ಬ್ರೇಕಿಂಗ್ ನ್ಯೂಸ್
13-03-26 04:18 pm HK News Staffer ದೇಶ - ವಿದೇಶ
ಟೆಹ್ರಾನ್, ಮಾರ್ಚ್ 13: ಇಡೀ ವಿಶ್ವವನ್ನೇ ಅಲ್ಲೋಲ ಕಲ್ಲೋಲ ಮಾಡಿರುವ ಅಮೆರಿಕಾ -ಇರಾನ್- ಇಸ್ರೇಲ್ ಯುದ್ಧ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ಇರಾನ್ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವಿನ ನಂತರ ಇರಾನ್ ದೇಶದ ನೂತನ ನಾಯಕನಾಗಿ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ನಾಯಕನಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಅವರ ಮೇಲೆ ದಾಳಿಯಾಗಿದ್ದು ಕಾಲುಗಳನ್ನು ಕಳಕೊಂಡು ಗಂಭೀರ ಸ್ಥಿತಿಯಲ್ಲಿದ್ದಾರೆಂದು ವದಂತಿ ಹರಡಿದೆ.
ಕೆಲವು ಅಂತರರಾಷ್ಟ್ರೀಯ ಮಾಧ್ಯಮಗಳು, ಮೊಜ್ತಬಾ ಖಮೇನಿ ಅಮೆರಿಕಾದ ವೈಮಾನಿಕ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದು, ಒಂದು ಅಥವಾ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಜೊತೆಗೆ, ಲಿವರ್ ಭಾಗಕ್ಕೆ ಏಟು ಬಿದ್ದು ಕೋಮಾಗೆ ಜಾರಿದ್ದಾರೆ ಎಂದು ವರದಿ ಮಾಡಿವೆ. ಫಸ್ಟ್ ಪೋಸ್ಟ್ ವರದಿ ಪ್ರಕಾರ, ಖಮೇನಿ ಅವರನ್ನು ಸಿನಾ ಯುನಿವರ್ಸಿಟಿ ಹಾಸ್ಪಿಟಲ್ ನಲ್ಲಿ ಐಸಿಯುನಲ್ಲಿ ಇರಿಸಲಾಗಿದೆ. ಅವರ ಒಂದು ಅಥವಾ ಎರಡೂ ಕಾಲು ತುಂಡಾಗಿದೆ. ಹೊಟ್ಟೆ ತೀವ್ರ ಜರ್ಝರಿತವಾಗಿದ್ದು ಇರಾನ್ ಸರ್ಕಾರದ ಆರೋಗ್ಯ ಸಚಿವ ಮಹಮ್ಮದ್ ರೆಜಾ ಝಫರ್ಗಂಡಿ ಅವರ ಮೇಲುಸ್ತುವಾರಿಯಲ್ಲಿ ನೋಡಿಕೊಳ್ಳಲಾಗುತ್ತಿದೆ. ಅವರನ್ನು ಇರಿಸಿರುವ ಕಟ್ಟಡಕ್ಕೆ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ. ಸೀರಿಯಸ್ ಸ್ಥಿತಿಯಲ್ಲಿದ್ದು ಅವರನ್ನು ಡಾ.ಮಹಮ್ಮದ್ ಮರಾಷಿ ಚಿಕಿತ್ಸೆ ನೀಡುತ್ತಿದ್ದಾರೆ. ಮರಾಷಿ ಅವರು ಇರಾನ್ ಮಾಜಿ ಅಧ್ಯಕ್ಷ ಅಕ್ಬರ್ ಹಾಶೆಮಿ ರಫ್ಸಂಜಾನಿಯವರ ಪತ್ನಿಯ ಸೋದರನಾಗಿದ್ದು ಧಾರ್ಮಿಕ ವಲಯದಲ್ಲಿ ಆಪ್ತರಾಗಿ ಗುರುತಿಸಿಕೊಂಡಿದ್ದಾರೆ.
ಇದಲ್ಲದೆ, ಮೊಜ್ತಬಾ ಖಮೇನಿ ಕಳೆದ ಹಲವು ಸಮಯದಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹೀಗಾಗಿ ಅವರು ಸತ್ತಿರಬಹುದು ಎಂದೂ ಜನರು ಆಡಿಕೊಳ್ಳುತ್ತಿದ್ದಾರೆ. ಆದರೆ ಇರಾನ್ ಸರ್ಕಾರ, ಈ ರೀತಿಯ ವರದಿ, ವದಂತಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ಇರಾನ್ ವಕ್ತಾರರ ಪ್ರಕಾರ, ಮೊಜ್ತಬಾ ಖಮೇನಿ ಸುರಕ್ಷಿತರಾಗಿದ್ದು, ದೇಶದ ಆಡಳಿತ ಮತ್ತು ಉನ್ನತ ಮಟ್ಟದ ನಿರ್ಧಾರಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು ಎಂದು ತಿಳಿಸಿದೆ.
ಕೆಲವು ವರದಿಗಳ ಪ್ರಕಾರ, ಫೆಬ್ರವರಿ 28 ರಂದು ಟೆಹ್ರಾನ್‌ನಲ್ಲಿ ನಡೆದ ದಾಳಿಯ ವೇಳೆಯೇ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದರು ಮತ್ತು ಪುತ್ರ ಮೊಜ್ತಬಾ ಖಮೇನಿ ಕೂಡ ಗಾಯಗೊಂಡಿದ್ದರು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫಾಕ್ಸ್ ನ್ಯೂಸ್ ರೇಡಿಯೊದಲ್ಲಿ “ಖಮೇನಿ ಉಸಿರಾಡುತ್ತಿದ್ದಾರೆ, ಜೀವಂತ ಇರಲೂಬಹುದು” ಎಂದು ಹೇಳಿದ್ದಾರೆ.
ಫೆ.28ರ ದಾಳಿಯಲ್ಲಿ ಮೊಜ್ತಬಾ ಖಮೇನಿ ಅವರ ಪತ್ನಿ, ಸಹೋದರ, ಸೊಸೆ ಮತ್ತು ತಂದೆ ಅಯತೊಲ್ಲಾ ಖಮೇನಿ ಸೇರಿದಂತೆ ಖಮೇನಿ ಕುಟುಂಬದ ಸದಸ್ಯರು ಅಮೆರಿಕದ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ. ಇತ್ತೀಚೆಗೆ, ಯುದ್ಧದ ಪ್ರಾರಂಭದಿಂದಲೂ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ತಮ್ಮ ಮೊದಲ ಸಾರ್ವಜನಿಕ ಪ್ರತಿಜ್ಞೆ ಸಂದೇಶವನ್ನು ವೈಯಕ್ತಿಕವಾಗಿ ವೀಡಿಯೋ ಮೂಲಕ ನೀಡಿಲ್ಲ. ಇದು ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅನಿಶ್ಚಿತತೆಯನ್ನು ಹೆಚ್ಚಿಸಿದೆ.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 01:09 pm
HK News Staffer
ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ...
27-07-26 11:47 am
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm