ್ತಿ. ಫೇಸ್ಬುಕ್ ನಲ್ಲಿ ಅರ್ಚಕರ ಜೊತೆಗೆ ತಾನು ಯಕ್ಷಗಾನ ಕಲಾವಿದ ಎಂದು ಪರಿಚಯಿಸಿಕೊಂಡು ಫ್ರೆಂಡ್ ಆಗಿದ್ದ ಅಶ್ವಥ್, ಆನಂತರ ಆನ್ಲೈನಲ್ಲಿ ನಿರಂತರ ಸಂಪರ್ಕದಲ್ಲಿದ್ದ. ಈ ವೇಳೆ, ಲೈಂಗಿಕವಾಗಿ ಆಕರ್ಷಿಸಿ ಸೆಕ್ಸ್ ಸಂಬಂಧಿಸಿ ಚಾಟ್ ಮಾಡಿಕೊಂಡಿದ್ದರು. ಇದೇ ವೇಳೆ ಒಬ್ಬರಿಗೊಬ್ಬರು ಫೋಟೋ, ವಿಡಿಯೋ ಷೇರ್ ಮಾಡಿಕೊಂಡಿದ್ದು, ಇದನ್ನೇ ಮುಂದಿಟ್ಟು ಅರ್ಚಕನನ್ನು ಅಶ್ವಥ್ ಆಚಾರ್ಯ ಬ್ಲಾಕ್ಮೇಲ್ ಮಾಡಿದ್ದಾನೆ ಎನ್ನಲಾಗಿದೆ. ಅಲ್ಲದೆ, ತಾನು ಯುವತಿಯಾಗಿ ಲಿಂಗ ಬದಲಾಯಿಸಿಕೊಳ್ಳುತ್ತೇನೆ, ಅದಕ್ಕಾಗಿ ಹಣದ ಅಗತ್ಯವಿದೆ ಎಂದೂ ನಂಬಿಸಿದ್ದಾನೆ.
ಬ್ಲಾಕ್ಮೇಲ್ ಒಳಗಾದ ಅರ್ಚಕ ಕಳೆದ ನವೆಂಬರ್ ತಿಂಗಳಿನಿಂದ ನಾಲ್ಕು ತಿಂಗಳಲ್ಲಿ 10.5 ಲಕ್ಷ ರೂಪಾಯಿ ಹಣವನ್ನು ಮೊಬೈಲ್ ಏಪ್ ಮತ್ತು ಬ್ಯಾಂಕ್ ಮೂಲಕ ಆರೋಪಿ ಖಾತೆಗೆ ಪಾವತಿಸಿದ್ದರು. ದೇವರ ಪೌರೋಹಿತ್ಯ ನಡೆಸುತ್ತ ದುಡಿಮೆ ಮಾಡುತ್ತಿದ್ದ ಅರ್ಚಕನಲ್ಲಿ ಮತ್ತಷ್ಟು ಹಣ ನೀಡದಿದ್ದರೆ ವಿಡಿಯೋ, ಫೋಟೊ ಜಾಲತಾಣದಲ್ಲಿ ಹಾಕುತ್ತೇನೆಂದು ಬೆದರಿಸಿದ್ದ. ಇದರಿಂದ ಬೇಸತ್ತ ವ್ಯಕ್ತಿ ಫೆ.5ರಂದು ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ, ಕಾಸರಗೋಡು ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದ ಪೊಲೀಸರು ಆರೋಪಿಯನ್ನು ಮಂಗಳೂರಿನ ಮನೆಯಿಂದಲೇ ನಿನ್ನೆ ನಡುರಾತ್ರಿಯಲ್ಲಿ ಬಂಧಿಸಿ ಕರೆದೊಯ್ದಿದ್ದಾರೆ. ಅರ್ಚಕನ ಜೊತೆಗೆ ವಿಡಿಯೋ ಕರೆ ಮಾಡಿ ಮಾತನಾಡುತ್ತಿದ್ದುದಲ್ಲದೆ, ಈ ವೇಳೆ ಅರೆನಗ್ನ ರೀತಿಯಲ್ಲಿ ಚಿತ್ರೀಕರಿಸಿಕೊಂಡು ಬಳಿಕ ಅದನ್ನೇ ಮುಂದಿಟ್ಟು ಬ್ಲಾಕ್ಮೇಲ್ ಮಾಡತೊಡಗಿದ್ದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಅರ್ಚಕ ವ್ಯಕ್ತಿ 3 ಲಕ್ಷವನ್ನು ಗೂಗಲ್ ಪೇ ಮೂಲಕ ಪಾವತಿಸಿದ್ದರೆ, 7.5 ಲಕ್ಷವನ್ನು ಮೂರು ಬಾರಿ ಬ್ಯಾಂಕ್ ಖಾತೆ ಮೂಲಕ ಪಾವತಿ ಮಾಡಿದ್ದಾರೆ. ಮತ್ತೆ ಮತ್ತೆ ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದ್ದರಿಂದ ಬೇಸತ್ತಿದ್ದರು. ಪೊಲೀಸರು ಹಣಕ್ಕಾಗಿ ಬ್ಲಾಕ್ಮೇಲ್ ನಡೆಸಿದ ಬಗ್ಗೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದು, ಇದೇ ರೀತಿ ಇತರ ವ್ಯಕ್ತಿಗಳನ್ನೂ ಬ್ಲಾಕ್ಮೇಲ್ ಮಾಡಿದ್ದಾನೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.
A 30-year-old Mangaluru resident was arrested for allegedly extorting over ₹10 lakh from a priest in Kerala by blackmailing him with sexually explicit photos and videos, police said on Thursday.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm