ಬ್ರೇಕಿಂಗ್ ನ್ಯೂಸ್
25-02-25 08:10 pm Mangalore Correspondent ಕ್ರೈಂ
ಮಂಗಳೂರು, ಫೆ.25: ಯಾವುದೇ ಅಪರಾಧ ಪ್ರಕರಣದಲ್ಲಿ ಪೊಲೀಸರು ಕರಾರುವಾಕ್ ಕೆಲಸ ಮಾಡಿದರೆ, ಅದಕ್ಕೆ ತಕ್ಕಂತೆ ಚಾರ್ಜ್ ಶೀಟ್ ಹಾಕಿದರೆ ಆರೋಪಿಗಳು ಕೋರ್ಟ್ ಕಟಕಟೆಯಲ್ಲು ಶಿಕ್ಷೆಗೆ ಒಳಗಾಗುತ್ತಾರೆ. ಯಾಕಂದ್ರೆ, ಇಂತಹ ಅಪರಾಧಕ್ಕೆ ಇಂಥದ್ದೇ ಶಿಕ್ಷೆ ಎನ್ನುವುದನ್ನು ಕಾನೂನು ಭಾಷೆಯಲ್ಲಿ ಮೊದಲು ನಮೂದಿಸುವುದು ಪೊಲೀಸರ ಕೆಲಸ. ಅದಕ್ಕಾಗಿಯೇ ಪೊಲೀಸರಿಗೆ ಅಪರಾಧ ಸಂಹಿತೆಯ ಬಗ್ಗೆ ತರಬೇತಿ ಆಗಿರುತ್ತದೆ. ಕೋರ್ಟಿನಲ್ಲಿ ಸಾಕ್ಷ್ಯಗಳನ್ನು ಮುಂದಿಟ್ಟು ಪೊಲೀಸರು ಅಪರಾಧ ಸಾಬೀತುಪಡಿಸಿದರೆ, ಅದನ್ನು ಅನುಮೋದಿಸಿ ಶಿಕ್ಷೆ ಕೊಡುವುದು ನ್ಯಾಯಾಂಗದ ಕೆಲಸ.
ಕೆಲವೊಮ್ಮೆ ಆರೋಪಿಗಳು ಪ್ರಭಾವಿಗಳಾದ ಸಂದರ್ಭದಲ್ಲಿ ತನಿಖೆ ನಡೆಸುವ ಪೊಲೀಸರನ್ನೇ ಖರೀದಿಸಿಬಿಡುವುದು, ತಮಗೆ ಬೇಕಾದಂತೆ ಸಡಿಲ ಚಾರ್ಜ್ ಶೀಟ್ ಹಾಕಿಸುವಂತೆ ಮಾಡುವುದು, ಕೋರ್ಟಿನಲ್ಲಿ ಸಾಕ್ಷಿಗಳನ್ನು ಪ್ರಭಾವಿಸಿ ಕೇಸು ಬಿದ್ದು ಹೋಗುವಂತೆ ಮಾಡುವುದೂ ಇರುತ್ತದೆ. ಸೈಬರ್ ಅಪರಾಧ ಪ್ರಕರಣ ಒಂದರಲ್ಲಿ ಬಂಧಿತರಾಗಿದ್ದ ಆರೋಪಿಗಳ ಜೊತೆಗೆ ಮಂಗಳೂರಿನ ಉರ್ವಾ ಠಾಣೆ ಪೊಲೀಸರು ಸಲುಗೆಯಿಂದ ವರ್ತಿಸಿರುವ ಆರೋಪ ಕೇಳಿಬಂದಿದ್ದು, ಇದರ ಫೋಟೋ ಜಾಲತಾಣದಲ್ಲಿ ಲೀಕ್ ಆಗಿದೆ. ಆಮೂಲಕ ಮಂಗಳೂರಿನ ಪೊಲೀಸರೂ ಬಂಧಿತ ಆರೋಪಿಗಳನ್ನು ತನಿಖೆಗೆ ಒಳಪಡಿಸುವುದು ಬಿಟ್ಟು ಅವರ ಪರವಾಗಿ ವರ್ತಿಸಿದ್ದಾರೆಯೇ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಮೂರು ತಿಂಗಳ ಹಿಂದೆ ಜಾಗತಿಕ ದೈತ್ಯ ಅಮೆಜಾನ್ ಕಂಪನಿಗೆ 30 ಕೋಟಿಗೂ ಹೆಚ್ಚು ದೋಖಾ ಮಾಡಿ ತಮಿಳುನಾಡಿನಲ್ಲಿ ಸಿಕ್ಕಿಬಿದ್ದ ರಾಜಸ್ಥಾನಿ ಮೂಲದ ಇಬ್ಬರು ಕತರ್ನಾಕ್ ಆರೋಪಿಗಳನ್ನು ಮಂಗಳೂರಿನ ಉರ್ವಾ ಪೊಲೀಸರು ಬಾಡಿ ವಾರೆಂಟ್ ಪಡೆದು ಕರೆತಂದಿದ್ದರು. ಉರ್ವಾದಲ್ಲಿ ದಾಖಲಾದ ಪ್ರಕರಣದಲ್ಲಿ ರಾಜಕುಮಾರ್ ಮೀನಾ(26) ಮತ್ತು ಸುಭಾಸ್ ಗುಜ್ಜರ್ (27) ಎಂಬ ಇಬ್ಬರನ್ನು 2024ರ ನವೆಂಬರ್ 1ರಂದು ಅರೆಸ್ಟ್ ಮಾಡಲಾಗಿತ್ತು. ಬಂಧಿತರನ್ನು ನವೆಂಬರ್ ತಿಂಗಳಲ್ಲೇ ಹೆಚ್ಚಿನ ವಿಚಾರಣೆ ಸಲುವಾಗಿ ಪೊಲೀಸರು ಕಸ್ಟಡಿಗೆ ಪಡೆದಿದ್ದು, ಈ ವೇಳೆ ರಾಜಸ್ಥಾನಕ್ಕೂ ಕರೆದೊಯ್ಯಲಾಗಿತ್ತು.
ಆದರೆ ಪೊಲೀಸರು ಆರೋಪಿಗಳ ಜೊತೆಗೇ ಸಲುಗೆ ಬೆಳೆಸಿಕೊಂಡು ರಾಜಸ್ಥಾನದ ಪ್ರವಾಸಿ ಸ್ಥಳಗಳಿಗೆ ಸುತ್ತಾಟ ಮಾಡಿರುವ ಫೋಟೋಗಳು ಲಭ್ಯವಾಗಿದ್ದು, ಪೊಲೀಸರ ಕರ್ತವ್ಯದ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ. ಆರೋಪಿ ರಾಜಕುಮಾರ್ ಮೀನಾ ಮೊಬೈಲ್ ಹಿಡಿದು ತಾನೇ ಪೊಲೀಸರೊಂದಿಗೆ ಸೆಲ್ಫಿ ತೆಗೆಸಿಕೊಂಡಿರುವ ಫೋಟೋಗಳಿವೆ. ಮತ್ತೊಂದು ಫೋಟೋದಲ್ಲಿ ಪೊಲೀಸ್ ಸಿಬಂದಿಯೇ ಆರೋಪಿ ಹೆಗಲಿಗೆ ಕೈಹಾಕಿರುವ ರೀತಿಯ ಪೋಸು ಇದೆ. ಇದನ್ನೆಲ್ಲ ನೋಡಿದರೆ ಕೋಟ್ಯಂತರ ವಹಿವಾಟು ನಡೆಸಿ ಸಿಕ್ಕಿಬಿದ್ದ ಆರೋಪಿಗಳು, ಉರ್ವಾ ಠಾಣೆ ಪೊಲೀಸರನ್ನು ಪ್ರಭಾವಿಸಿದ್ದಾರೆಯೇ ಎನ್ನುವ ಸಂಶಯ ಮೂಡುವಂತಾಗಿದೆ.
