ಬ್ರೇಕಿಂಗ್ ನ್ಯೂಸ್
09-03-25 05:06 pm Headline Karnataka Staff ಕ್ರೈಂ
ಬೆಂಗಳೂರು, ಮಾ.9: ಮಾಣಿಕ್ಯ ಚಿತ್ರದ ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಬಿಐ ಎಂಟ್ರಿ ಕೊಟ್ಟಿದೆ. ಪ್ರಕರಣದಲ್ಲಿ ಅಂತರಾಷ್ಟ್ರೀಯ ಚಿನ್ನದ ಕಳ್ಳಸಾಗಣೆ ಜಾಲ ಇರುವುದರಿಂದ ಸಿಬಿಐ ತನಿಖೆ ಆರಂಭಿಸಿದೆ. ರನ್ಯಾ ರಾವ್ ಅವರನ್ನು ಡಿಆರ್‌ಐ ಅಧಿಕಾರಿಗಳು 2025ರ ಮಾರ್ಚ್ 4ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ದುಬೈನಿಂದ 14.8 ಕೆಜಿ ಚಿನ್ನವನ್ನು ಕಳ್ಳದಾರಿಯಲ್ಲಿ ತರುತ್ತಿದ್ದಾಗ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಸುಮಾರು 12.56 ಕೋಟಿ ಮೌಲ್ಯದ ಚಿನ್ನ ಇತ್ತೆಂದು ಅಂದಾಜಿಸಲಾಗಿದೆ.
ಚಿನ್ನದ ಕಳ್ಳಸಾಗಣೆ ಜಾಲವನ್ನು ಹೆಚ್ಚಿನ ತನಿಖೆ ಮಾಡಲು ಮುಂಬೈ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಸಿಬಿಐ ತಂಡಗಳನ್ನು ನಿಯೋಜಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ರನ್ಯಾ ರಾವ್ ಸುಮಾರು 30 ಬಾರಿ ದುಬೈಗೆ ಹೋಗಿದ್ದರು. ಪ್ರತಿ ಬಾರಿಯೂ ಚಿನ್ನದ ಕಳ್ಳ ಸಾಗಣೆಯಲ್ಲಿ ಭಾಗಿಯಾಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಇದಲ್ಲದೆ, ಆಕೆಯ ಮನೆಯಲ್ಲಿ ನಡೆದ ದಾಳಿ ಸಮಯದಲ್ಲಿ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 2.67 ಕೋಟಿ ರೂ. ನಗದು ಪತ್ತೆಯಾಗಿದ್ದು, ಒಟ್ಟಾರೆ ವಶಪಡಿಸಿಕೊಳ್ಳಲಾದ ಮೊತ್ತ 17.29 ಕೋಟಿ ರೂ.ಗಳಿಗೆ ತಲುಪಿದೆ.
ನಟಿ ರನ್ಯಾ ರಾವ್, ರಾಜ್ಯ ಪೊಲೀಸ್ ವಸತಿ ನಿಗಮದ ಡಿಜಿಪಿ ರಾಮಚಂದ್ರ ರಾವ್ ಅವರ ಮಲಮಗಳಾಗಿರುವುದರಿಂದ ಪ್ರಕರಣಕ್ಕೆ ಮತ್ತಷ್ಟು ರೆಕ್ಕೆ ಪುಕ್ಕ ಬಂದಿದೆ. ಕಳ್ಳಸಾಗಣೆಯಲ್ಲಿ ಪೊಲೀಸ್ ಅಧಿಕಾರಿ ಅಥವಾ ಅವರ ಕುಟುಂಬ ಭಾಗಿಯಾಗಿದೆಯೇ ಎಂಬುದರ ಡಬಗ್ಗೆಯೂ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ತನಿಖೆಯಲ್ಲಿ ಸಿಬಿಐ ಎಂಟ್ರಿಯಾಗಿದ್ದರಿಂದ ಈ ದಂಧೆಯಲ್ಲಿ ಭಾಗಿಯಾಗಿರುವ ಅಂತರರಾಷ್ಟ್ರೀಯ ಕಳ್ಳಸಾಗಣೆದಾರರನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ತನಿಖಾ ತಂಡಗಳನ್ನು ನಿಯೋಜಿಸಿ ಕಳ್ಳಸಾಗಣೆ ಗ್ಯಾಂಗ್‌ಗಳನ್ನು ಪತ್ತೆಹಚ್ಚಲು ತಂತ್ರ ರೂಪಿಸಲಾಗುತ್ತಿದೆ.
ರನ್ಯಾ ರಾವ್ ಪ್ರಕರಣವನ್ನು 2020ರ ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೂ ಹೋಲಿಕೆ ಮಾಡಲಾಗುತ್ತಿದೆ. ಕೇರಳದಲ್ಲಿ ಹಲವು ರಾಜಕಾರಣಿಗಳು, ಅಧಿಕಾರಿಗಳು ದಂಧೆಯಲ್ಲಿ ಬೆಳಕಿಗೆ ಬಂದಿತ್ತು. ಅಂತಾರಾಷ್ಟ್ರೀಯ ಮಾರ್ಗಗಳನ್ನು ದುರುಪಯೋಗಪಡಿಸಿ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗಿತ್ತು. ಕೇರಳದಲ್ಲಿ ಸಿಎಂ ಪಿಣರಾಯಿ ಆಪ್ತಳಾಗಿದ್ದ ಮಹಿಳೆಯೊಬ್ಬರು ಚಿನ್ನದ ಸ್ಮಗ್ಲಿಂಗ್ ನಲ್ಲಿ ಪ್ರಮುಖ ಪಾತ್ರಧಾರಿಯಾಗಿ ಬಂಧನಕ್ಕೀಡಾಗಿದ್ದಳು.
The Central Bureau of Investigation (CBI) has registered a case against Kannada actress Ranya Rao (34) in connection with gold smuggling. Ranya Rao was recently caught at Bengaluru airport while illegally transporting gold from Dubai. Despite allegedly attempting to use the name of her stepfather, senior IPS officer and current Director General of the Police Housing Corporation, Dr. K. Ramachandra Rao, to evade legal action, she was unsuccessful.
09-03-25 09:51 pm
HK News Desk
Chitradurga Accident, Bangalore, Five Killed:...
09-03-25 04:54 pm
Bangalore News, Marriage: ಮದುವೆಗೂ ಮುನ್ನ ಕ್ಯೂಟ...
09-03-25 11:41 am
Halal Budget, BJP, CM Siddaramaiah: ಮುಸ್ಲಿಂ ಸ...
07-03-25 09:21 pm
CM Budget, Minorities: ಅಲ್ಪಸಂಖ್ಯಾತರ ಕಲ್ಯಾಣಕ್...
07-03-25 09:08 pm
09-03-25 10:49 pm
HK News Desk
Dubai, Kerala, Death Sentence: ದುಬೈನಲ್ಲಿ ಇಬ್ಬ...
08-03-25 04:03 pm
James Harrison, Golden Arm, Death: ಲಕ್ಷಾಂತರ ಮ...
05-03-25 05:38 pm
14ನೇ ಮಗುವಿಗೆ ತಂದೆಯಾದ ಉದ್ಯಮಿ ಎಲಾನ್ ಮಸ್ಕ್ ! ನಾಲ...
01-03-25 10:39 pm
Trump Vs Zelenskyy, Talk fight: ಶ್ವೇತ ಭವನದಲ್ಲ...
01-03-25 05:35 pm
09-03-25 06:34 pm
Mangaluru Correspondent
Mangalore Urwa Police, Inspector Bharathi Tra...
09-03-25 02:55 pm
Mangalore, Diganth missing found, Sp Yathish:...
09-03-25 02:31 pm
Mangalore Diganth Missing Case, shocking deta...
08-03-25 11:05 pm
Mangalore Laveena Vegas, PhD Catalytic Syste...
08-03-25 10:54 pm
09-03-25 05:06 pm
Headline Karnataka Staff
Bangalore Suicide, Bank Staff, Crime; ಹಿರಿಯ ಅ...
09-03-25 03:06 pm
Koppal Rape, Crime, Arrest: ಪೆಟ್ರೋಲ್ ದುಡ್ಡು ಕ...
08-03-25 10:44 pm
Mangalore, Kasaragod Crime, Robbery: ಕ್ರಶರ್ ಮ...
07-03-25 05:51 pm
Belagavi Couple Murder, Crime: ಬೆಳಗಾವಿಯಲ್ಲಿ ಪ...
05-03-25 10:24 am