Fake HPCL oil racket, Belagavi, Vijayapura: ಎಚ್ ಪಿಸಿಎಲ್ ಹೆಸರಲ್ಲಿ ನಕಲಿ ಆಯಿಲ್ ಮಾರಾಟ ಪತ್ತೆ ; ವಿಜಯಪುರ, ಬೆಳಗಾವಿಯಲ್ಲಿ ಪೊಲೀಸರ ಕಾರ್ಯಾಚರಣೆ, ಇಬ್ಬರ ಬಂಧನ

13-02-25 05:54 pm       Bangalore Correspondent   ಕ್ರೈಂ

ಎಚ್ ಪಿಸಿಎಲ್ ಆಯಿಲನ್ನು ನಕಲಿಯಾಗಿ ತಯಾರಿಸಿ ಕಂಪನಿ ಲೇಬಲ್ ನಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದು, ವಿಜಯಪುರ ಮತ್ತು ಬೆಳಗಾವಿಯಲ್ಲಿ ದಾಳಿ ಮಾಡಿ ಇಬ್ಬರನ್ನು ಬಂಧನ ಮಾಡಿದ್ದಾರೆ.

ಬೆಂಗಳೂರು, ಫೆ.13: ಎಚ್ ಪಿಸಿಎಲ್ ಆಯಿಲನ್ನು ನಕಲಿಯಾಗಿ ತಯಾರಿಸಿ ಕಂಪನಿ ಲೇಬಲ್ ನಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದು, ವಿಜಯಪುರ ಮತ್ತು ಬೆಳಗಾವಿಯಲ್ಲಿ ದಾಳಿ ಮಾಡಿ ಇಬ್ಬರನ್ನು ಬಂಧನ ಮಾಡಿದ್ದಾರೆ.

ವಿಜಯಪುರ ಜಿಲ್ಲೆಯ ಹೊರಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಜಯಲಕ್ಷ್ಮಿ ಲ್ಯೂಬ್ರಿಕಂಟ್ ಎನ್ನುವ ಹೆಸರಿನ ಅಂಗಡಿಗೆ ಪೊಲೀಸರು ದಾಳಿ ಮಾಡಿದಾಗ, ಎಚ್ ಪಿಸಿಎಲ್ ಎಂಕ್ಲೋ ಸುಪೀರಿಯರ್ ಹೈಡ್ರಾಲಿಕ್ ಆಯಿಲ್ ಹೆಸರಲ್ಲಿ ನಕಲಿ ಆಯಿಲ್ ತುಂಬಿಸಿಟ್ಟಿರುವುದು ಪತ್ತೆಯಾಗಿದೆ. ಕಾಪಿರೈಟ್ ಆಕ್ಟ್ ಉಲ್ಲಂಘನೆ ಮಾಡಿದ್ದಲ್ಲದೆ, ನಕಲಿ ಉತ್ಪನ್ನಗಳನ್ನು ಮಾರಾಟ ಮಾಡಿ ಅಕ್ರಮ ಲಾಭ ಮಾಡಿಕೊಳ್ಳುತ್ತಿರುವುದು ತನಿಖೆಯಲ್ಲಿ ಕಂಡುಬಂದಿದೆ. ಅಲ್ಲದೆ, ಪ್ರಗತಿ ಮತ್ತು ಚಕ್ಕೋ ಎನ್ನುವ ಲೋಗೊ ಇಲ್ಲದ ಕಂಪನಿಯ ಹೆಸರಲ್ಲಿ ಮಾರಾಟ ಮಾಡುತ್ತಿರುವುದೂ ಪತ್ತೆಯಾಗಿದ್ದು ಅಂಗಡಿ ಮಾಲೀಕ ಮಲ್ಲಪ್ಪ ಪಾಟೀಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಎಚ್ ಪಿಸಿಎಲ್ ಕಂಪನಿಯ ಬೆಂಗಳೂರು ರೀಜನಲ್ ಮ್ಯಾನೇಜರ್ ಫ್ರಾನ್ಸಿಸ್ ಪೌಲ್ ದೂರು ನೀಡಿದ್ದರು.

ಬೆಳಗಾವಿ ಪ್ರಕರಣದಲ್ಲಿ ಶಹಾಪುರ್ ಪೊಲೀಸ್ ಠಾಣೆಯ ಎಸ್ಐ ಸಿದ್ದಪ್ಪ ಶಿಮಾನಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಎಚ್ ಪಿಸಿಎಲ್ ಕಂಪನಿಯ ಆಯಿಲ್ ತುಂಬಿದ್ದ ತಲಾ 26 ಲೀಟರ್ ಇದ್ದ ಎರಡು ಬಕೇಟುಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಇಶಾ ಹೈಡ್ರೋ ಪವರ್ ಕಂಪನಿಯ ಹೆಸರಲ್ಲಿ ನಕಲಿ ಆಯಿಲ್ ಮಾರಾಟ ಮಾಡುತ್ತಿದ್ದ ಶಿವಾನಂದ್ (39) ಎಂಬಾತನನ್ನು ಬಂಧಿಸಿದ್ದಾರೆ.

A fake HPCL oil racket has been busted in both Belagavi and Vijayapura, with two individuals arrested. Authorities report that counterfeit oil, packaged in authentic-looking cans with seals, was being sold at reduced prices in the markets. The police are currently investigating the case.