ಇದಲ್ಲದೆ, ಠಾಣೆಗೆ ಬಂದಿದ್ದ ಕಾಲೇಜು ಒಂದರ ವಿದ್ಯಾರ್ಥಿಗಳಿಗೆ ಉರ್ವಾ ಠಾಣೆಯ ಇನ್ಸ್ ಪೆಕ್ಟರ್ ಭಾರತಿ ಅವರು ಕ್ಲಾಸ್ ಮಾಡುತ್ತಿರುವಾಗಲೇ ಸೈಬರ್ ಪ್ರಕರಣದ ಆರೋಪಿಯನ್ನು ಜೊತೆಗೆ ನಿಲ್ಲಿಸಿ, ಆತನಿಂದಲೂ ಹೆಚ್ಚಿನ ಪಾಠ ಹೇಳಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ರೀತಿ ಪಾಠ ಹೇಳಿಸಿಕೊಳ್ಳುತ್ತಿರುವ ಫೋಟೋ ಲಭ್ಯವಾಗಿದ್ದು, ಸೈಬರ್ ಅಪರಾಧ ಎಸಗಿದ ಆರೋಪಿಯಿಂದಲೇ ಪೊಲೀಸರು ವಿದ್ಯಾರ್ಥಿಗಳಿಗೆ ಸೈಬರ್ ಜಾಗೃತಿ ಪಾಠ ಮಾಡಿಸಿರುವಂತಿದೆ. ಆರೋಪಿಗಳು ಸೈಬರ್ ವಿಚಾರದಲ್ಲಿ ಎಷ್ಟೇ ಎಕ್ಸ್ ಪರ್ಟ್ ಆಗಿದ್ದರೂ, ಅಪರಾಧ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವಾಗ ಅವರನ್ನು ವಿದ್ಯಾರ್ಥಿಗಳ ಮುಂದೆ ರೋಲ್ ಮಾಡೆಲ್ ಮಾಡುವುದು ತಪ್ಪಾಗುತ್ತದೆ. ಈ ತಪ್ಪನ್ನು ಉರ್ವಾ ಪೊಲೀಸರು ಮಾಡಿದ್ದಾರೆ.
ನವೆಂಬರ್ ತಿಂಗಳಲ್ಲಿ ಆರೋಪಿಗಳ ಜೊತೆಗೆ ಪೊಲೀಸರು ಸುತ್ತಾಟ ಮಾಡಿದ್ದರೂ, ಇದರ ಫೋಟೋ ಮೂರು ತಿಂಗಳ ಬಳಿಕ ಲೀಕ್ ಆಗಿದೆ. ಉರ್ವಾ ಠಾಣೆಯಲ್ಲಿ ಗುಂಪುಗಾರಿಕೆ ಇದೆ ಎನ್ನಲಾಗುತ್ತಿದ್ದು, ಇದೇ ವೈಷಮ್ಯದಲ್ಲಿ ಒಂದು ಕಡೆಯವರು ಈ ಫೋಟೋ ಲೀಕ್ ಮಾಡಿದ್ದಾರೆಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಮಾಹಿತಿ ಕೇಳಲು ಕಮಿಷನರ್ ಅಥವಾ ಮಂಗಳೂರು ನಗರ ಡಿಸಿಪಿಗೆ ಫೋನ್ ಮಾಡಿದರೆ, ಸಂಪರ್ಕಕ್ಕೆ ಸಿಕ್ಕಿಲ್ಲ.
In a surprising turn of events, the Urwa police in Mangalore, led by Inspector Bharathi, recently apprehended an online fraudster from Rajasthan who allegedly orchestrated a scam that defrauded Amazon of a staggering Rs 30 crores. While the police team’s successful operation should be lauded, the situation took an unexpected twist when pictures surfaced showing the officers enjoying leisurely activities and sightseeing with the accused
25-02-25 10:30 pm
Bangalore Correspondent
Belagavi Accident, Kumbh Mela: ಬಸ್ ಗೆ ಡಿಕ್ಕಿ...
24-02-25 01:36 pm
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
25-02-25 10:58 pm
Mangalore Correspondent
C-Band Doppler Weather Radar, Mangalore: ಮಂಗಳ...
25-02-25 09:34 pm
Bantwal accident, Mangalore: ಚಾಲಕಿಯ ಧಾವಂತಕ್ಕೆ...
25-02-25 02:34 pm
Puttur doctor, C Section, Mangalore: ಸಿಸೇರಿಯನ...
25-02-25 12:24 pm
Puttur News, Dr Anil Baipadithaya, hospital:...
24-02-25 02:50 pm
25-02-25 08:10 pm
Mangalore Correspondent
Mangalore, Kotekar bank robbery, Bhaskar Belc...
25-02-25 05:18 pm
Kerala Murder, Crime, Affan: ತಿರುವನಂತಪುರ ; ಒಂ...
25-02-25 01:37 pm
Delhi crime, Wife Murder: ತ್ರಿವೇಣಿ ಸಂಗಮದಲ್ಲಿ...
24-02-25 10:51 pm
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm