ಬ್ರೇಕಿಂಗ್ ನ್ಯೂಸ್
01-03-25 02:40 pm Mangalore Correspondent ಕ್ರೈಂ
ಮಂಗಳೂರು, ಮಾ.1 : ಜಾತ್ರೆ, ಕಂಬಳೋತ್ಸವ, ಬಸ್, ರೈಲ್ವೇ ನಿಲ್ದಾಣಗಳಲ್ಲಿ ನಿಲ್ಲಿಸಿ ಹೋಗುವ ಬೈಕ್, ದ್ವಿಚಕ್ರ ವಾಹನಗಳನ್ನು ಕದ್ದು ರಹಸ್ಯವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಭೇದಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಮೂಲದ, ಮೂಡುಬಿದ್ರೆಯಲ್ಲಿ ಗ್ಯಾರೇಜ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರಮುಖ ಆರೋಪಿ ಮಣಿಕಂಠ ಗೌಡ ಕೆ. (24) ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಮಣಿಕಂಠ ಗೌಡ ಅಂತರ್ ಜಿಲ್ಲಾ ದ್ವಿಚಕ್ರ ವಾಹನ ಕಳ್ಳನಾಗಿದ್ದು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಕಳವು ಮತ್ತು ಮಾರಾಟ ಜಾಲ ನಡೆಸುತ್ತಿದ್ದನು. ಮೂಡುಬಿದ್ರೆಯಲ್ಲಿ ಕಳವು ಮಾಡಿ ಬಚ್ಚಿಡಲಾಗಿದ್ದ 20ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸದ್ಯಕ್ಕೆ ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಡೆದ ಬೈಕ್ ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಜಾತ್ರೆ, ಕಂಬಳೋತ್ಸವ, ಬಸ್, ರೈಲ್ವೇ ನಿಲ್ದಾಣಗಳಲ್ಲಿ ನಿಲ್ಲಿಸಿ ಹೋಗಿರುವ ಬೈಕ್ ಗಳನ್ನು ಕದಿಯುತ್ತಿದ್ದ. ಸ್ವತಃ ಮೆಕ್ಯಾನಿಕ್ ಆಗಿದ್ದರಿಂದ ವಾಹನಗಳ ಇಗ್ನಿಷನ್ ಸಾಕೆಟ್ ಪ್ಲಗ್ಗನ್ನು ಚಾಕಚಕ್ಯತೆಯಿಂದ ತಪ್ಪಿಸಿ, ಬೈಕ್ ಕಳ್ಳತನ ಮಾಡಿಕೊಂಡು ಹೋಗುತಿದ್ದ. ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ಗಳಿಗೆ ರೀಸೇಲ್ ವ್ಯಾಲ್ಯೂ ಹೆಚ್ಚಿರುವುದರಿಂದ ಅದನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ.
ಮಣಿಕಂಠ ಸೊರಬ ಮೂಲದ ನಿವಾಸಿಯಾಗಿದ್ದರೂ, ತನ್ನ ಕುಟುಂಬದೊಂದಿಗೆ ಮೂಡಬಿದ್ರೆಯಲ್ಲಿ ವಾಸ್ತವವ್ಯವಿದ್ದ. ಕದ್ದ ಬೈಕ್ ಗಳನ್ನು ರೀಸೇಲ್ ಮಾಡುವುದಕ್ಕಾಗಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದ. ಈತನಿಂದ ಕಾರ್ಕಳದ ಸತೀಶ್ ಬಂಗೇರ, ಮೂಡಬಿದ್ರೆಯ ದೀಕ್ಷಿತ್, ತಾಳಿಕೋಟೆಯ ಸಂಗಣ್ಣ ಹೊನ್ನಳ್ಳಿ ಎಂಬವರು ಬೈಕ್ ಗಳನ್ನು ಖರೀದಿಸಿ ರೀ ಸೇಲ್ ಮಾಡುತ್ತಿದ್ದರು ಎನ್ನುವುದನ್ನು ಪೊಲೀಸರು ಪತ್ತೆಹಚ್ಚಿದ್ದು ಅವರನ್ನೂ ಬಂಧಿಸಿದ್ದಾರೆ.
