Sirsi Murder, KSRTC Bus, crime: ಶಿರಸಿ ; ಹತ್ತು ವರ್ಷ ಪ್ರೀತಿಸಿದ್ದ ಯುವತಿಗೆ ಬೇರೆ ಮದುವೆ, ಬಸ್ ನಿಲ್ದಾಣದಲ್ಲೇ ಹೊಸ ಗಂಡನ ಇರಿದು ಕೊಲೆಗೈದ ಹಳೆ ಪ್ರಿಯಕರ ! 

23-02-25 03:42 pm       HK News Desk   ಕ್ರೈಂ

ಹತ್ತು ವರ್ಷದಿಂದ ಪ್ರೀತಿಸುತ್ತಿದ್ದ ಹುಡುಗಿ ಬೇರೆ ಯುವಕನನ್ನು ಮದುವೆಯಾದ ಸಿಟ್ಟಿಗೆ ಆಕೆಯ ಗಂಡನನ್ನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಶಿರಸಿಯಲ್ಲಿ ನಡೆದಿದೆ. ಶನಿವಾರ ರಾತ್ರಿ ಶಿರಸಿಯಿಂದ ಬೆಂಗಳೂರಿಗೆ ಹೊರಟಿದ್ದ ಕೆಎಸ್ಸಾರ್ಟಿಸಿ ಬಸ್ನಲ್ಲಿ ಘಟನೆ ನಡೆದಿದೆ.

ಶಿರಸಿ, ಫೆ.23 : ಹತ್ತು ವರ್ಷದಿಂದ ಪ್ರೀತಿಸುತ್ತಿದ್ದ ಹುಡುಗಿ ಬೇರೆ ಯುವಕನನ್ನು ಮದುವೆಯಾದ ಸಿಟ್ಟಿಗೆ ಆಕೆಯ ಗಂಡನನ್ನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಶಿರಸಿಯಲ್ಲಿ ನಡೆದಿದೆ. ಶನಿವಾರ ರಾತ್ರಿ ಶಿರಸಿಯಿಂದ ಬೆಂಗಳೂರಿಗೆ ಹೊರಟಿದ್ದ ಕೆಎಸ್ಸಾರ್ಟಿಸಿ ಬಸ್ನಲ್ಲಿ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಿವಾಸಿ ಗಂಗಾಧರ್ ಹತ್ಯೆಯಾದ ಯುವಕ. ಶಿರಸಿ ನಗರದ ಸ್ಥಳೀಯ ನಿವಾಸಿ ಪ್ರೀತಮ್ ಡಿಸೋಜ ಕೊಲೆಗೈದ ವ್ಯಕ್ತಿ. ಘಟನೆ ಬಳಿಕ ಪ್ರೀತಮ್ ಡಿಸೋಜಾ ಸ್ಥಳದಿಂದ ಪರಾರಿಯಾಗಿದ್ದರೂ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

ಶಿರಸಿಯ ಯುವತಿ ಮತ್ತು ಪ್ರೀತಮ್ ಡಿಸೋಜ ಹತ್ತು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ. ಆದರೆ ಕೆಲಸಕ್ಕಾಗಿ ವರ್ಷದ ಹಿಂದೆ ಬೆಂಗಳೂರಿಗೆ ಹೋದ ಯುವತಿಗೆ, ಅಲ್ಲಿ ಸಾಗರದ ಯುವಕ ಗಂಗಾಧರ್ ಪರಿಚಯವಾಗಿದ್ದು ನಾಲ್ಕು ತಿಂಗಳ ಹಿಂದೆ ವಿವಾಹವಾಗಿದ್ದರು. ಫೆ.22ರ ಶನಿವಾರ ಗಂಗಾಧರ್, ಪತ್ನಿಯ ಸಂಬಂಧಿಕರ ಕಾರ್ಯಕ್ರಮಕ್ಕೆಂದು ಪತ್ನಿಯೊಂದಿಗೆ ಶಿರಸಿಗೆ ಬಂದಿದ್ದ. ಶನಿವಾರ ರಾತ್ರಿ ಬೆಂಗಳೂರಿಗೆ ಹಿಂತಿರುಗಲು ಶಿರಸಿಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಂದು ಬಸ್ಸಿನಲ್ಲಿ ಕುಳಿತಿದ್ದರು. ಈ ವೇಳೆ ಪ್ರೀತಮ್ ಕೂಡ ಅದೇ ಬಸ್ಸಿಗೆ ಹತ್ತಿದ್ದು, ಏಕಾಏಕಿ ಗಂಗಾಧರ್ ಜೊತೆಗೆ ಜಗಳಕ್ಕಿಳಿದಿದ್ದಾನೆ. ಇದೇ ವೇಳೆ, ಪ್ರೀತಮ್‌ ಕೈಯಲ್ಲಿದ್ದ ಚೂರಿ ತೆಗೆದು, ಗಂಗಾಧರ್‌ನ ಎದೆಯ ಭಾಗಕ್ಕೆ ಚುಚ್ಚಿದ್ದಾನೆ. ಗಂಭೀರ ಗಾಯಗೊಂಡ ಗಂಗಾಧರ್ ಆಸ್ಪತ್ರೆ ಒಯ್ಯುವಷ್ಟರಲ್ಲಿ ಸಾವನ್ನಪ್ಪಿದ್ದಾರೆ.

ಶಿರಸಿ ಡಿಎಸ್ಪಿ ಕೆ.ಎಲ್.ಗಣೇಶ, ಸಿಪಿಐ ಶಶಿಕಾಂತ ವರ್ಮಾ, ಪಿಎಸ್ಐ ನಾಗಪ್ಪ ಬಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

In an incident near the KSRTC bus stand in Sirsi, Uttara Kannada district, a man was stabbed to death aboard a bus full of scared passengers which was bound for Bengaluru The victim, Gangadhar from Neechadi in Sagar taluk, was travelling with his wife, Pooja, when it happened. Pooja had previously been in a decade-long relationship with Pritam D'Souza, the accused, before marrying Gangadhar four months ago after relocating to Bengalore for work.