ಬ್ರೇಕಿಂಗ್ ನ್ಯೂಸ್
25-02-25 01:37 pm HK News Desk ಕ್ರೈಂ
ತಿರುವನಂತಪುರ, ಫೆ.25: 23 ವರ್ಷದ ಯುವಕನೊಬ್ಬ ತನ್ನ ಅಜ್ಜಿ, ತಮ್ಮ, ಅಂಕಲ್, ಆಂಟಿ ಸೇರಿದಂತೆ ಒಂದೇ ಕುಟುಂಬದ ಐದು ಮಂದಿಯನ್ನು ಸಾಮೂಹಿಕವಾಗಿ ಹತ್ಯೆಗೈದು ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಭಯಾನಕ ಘಟನೆ ಕೇರಳ ರಾಜಧಾನಿ ತಿರುವನಂತಪುರರದಲ್ಲಿ ನಡೆದಿದೆ. ಸೋಮವಾರ ಸಂಜೆ ಕೃತ್ಯದ ಬಳಿಕ ಯುವಕ ವೆಂಜರಮೂಡ್ ಪೊಲೀಸ್ ಠಾಣೆಗೆ ಆಗಮಿಸಿ ಶರಣಾಗಿದ್ದು, ಪೊಲೀಸರು ದಿಗ್ಭ್ರಾಂತರಾಗಿದ್ದಾರೆ.
ತಿರುವನಂತಪುರದ ವೆಂಜರಮೂಡ್ ನಿವಾಸಿ ಅಫಾನ್ (23) ಸಾಮೂಹಿಕ ನರಮೇಧ ನಡೆಸಿರುವ ತಲೆಗೆಟ್ಟ ಯುವಕ. ಸೋಮವಾರ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯ ನಡುವೆ 26 ಕಿಮೀ ಆಸುಪಾಸಿನಲ್ಲಿ ಬೈಕಿನಲ್ಲಿ ಸುತ್ತಾಡಿ ಬೇರೆ ಬೇರೆ ಮನೆಗಳಿಗೆ ತೆರಳಿ ತನ್ನ ಅತ್ಯಾಪ್ತರನ್ನೇ ಕೊಂದು ಹಾಕಿದ್ದಾನೆ. ಮೊದಲಿಗೆ, ಅಜ್ಜಿ 80 ವರ್ಷದ ಸಲ್ಮಾ ಬೀವಿಯನ್ನು ಸುತ್ತಿಗೆಯಲ್ಲಿ ಬಡಿದು ಕೊಂದಿದ್ದಾನೆ. ಆನಂತರ, ಅಲ್ಲಿಂದ 9 ಕಿಮೀ ದೂರದ ಮಾವನ ಮನೆಗೆ ತೆರಳಿದ್ದು, ಅಲ್ಲಿ ಮಾವ ಲತೀಫ್, ಅವರ ಪತ್ನಿ ಶಾಹಿದಾ ಅವರನ್ನು ಸುತ್ತಿಗೆ ಮತ್ತು ಚೂರಿಯಿಂದ ತಿವಿದು ಕೊಂದು ಹಾಕಿದ್ದಾನೆ.
ಆನಂತರ, ತನ್ನ ಮನೆಗೆ ಬಂದು ಕಿರಿಯ ಸೋದರ 13 ವರ್ಷದ ಅಹ್ಸಾನನ್ನು ಬೈಕಿನಲ್ಲಿ ಹೊರಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಆತನ ಫೇವರಿಟ್ ಫುಡ್ ಅರೇಬಿಯನ್ ಖಾದ್ಯಗಳನ್ನು ತೆಗೆದುಕೊಟ್ಟು ತಿನ್ನಿಸಿದ್ದಾನೆ. ಮನೆಗೆ ಹಿಂತಿರುಗಿ ಬಂದು ಸುತ್ತಿಗೆಯಿಂದ ಅಪ್ರಾಪ್ತ ಸೋದರನ ತಲೆಗೆ ಬಡಿದು ಕೊಂದಿದ್ದಾನೆ, ಆನಂತರ, ಕ್ಯಾನ್ಸರ್ ರೋಗಿಯಾಗಿರುವ ತನ್ನ ತಾಯಿಗೂ ಹಲ್ಲೆ ಮಾಡಿದ್ದಾನೆ. ಆದರೆ ತಾಯಿ ಜೀವನ್ಮರಣ ಸ್ಥಿತಿಯಲ್ಲಿ ಬದುಕುಳಿದಿದ್ದಾರೆ. ಇದರ ನಡುವೆ, ತನ್ನ ಪ್ರಿಯತಮೆ ಫರ್ಸಾನಾ ಮನೆಗೆ ಹೋಗಿ ಆಕೆಗೂ ಹಲ್ಲೆಗೈದು ಕೊಂದಿದ್ದಲ್ಲದೆ, ಆಕೆಯ ಮನೆಯಲ್ಲಿದ್ದ ಎಲ್ ಪಿಜಿ ಸಿಲಿಂಡರನ್ನು ಓಪನ್ ಮಾಡಿಟ್ಟು ಹೊರಗೆ ಬಂದಿದ್ದಾನೆ.
ಕೃತ್ಯಕ್ಕೇನು ಕಾರಣ ಎಂದು ತಕ್ಷಣಕ್ಕೆ ತಿಳಿದಿಲ್ಲ. ಡ್ರಗ್ಸ್ ವ್ಯಸನ ಅಥವಾ ಆರ್ಥಿಕ ಮುಗ್ಗಟ್ಟಿನಿಂದ ಇಂತಹ ಕೃತ್ಯ ಎಸಗಿರಬಹುದೇ ಎಂಬ ಅನುಮಾನ ಇದೆ. ಆತನ ಹೇಳಿಕೆ ಪಡೆದ ನಂತರವಷ್ಟೇ ಘಟನೆಗೆ ಕಾರಣ ತಿಳಿಯಬಹುದು ಎಂದು ತಿರುವನಂತಪುರಂ ರೂರಲ್ ಎಸ್ಪಿ ಕೆ.ಎಸ್ ಸುದರ್ಶನ್ ತಿಳಿಸಿದ್ದಾರೆ. ಅಫಾನ್ ತಂದೆ ಅಬ್ದುಲ್ ರಹಿಮಾನ್ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದು, ಸುದ್ದಿ ಚಾನೆಲ್ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಆರ್ಥಿಕ ತೊಂದರೆ ಇತ್ತು. ಆದರೆ ಆ ಕಾರಣಕ್ಕೆ ಮಗ ಇಂತಹ ಕೃತ್ಯ ಮಾಡುತ್ತಾನೆಂದು ಅನಿಸುತ್ತಿಲ್ಲ. ವಿಸಿಟಿಂಗ್ ವೀಸಾದಲ್ಲಿ ಸೌದಿಗೂ ಬಂದಿದ್ದ, ಆರು ತಿಂಗಳ ಕಾಲ ಇದ್ದುಕೊಂಡು ತೆರಳಿದ್ದ. ಇಲ್ಲಿಂದ ಹೋಗುವಗಾ ಸಂತೋಷವಾಗಿಯೇ ಇದ್ದ. ಹಣಕಾಸು ಸಮಸ್ಯೆಗಾಗಿ ಆಸ್ತಿ ಮಾರಾಟಕ್ಕೂ ಮುಂದಾಗಿದ್ದ. ಸಂಬಂಧಿಕರು ಏನೋ ಹುಡುಗಿ ಜೊತೆಗೆ ಅಫೇರ್ ಇತ್ತೆಂದು ಹೇಳುತ್ತಿದ್ದಾರೆ. ಆದರೆ ನಾವೇನೂ ಆತನ ಸಂಬಂಧಕ್ಕೆ ಅಡ್ಡಿ ಬರಲಿಲ್ಲ. ಆಕೆಯ ಬಳಿಯಿಂದಲೂ ಹಣ ಪಡೆದಿದ್ನಂತೆ. ಏನು ವಿಷಯ ಎಂದು ತಿಳಿಯುತ್ತಿಲ್ಲ ಎಂದು ಫೋನಲ್ಲಿ ಸಂಪರ್ಕಿಸಿದ ಚಾನೆಲ್ ಒಂದಕ್ಕೆ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.
ಸದ್ಯಕ್ಕೆ ವಿಷ ಸೇವನೆ ಮಾಡಿರುವುದರಿಂದ ಆರೋಪಿ ಅಫಾನ್ ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೀಗಾಗಿ ಯಾಕಾಗಿ ಇಂತಹ ಸಾಮೂಹಿಕ ಹತ್ಯೆಗೆ ಕಾರಣವಾಗಿದ್ದಾನೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಸ್ಥಳೀಯರು ಹೇಳುವ ಪ್ರಕಾರ, ಯುವಕ ಭಾರೀ ಸೌಮ್ಯ ಸ್ವಭಾವದವನಾಗಿದ್ದು, ಇಂತಹ ಕೃತ್ಯ ಎಸಗಿದ್ದಾನೆಂದು ನಂಬುವುದಕ್ಕೂ ಆಗಲ್ಲ ಎನ್ನುತ್ತಿದ್ದಾರೆ.
A chilling case of mass murder unfolded in Kerala's Thiruvananthapuram on Monday when a 23-year-old man walked into a police station and claimed to have killed six people, including his mother, teenage brother, and girlfriend. Police have so far confirmed five deaths.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 02:34 pm
Mangalore Correspondent
Puttur doctor, C Section, Mangalore: ಸಿಸೇರಿಯನ...
25-02-25 12:24 pm
Puttur News, Dr Anil Baipadithaya, hospital:...
24-02-25 02:50 pm
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
25-02-25 01:37 pm
HK News Desk
Delhi crime, Wife Murder: ತ್ರಿವೇಣಿ ಸಂಗಮದಲ್ಲಿ...
24-02-25 10:51 pm
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm