ಬ್ರೇಕಿಂಗ್ ನ್ಯೂಸ್
03-03-25 01:51 pm HK News Desk ಕ್ರೈಂ
ಚಂಡೀಗಢ, ಮಾ.3: ಹರ್ಯಾಣದಲ್ಲಿ ಕಾಂಗ್ರೆಸಿನಲ್ಲಿ ಗುರುತಿಸಿಕೊಂಡಿದ್ದ ಯುವ ಕಾರ್ಯಕರ್ತೆಯನ್ನು ಬರ್ಬರವಾಗಿ ಕೊಲೆಗೈದು ಸೂಟ್ ಕೇಸ್ ನಲ್ಲಿ ಮುಚ್ಚಿಟ್ಟು ಎಸೆದು ಹೋಗಿರುವ ಘಟನೆ ನಡೆದಿದ್ದು, ಭಾರೀ ಸಂಚಲನ ಎಬ್ಬಿಸಿದೆ. ರೋಹ್ಟಕ್ ನಿವಾಸಿ ಹಿಮಾನಿ ನರ್ವಾಲ್ (22) ಕೊಲೆಯಾದ ಯುವತಿಯಾಗಿದ್ದು, ಕಾಂಗ್ರೆಸ್ ನಾಯಕರೇ ಈ ಕೊಲೆ ಮಾಡಿಸಿದ್ದಾರೆ ಎಂದು ಆಕೆಯ ತಾಯಿ ಆರೋಪಿಸಿದ್ದಾರೆ.
ರಾಹುಲ್ ಗಾಂಥಿ ಮತ್ತು ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪೇಂದರ್ ಹೂಡಾ ಕುಟುಂಬದ ಜೊತೆಗೆ ಆಪ್ತವಾಗಿ ಗುರುತಿಸಿಕೊಂಡಿದ್ದ ಹಿಮಾನಿ ನರ್ವಾಲ್, ರಾಹುಲ್ ಜೊತೆಗಿನ ಭಾರತ್ ಯಾತ್ರಾ ಪಾದಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದಳು. ಹರ್ಯಾಣದಿಂದ ಶ್ರೀನಗರದ ವರೆಗೂ ಕಾಲ್ನಡಿಗೆ ಯಾತ್ರೆಯಲ್ಲಿ ರಾಹುಲ್ ಜೊತೆಗೆ ಭಾಗವಹಿಸಿದ್ದಳು. ಆ ಸಂದರ್ಭದಲ್ಲಿ ಕೊಠಡಿ ಹಂಚಿಕೆ ಸಂಬಂಧ ರಾಜ್ಯದ ಕೆಲವು ನಾಯಕರ ಜೊತೆಗೆ ಮನಸ್ತಾಪ ಆಗಿತ್ತು. ರಾಹುಲ್ ಮತ್ತು ಪಕ್ಷದ ಹಿರಿಯ ನಾಯಕ ಭೂಪೇಂದರ್ ಸಿಂಗ್ ಹೂಡಾ ಜೊತೆ ಉತ್ತಮ ಒಡನಾಟವಿತ್ತು. ಇದನ್ನು ಸಹಿಸದೆ ಕೆಲವರು ಕೊಲೆ ಮಾಡಿದ್ದಾರೆ ಎಂದು ಹಿಮಾನಿ ಅವರ ತಾಯಿ ಸವಿತಾ ಆರೋಪ ಮಾಡಿದ್ದಾರೆ.



ಹರ್ಯಾಣದಲ್ಲಿ ಬಿಜೆಪಿ ಆಡಳಿತವಿದ್ದು, ಕಾಂಗ್ರೆಸ್ ಕಾರ್ಯಕರ್ತೆಯ ಹತ್ಯೆ ಮತ್ತು ಪಕ್ಷದ ನಾಯಕರ ವಿರುದ್ಧವೇ ತಾಯಿ ಆರೋಪ ಮಾಡಿರುವುದು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಕೃತ್ಯವನ್ನು ಯಾರು ಮಾಡಿದ್ದರೂ ಅವರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸುತ್ತೇವೆ ಎಂದು ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಹೇಳಿದ್ದಾರೆ. ಶುಕ್ರವಾರ ಪಕ್ಷದ ಕಾರ್ಯಕ್ರಮದಲ್ಲಿ ಬಿಝಿಯಾಗಿದ್ದ ಹಿಮಾನಿ ನರ್ವಾಲ್, ಶನಿವಾರ ರೋಹ್ಟಕ್ ನಗರದ ಬಸ್ ನಿಲ್ದಾಣದ ಬಳಿ ಎಸೆದು ಹೋಗಿದ್ದ ಸೂಟ್ ಕೇಸ್ ನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಕುತ್ತಿಗೆಯನ್ನು ಆಕೆಯ ಶಾಲಿನಿಂದಲೇ ಬಿಗಿದು ಕೊಲೆ ಮಾಡಲಾಗಿತ್ತು. ಪೊಲೀಸರು ಘಟನೆ ಸಂಬಂಧಿಸಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಫೆ.27ರಂದು ನಾನು ಆಕೆಯ ಜೊತೆಗೆ ಮಾತನಾಡಿದ್ದೆ. ಮರುದಿನ ಪಕ್ಷದ ಕಾರ್ಯಕ್ರಮಕ್ಕಾಗಿ ಬಿಝಿಯಾಗಿದ್ದೇನೆ ಎಂದು ಹೇಳಿದ್ದಳು. ಪಕ್ಷದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿದ್ದಳು. ಮರುದಿನ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ನನ್ನ ಮಗಳ ಏಳಿಗೆ ಸಹಿಸದೆ ಪಕ್ಷದವರೇ ಯಾರೋ ಕೊಲೆ ಮಾಡಿದ್ದಾರೆ. ನನ್ನ ಮಗಳಿಗೆ ನ್ಯಾಯ ಸಿಗಬೇಕು, ಆರೋಪಿಗಳನ್ನು ಬಂಧನ ಮಾಡೋವರೆಗೂ ಶವ ಸುಡುವುದಿಲ್ಲ ಎಂದು ಹೇಳಿ ಭಾನುವಾರ ತಾಯಿ ಸವಿತಾ ಪ್ರತಿಭಟನೆ ಮಾಡಿದ್ದಾರೆ.
A woman's body was found in a suitcase in Haryana’s Rohtak on Saturday, and the Congress party identified the victim as a party worker and have demanded a “high-level probe into the murder”. The body was found in a large blue suitcase near the Sampla bus stand on Friday, following which Sampla police were alerted.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 09:21 pm
Mangaluru Staffer
National Conference on Neuropsychiatry Held a...
23-01-26 09:08 pm
ನಾರ್ಲ ಪಡೀಲಿನಲ್ಲಿ ಒಣ ತ್ಯಾಜ್ಯ ಸಂಸ್ಕರಣಾ ಘಟಕ ನಿರ್...
23-01-26 08:22 pm
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
23-01-26 09:36 pm
Mangaluru Staffer
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm
ಜೂಜಾಡಿ ಸಾಲ ; ಹಣದಾಸೆಗೆ ಇಂಜೆಕ್ಷನ್ ನೀಡಿ ಸ್ವಂತ...
21-01-26 09:35 pm