ಬ್ರೇಕಿಂಗ್ ನ್ಯೂಸ್
24-02-25 09:43 pm Mangalore Correspondent ಕ್ರೈಂ
ಮಂಗಳೂರು, ಫೆ.24: ಮಂಗಳೂರು ನಗರ ಮಧ್ಯದ ಕೊಡಿಯಾಲಬೈಲಿನಲ್ಲಿರುವ ಸಬ್ ಜೈಲಿಗೆ ಹಿಂದಿನಿಂದಲೂ ಗಾಂಜಾ ಇನ್ನಿತರ ಮಾದಕ ಪದಾರ್ಥಗಳನ್ನು ಪೂರೈಸುವ ಆರೋಪಗಳಿದ್ದವು. ಇದೀಗ ಶಂಕಿತ ಗಾಂಜಾ ಪ್ಯಾಕೆಟನ್ನು ಹಾಡಹಗಲೇ ಸ್ಕೂಟರಿನಲ್ಲಿ ಬಂದಿದ್ದ ಇಬ್ಬರು ಯುವಕರು ಜೈಲು ಆವರಣ ಗೋಡೆಯ ಹೊರಗಿನಿಂದ ಬಹಿರಂಗವಾಗಿಯೇ ಎಸೆಯುತ್ತಿರುವ ದೃಶ್ಯ ಸೆರೆಯಾಗಿದ್ದು, ಜೈಲು ಆವರಣದಲ್ಲಿ ಗಾಂಜಾ ಪೂರೈಕೆ ಖುಲ್ಲಂ ಖುಲ್ಲಾ ಆಗಿದ್ಯಾ ಎನ್ನುವ ಅನುಮಾನ ಏಳುವಂತಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಕವಿತಾ ಸನಿಲ್, ತನ್ನ ಕಾರಿನಲ್ಲಿ ಜೈಲಿನ ಎದುರಿನಿಂದ ಸಾಗುತ್ತಿದ್ದಾಗಲೇ ಇಬ್ಬರು ಯುವಕರು ನಂಬರ್ ಪ್ಲೇಟ್ ಇಲ್ಲದ ಸ್ಕೂಟರಿನಲ್ಲಿ ಬಂದು ಪ್ಲಾಸ್ಟಿಕ್ ಪೊಟ್ಟಣದಲ್ಲಿ ವಸ್ತುವೊಂದನ್ನು ಎಸೆಯುತ್ತಿರುವುದು ಪತ್ತೆಯಾಗಿದೆ. ಕೂಡಲೇ ಸ್ಕೂಟರನ್ನು ಬೆನ್ನತ್ತಿದಾಗ, ಅದರಲ್ಲಿದ್ದವರು ಮಿಂಚಿನ ವೇಗದಲ್ಲಿ ಪರಾರಿಯಾಗಿದ್ದಾರೆ. ಇಬ್ಬರು ಯುವಕರು ಸ್ಕೂಟರ್ ನಿಲ್ಲಿಸಿ ಜೈಲು ಆವರಣದಿಂದ ಒಳಭಾಗಕ್ಕೆ ಪ್ಯಾಕೆಟ್ ಒಂದನ್ನು ಎಸೆಯುತ್ತಿರುವುದು ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ದಾಖಲಾಗಿದೆ.
ಜೈಲಿನ ಒಳಗಿರುವ ಕೈದಿಗಳು ಸಿಗರೇಟ್, ಗಾಂಜಾ ಸೇವನೆ ಮಾಡುತ್ತಿರುವುದು, ಜೊತೆಗೆ ಮೊಬೈಲ್ ಬಳಕೆಯನ್ನೂ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಬಹಳಷ್ಟು ಆಪಾದನೆ ಕೇಳಿಬಂದಿತ್ತು. ಪೊಲೀಸರು ದಾಳಿ ನಡೆಸಿದಾಗಲಂತೂ ಗಾಂಜಾ ಇನ್ನಿತರ ಮಾದಕ ಪದಾರ್ಥಗಳು, ಮೊಬೈಲ್ಗಳೂ ಪತ್ತೆಯಾಗಿದ್ದವು. ಇದೀಗ ಜೈಲಿನ ಆವರಣದ ಬೃಹತ್ ಗೋಡೆಯ ಹೊರಗಿನಿಂದ ಒಳಭಾಗಕ್ಕೆ ಸ್ಕೂಟರಿನಲ್ಲಿ ಬಂದಿದ್ದ ಯುವಕರು ಹಾಡಹಗಲೇ ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಗಾಂಜಾ ಎಸೆಯುತ್ತಿದ್ದಾರೆಯೇ ಎನ್ನುವ ರೀತಿಯ ವಿಡಿಯೋ ವೈರಲ್ ಆಗಿದೆ.