ಸೂಕ್ತ ದಾಖಲೆಗಳಿಲ್ಲದ ವಾಹನಗಳನ್ನು ಪಡೆದು ಮಾರಾಟ ಮಾಡುತ್ತಿದ್ದ ಕಾರಣಕ್ಕೆ ಅವರ ಮೇಲೆ ಕೇಸು ದಾಖಲಿಸಲಾಗಿದೆ. ಮಂಗಳೂರು ಬಂದರು, ಪಾಂಡೇಶ್ವರ, ಬಜ್ಪೆ, ಮುಲ್ಕಿ, ಉಳ್ಳಾಲ, ಕಂಕನಾಡಿ ನಗರ ಠಾಣೆ ವ್ಯಾಪ್ತಿಯ 15 ಪ್ರಕರಣ ಹಾಗೂ ಬಂಟ್ವಾಳ ನಗರ, ಗ್ರಾಮಾಂತರ, ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ ಐದು ಪ್ರಕರಣ ಸೇರಿ 20 ಕೇಸುಗಳನ್ನು ಪತ್ತೆ ಮಾಡಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾಗಿದ್ದ ಬೈಕ್ ಕಳವು ಪ್ರಕರಣ ಬೆನ್ನತ್ತಿದ ಪೊಲೀಸರು ಕುಖ್ಯಾತ ಚಾಲಾಕಿ ಕಳ್ಳನನ್ನು ಅರೆಸ್ಟ್ ಮಾಡಿದ್ದಾರೆ.
Mangalore Kankandy town police nab natouries bike gang Thieves, 20 stolen bikes recovered. The police have attested four including one from Moodbidri. Kankandy town inspector T D Nagraj and team have succeeded in arresting four bike robbers.
28-02-25 09:33 pm
HK News Desk
B Y Vijayendra, D K Shivakumar: ರಾಜ್ಯದಲ್ಲಿ ಕ್...
28-02-25 06:17 pm
ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಸಿಐಎಸ್ಎಫ್ ಭದ್ರತಾ ಸಿಬ...
28-02-25 05:52 pm
Mangalore Shiradi Ghat: ಶಿರಾಡಿ ಘಾಟ್ ಹೆದ್ದಾರಿಯ...
28-02-25 11:51 am
Honnavara Fire: ಹೊನ್ನಾವರದಲ್ಲಿ ಗುಜರಿ ಗೋಡೌನ್ಗೆ...
27-02-25 05:50 pm
01-03-25 05:35 pm
HK News Desk
Pope Francis: ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗ...
01-03-25 01:20 pm
ಟ್ರಂಪ್ ಸುಂಕ ಬರೆಗೆ ನಲುಗಿದ ಷೇರುಪೇಟೆ ; NIFTY ಇತಿ...
28-02-25 08:11 pm
ಪಾಕಿಸ್ತಾನ ಮದ್ರಸಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ;...
28-02-25 07:46 pm
Sudan Plane Crash: ಸುಡಾನಲ್ಲಿ ಹೆಚ್ಚುತ್ತಿರುವ ಅಂ...
26-02-25 05:38 pm
01-03-25 01:47 pm
Mangalore Correspondent
Mangalore, Nantoor-KPT road, Highway: ಅಧಿಕಾರಿ...
28-02-25 10:15 pm
Sharan Pumpwell, student missing, Farangipete...
28-02-25 06:13 pm
Mangalore Heat Wave: ಕರಾವಳಿಗೆ ಇನ್ನೂ ನಾಲ್ಕೈದು...
27-02-25 11:07 pm
Kotekar Robbey case, Bhaskar Belchada, Saheb...
27-02-25 10:48 pm
01-03-25 05:54 pm
HK News Desk
Bike Robbery, Mangalore Police, Crime, TD Nag...
01-03-25 02:40 pm
5 ವರ್ಷದ ಹೆಣ್ಣು ಮಗುವಿಗೆ ಕ್ರೂರ ಹಿಂಸೆ ನೀಡಿ ಅತ್ಯಾ...
28-02-25 02:37 pm
Bidar Murder, Crime: ಬೀದರ್ ; ಕುಡಿದು ಬಂದು ಕಿರು...
26-02-25 10:48 pm
Sirsi Crime, stabbing: ಶಿವರಾತ್ರಿ ಹಬ್ಬಕ್ಕೆ ಮನೆ...
26-02-25 01:27 pm