ಬ್ರೇಕಿಂಗ್ ನ್ಯೂಸ್
08-02-25 10:16 pm Bangalore Correspondent ಕ್ರೈಂ
ಬೆಂಗಳೂರು, ಫೆ.8: ಕ್ಯಾಸಿನೋ, ಬಿಟ್ ಕಾಯಿನ್ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಹಾಗೂ ಬಡ್ಡಿ ನೀಡುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ 25 ಕೋಟಿ ರೂ. ಪಡೆದು ವಂಚಿಸಿದ ಆರೋಪದಲ್ಲಿ ಐವರ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದು, ಒಬ್ಬನನ್ನು ಬಂಧಿಸಿದ್ದಾರೆ.
ವಂಚನೆಗೀಡಾದ ಕರಾವಳಿ ಮೂಲದ ಉದ್ಯಮಿ ವಿವೇಕ್ ಪಿ. ಹೆಗ್ಗಡೆ ಎಂಬುವರು ನೀಡಿದ ದೂರಿನ ಮೇರೆಗೆ ಉಡುಪಿ ಮೂಲದ ರಾಮಕೃಷ್ಣ ರಾವ್, ಪತ್ನಿ ರಾಜೇಶ್ವರಿ ರಾವ್, ಮಗ ರಾಹುಲ್ ತೋನ್ಸೆ, ಪುತ್ರಿ ರಕ್ಷಾ ತೋನ್ಸೆ ಹಾಗೂ ಅಳಿಯ ಚೇತನ್ ನಾರಾಯಣ್ ವಿರುದ್ಧ ವಂಚನೆ ಹಾಗೂ ಅನಿಯಂತ್ರಿತ ಠೇವಣಿ ನಿಷೇಧ ಕಾಯ್ದೆಯಡಿ (ಬಡ್ಸ್) ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ ರಾಮಕೃಷ್ಣ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇತರೇ ಆರೋಪಿಗಳು ವಿದೇಶದಲ್ಲಿ ತಲೆಮರೆಸಿದ್ದಾರೆ. ಈ ಪೈಕಿ ರಾಹುಲ್ ತೋನ್ಸೆ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿಯೂ ಆರೋಪಿಯಾಗಿದ್ದ.
ಲಾಜಿಸ್ಟಿಕ್ ಕಂಪೆನಿ ನಡೆಸುತ್ತಿರುವ ದೂರುದಾರ ವಿವೇಕ್ ಹೆಗಡೆ ಅವರಿಗೆ ಸ್ನೇಹಿತರ ಮೂಲಕ 2023ರಲ್ಲಿ ರಾಮಕೃಷ್ಣ ರಾವ್ ಪರಿಚಯವಾಗಿತ್ತು. ಮಗ ರಾಹುಲ್ ಹಾಗೂ ಅಳಿಯ ಚೇತನ್ ಶ್ರೀಲಂಕಾ ಹಾಗೂ ದುಬೈನಲ್ಲಿ ಕ್ಯಾಸಿನೋ ವ್ಯವಹಾರದಲ್ಲಿ ನಡೆಸುತ್ತಿದ್ದು ಉದ್ಯಮ ವಿಸ್ತರಣೆಗೆ ಹಣದ ಅಗತ್ಯವಿದ್ದು, ಸಹಾಯ ಮಾಡುವಂತೆ ಕೇಳಿಕೊಂಡಿದ್ದರು.
ಇದಲ್ಲದೆ, ರಾಮಕೃಷ್ಣ ರಾವ್ ಅವರು ವಿವೇಕ್ ಅವರಿಗೆ ನಂಬಿಕೆ ಮೂಡಿಸಲು ಶ್ರೀಲಂಕಾದಲ್ಲಿರುವ ಕ್ಯಾಸಿನೋಗೆ ಕರೆದೊಯ್ದು ಮಗ ರಾಹುಲ್ನನ್ನು ಪರಿಚಯಿಸಿದ್ದರು. ಬಳಿಕ ದುಬೈನಲ್ಲಿದ್ದ ಮಗಳು ಹಾಗೂ ಅಳಿಯನನ್ನು ಕರೆಯಿಸಿ ಹೂಡಿಕೆ ಬಗ್ಗೆ ಮಾತುಕತೆ ನಡೆಸಿದ್ದರು. ಕ್ಯಾಸಿನೋ ಹಾಗೂ ಬಿಟ್ ಕಾಯಿನ್ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ರಾಮಕೃಷ್ಣ ರಾವ್ ಕುಟುಂಬ ಆಮಿಷವೊಡ್ಡಿತ್ತು ಎಂದು ದೂರಿನಲ್ಲಿ ವಿವೇಕ್ ಆರೋಪಿಸಿದ್ದಾರೆ.
ದುಬೈ ಹಾಗೂ ಶ್ರೀಲಂಕಾದಲ್ಲಿ ಕ್ಯಾಸಿನೋ ನಡೆಸುತ್ತಿದ್ದು, ಉದ್ಯಮ ವಿಸ್ತರಿಸಿದರೆ ಹೆಚ್ಚು ಹಣ ಸಂಪಾದಿಸಬಹುದು. ಶ್ರೀಲಂಕಾದಲ್ಲಿ ಸಿಟಿ ಆಫ್ ಡ್ರೀಮ್ಸ್ ಹೆಸರಿನಲ್ಲಿ ಕ್ಯಾಸಿನೋ ತೆರೆಯಲಿದ್ದು, ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಹೇಳಿದ್ದರು. ಆರೋಪಿಗಳ ಮಾತನ್ನು ನಂಬಿ ಕೋಟ್ಯಂತರ ರೂಪಾಯಿ ಹಣವನ್ನ ಸಾಲದ ರೂಪದಲ್ಲಿ ನೀಡಿದ್ದೆ. ಪ್ರತಿಯಾಗಿ ಪ್ರತಿ ತಿಂಗಳು ಬಡ್ಡಿ ನೀಡುವುದಾಗಿ ಭರವಸೆ ನೀಡಿದ್ದರು. 2023ರಿಂದ ಈವರೆಗೆ ಸುಮಾರು 25 ಕೋಟಿ ರೂ. ಸಾಲ ಕೊಟ್ಟಿದ್ದೇನೆ. ಬಡ್ಡಿ ನೀಡದಿರುವ ಬಗ್ಗೆ ಅನುಮಾನ ಬಂದು ಪ್ರಶ್ನಿಸಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಹೆಚ್ಚಿನ ಬಡ್ಡಿ ಆಸೆ ತೋರಿಸಿ ಹಣ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ವಿವೇಕ್ ಉಲ್ಲೇಖಿಸಿದ್ದಾರೆ.
ಆರೋಪಿ ರಾಹುಲ್ ತೋನ್ಸೆ ಐದು ವರ್ಷಗಳ ಹಿಂದೆ ಡ್ರಗ್ಸ್ ಪ್ರಕರಣಲ್ಲಿಯೂ ಭಾಗಿಯಾಗಿದ್ದ. 45 ಲಕ್ಷ ರೂ. ವಂಚನೆ ಸಂಬಂಧ ಇಂದಿರಾ ನಗರ ಠಾಣೆಯಲ್ಲಿ ರಾಹುಲ್ ತಂದೆ ರಾಮಕೃಷ್ಣ ರಾವ್ ಸೇರಿದಂತೆ ಮೂವರ ವಿರುದ್ಧ ನಟಿ ಸಂಜನಾ ಗಲ್ರಾನಿ ದೂರು ದಾಖಲಿಸಿದ್ದರು. ರಾಹುಲ್ ಶ್ರೀಲಂಕಾದಲ್ಲಿ ಕ್ಯಾಸಿನೊ ವ್ಯವಹಾರ ನಡೆಸುತ್ತಿದ್ದ ಬಗ್ಗೆಯೂ ದೂರಿನಲ್ಲಿತ್ತು. ಸಿಸಿಬಿ ಪೊಲೀಸರು ಅಂದು ಆತನನ್ನು ಬಂಧಿಸಿದ್ದು ಆನಂತರ ಜಾಮೀನಿನಲ್ಲಿ ಹೊರಬಂದು ಉದ್ಯಮಿಗೆ ಕೈಕೊಟ್ಟಿದ್ದಾನೆ.
Businessmen cheated of 25 crores in the name of bitcoin and casino business, case filed on Udupi native.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
23-01-26 09:36 pm
Mangaluru Staffer
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm
ಜೂಜಾಡಿ ಸಾಲ ; ಹಣದಾಸೆಗೆ ಇಂಜೆಕ್ಷನ್ ನೀಡಿ ಸ್ವಂತ...
21-01-26 09:35 pm