ಇದರ ಬೆನ್ನಲ್ಲೇ ಮಂಗಳೂರಿನ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮತ್ತು ಕವಿತಾ ಸನಿಲ್ ಜೈಲಿಗೆ ಭೇಟಿ ನೀಡಿದ್ದು, ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡಿದ್ದಾರೆ. ಜೈಲಿನ ಒಳಗಡೆ ನಿರಾತಂಕ ಎನ್ನುವಂತೆ ಗಾಂಜಾ ಪೂರೈಕೆ ಆಗುತ್ತಿದೆ, ಬಂಧೀಖಾನೆ ಇಲಾಖೆಯ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರೆ, ಗೃಹ ಸಚಿವರು ಇದ್ಯಾವುದರ ಗೊಡವೆ ಇಲ್ಲದಂತೆ ಇದ್ದಾರೆ ಎಂದು ಶಾಸಕ ಕಾಮತ್ ಟೀಕಿಸಿದ್ದಾರೆ. ಗಾಂಜಾ ಎಸೆಯುತ್ತಿರುವ ದೃಶ್ಯಕ್ಕೆ ಸಂಬಂಧಿಸಿ ಮಂಗಳೂರು ಜೈಲಿನ ಅಧೀಕ್ಷಕ ಆಶೇಖಾನ್ ಪ್ರತಿಕ್ರಿಯಿಸಿದ್ದು, ನಾವು ಜೈಲು ಆವರಣದಲ್ಲಿರುವ ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದ್ದೇವೆ. ಅದರಲ್ಲಿ ಗಾಂಜಾ ಸಿಕ್ಕಿಲ್ಲ, ಚಹಾ ಪುಡಿ ಮತ್ತು ಸಿಗರೇಟ್ ಎಸೆದಿರುವುದು ಸಿಕ್ಕಿದೆ. ಘಟನೆ ಬಗ್ಗೆ ತನಿಖೆ ನಡೆಸಲು ಬರ್ಕೆ ಠಾಣೆಗೆ ದೂರು ನೀಡಿದ್ದೇವೆ ಎಂದು ಹೇಳುವ ಮೂಲಕ ಪ್ಯಾಕೆಟ್ ಎಸೆದಿದ್ದನ್ನು ಹೌದೆಂದು ಒಪ್ಪಿಕೊಂಡಿದ್ದಾರೆ.
ಇತ್ತೀಚೆಗೆ ಜೈಲು ಆವರಣದ ನಿವಾಸಿಗಳು ಜಾಮರ್ ಅಳವಡಿಕೆಯಿಂದಾಗಿ ಮೊಬೈಲ್ ಸಂಪರ್ಕಕ್ಕೆ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಅಳಲು ಹೇಳಿಕೊಂಡಿದ್ದರು. ಆನ್ಲೈನ್ ಕ್ಲಾಸ್ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೂ ತೊಂದರೆ ಆಗುತ್ತಿದೆ, ಜಾಮರ್ ಯಂತ್ರದ ಪವರ್ ಕಡಿಮೆ ಮಾಡಬೇಕೆಂದು ಹೇಳಿದ್ದರು. ಆದರೆ ಜೈಲು ಹೊರಗಿನ ವ್ಯಕ್ತಿಗಳಿಗೆ ಜಾಮರ್ ಪ್ರಭಾವ ಇದ್ದರೂ, ಒಳಗಿರುವ ಕೈದಿಗಳಿಗೆ ಜಾಮರ್ ತೊಂದರೆ ಇಲ್ಲವೇ ಎನ್ನುವ ಪ್ರಶ್ನೆ ಎದುರಾಗಿದೆ. ಗಾಂಜಾ ಇನ್ನಿತರ ಪ್ಯಾಕೆಟ್ ಎಸೆಯುವಾಗ, ಒಳಗಿರುವ ಕೈದಿಗಳಿಗೆ ಇದೇ ಜಾಗದಲ್ಲಿ ಎಸೆದಿದ್ದೇವೆ ಎನ್ನುವ ಮಾಹಿತಿ ಹೇಗೆ ರವಾನೆಯಾಗುತ್ತದೆ ಎನ್ನುವುದು ಯಕ್ಷಪ್ರಶ್ನೆ.
Illegal drug supply to Mangalore jail captured in dash cam of car, video goes viral. Former mayor Kavitha sanil car has captured the illegal activity at Mangalore central jail.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm