ಬ್ರೇಕಿಂಗ್ ನ್ಯೂಸ್
14-03-25 05:02 pm HK News Desk ಕ್ರೈಂ
ನವದೆಹಲಿ, ಮಾ.14 : ಅಮೆರಿಕದಲ್ಲಿ ಗ್ಯಾರಂಟೆಕ್ಸ್ ಕ್ರಿಪ್ಟೋಕರೆನ್ಸಿ ಎಕ್ಸ್ ಚೇಂಜ್ ಕಂಪನಿಯ ಆಡಳಿತಾಧಿಕಾರಿಯಾಗಿದ್ದು, ಸಾವಿರಾರು ಗ್ರಾಹಕರ ಹೂಡಿಕೆಯ ಹಣವನ್ನು ಮೋಸ ಮಾಡಿರುವ ಆರೋಪದಲ್ಲಿ ಲಿಥ್ವೇನಿಯಾ ಪ್ರಜೆ ಅಲೆಕ್ಸ್ ಬೇಸಿಕೋವ್ ಎಂಬಾತನನ್ನು ಅಮೆರಿಕದ ಕೋರಿಕೆಯಂತೆ ಸಿಬಿಐ ಅಧಿಕಾರಿಗಳು ಮತ್ತು ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ತಿರುವನಂತಪುರದಲ್ಲಿ ಬಂಧಿಸಿದ್ದಾರೆ.
46 ವರ್ಷದ ಅಲೆಕ್ಸ್ ಬೇಸಿಕೊವ್ ನನ್ನು ಬಂಧಿಸಿ ಗಡೀಪಾರು ಮಾಡುವಂತೆ ಅಮೆರಿಕದ ವಿದೇಶಾಂಗ ಇಲಾಖೆ ಕೇಳಿಕೊಂಡಿದ್ದು, ಇದರಂತೆ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿತ್ತು. ಇದಲ್ಲದೆ, ಸಿಬಿಐ ಅಧಿಕಾರಿಗಳು ಮಾ.10ರಂದು ದೆಹಲಿಯ ಪಾಟಿಯಾಲ ಕೋರ್ಟಿನಲ್ಲಿ ಅರೆಸ್ಟ್ ವಾರೆಂಟ್ ಪಡೆದುಕೊಂಡಿದ್ದರು. ಈ ವಿಷಯ ತಿಳಿದು ಭಾರತದಿಂದ ವಿದೇಶಕ್ಕೆ ಪರಾರಿಯಾಗಲು ಪ್ರಯತ್ನ ನಡೆಸಿರುವಾಗಲೇ ಬೇಸಿಕೋವ್ ನನ್ನು ಕೇರಳ ರಾಜಧಾನಿ ತಿರುವಂತಪುರದ ವರ್ಕಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ.
ಲಿಥ್ವೇನಿಯಾ ಪ್ರಜೆಯಾದ ಅಲೆಕ್ಸ್ ರಶ್ಯಾದಲ್ಲಿದ್ದುಕೊಂಡು ಗ್ಯಾರೆಂಟೆಕ್ಸ್ ಹೆಸರಲ್ಲಿ ಕ್ರಿಪ್ಟೋ ಕರೆನ್ಸಿ ಸ್ಥಾಪಿಸಿದ್ದು ಸಾವಿರಾರು ಜನರಿಂದ ಹೂಡಿಕೆ ಮಾಡಿಸಿದ್ದ. ರಷ್ಯಾ ಮತ್ತು ಅಮೆರಿಕನ್ನರು ಇದರ ಮಲೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದರು. ಈ ನಡುವೆ, 2022ರಲ್ಲಿ ಅಮೆರಿಕದ ಸರಕಾರ ಗ್ಯಾರೆಂಟೆಕ್ಸ್ ಕ್ರಿಪ್ಟೋ ಮೇಲೆ ನಿರ್ಬಂಧ ವಿಧಿಸಿತ್ತು. ಆದರೆ ಅಲೆಕ್ಸ್ ಮತ್ತು ಇನ್ನೊಬ್ಬ ರಷ್ಯನ್ ಪ್ರಜೆ ಅಲೆಕ್ಸಾಂಡರ್ ಮೀರಾ ಸೆರ್ದಾ ಸೇರಿ 2019ರಿಂದ 2024ರ ನಡುವೆ ಗ್ಯಾರೆಂಟೆಕ್ಸ್ ಖಾತೆಯಿಂದ ಅಕ್ರಮವಾಗಿ ಬೇರೆ ಬೇರೆ ಕಂಪನಿಗಳಿಗೆ ಕ್ರಿಪ್ಟೋ ಕರೆನ್ಸಿ ವರ್ಗಾವಣೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಇದರಿಂದಾಗಿ ಕಂಪನಿಗೆ 96 ಬಿಲಿಯನ್ ಡಾಲರ್ (ಅಂದಾಜು 8 ಲಕ್ಷ ಕೋಟಿ ರೂ.) ನಷ್ಟವಾಗಿದೆ ಎಂದು ಆರೋಪಿಸಲಾಗಿದೆ. ಅಲೆಕ್ಸಾಂಡರ್ ದುಬೈನಲ್ಲಿ ವಾಸವಿದ್ದು ಅಕ್ರಮ ವರ್ಗಾವಣೆ ಕೃತ್ಯ ಎಸಗಿದ್ದಾನೆ. ಇವರು ಹ್ಯಾಕಿಂಗ್ ಇನ್ನಿತರ ತಂತ್ರಜ್ಞಾನದಿಂದ ಅಕ್ರಮ ಕರೆನ್ಸಿ ವರ್ಗಾವಣೆ ಮಾಡಿಸಿದ್ದಾರೆ. ಸೈಬರ್ ಹ್ಯಾಕರ್ಸ್, ಉಗ್ರವಾದಿ ಗುಂಪುಗಳಿಗೂ ಇವರ ಕಡೆಯಿಂದ ಕರೆನ್ಸಿ ವರ್ಗಾವಣೆಯಾಗಿರುವ ಶಂಕೆ ಇದೆ.
ಅಲೆಕ್ಸ್ ಭಾರತಕ್ಕೆ ಬಂದಿರುವುದು ತಿಳಿದ ಅಮೆರಿಕದ ಗುಪ್ತಚರ ಅಧಿಕಾರಿಗಳು ಇತ್ತೀಚೆಗೆ ಭಾರತದ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದರು. ಮುಂಬೈ ದಾಳಿ ರೂವಾರಿ ಅತ್ತಾವುರ್ ರಾಣಾನನ್ನು ಅಮೆರಿಕದಿಂದ ಗಡೀಪಾರು ಮಾಡುವಂತೆ ಭಾರತ ಕೇಳಿಕೊಂಡ ಬೆನ್ನಲ್ಲೇ ಅಲೆಕ್ಸ್ ಗಡೀಪಾರಿಗೆ ಟ್ರಂಪ್ ಸರಕಾರ ಬೇಡಿಕೆ ಇಟ್ಟಿತ್ತು. ಇದರಂತೆ, ಅಲೆಕ್ಸ್ ಬಂಧನವಾಗಿದ್ದು, ಅಮೆರಿಕ- ಭಾರತ ಸರಕಾರಗಳ ರಾಜತಾಂತ್ರಿಕ ನಡೆ ಇದರ ಹಿಂದೆ ಕೆಲಸ ಮಾಡಿದೆ. ಕಳೆದ ವಾರವಷ್ಟೇ ಅಮೆರಿಕದ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಗ್ಯಾರಂಟೆಕ್ಸ್ ವೆಬ್ ಸೈಟ್ ಮತ್ತು ಅದರಲ್ಲಿದ್ದ 26 ಮಿಲಿಯನ್ ಡಾಲರ್ ಮೊತ್ತವನ್ನು ಸೀಜ್ ಮಾಡಿದ್ದಾರೆ. ಇದೇ ವೇಳೆ, ಗ್ಯಾರಂಟೆಕ್ಸ್ ಕಂಪನಿಯು ತನ್ನ ವಹಿವಾಟನ್ನು ಸ್ಥಗಿತಗೊಳಿಸಿದ್ದು, ಗ್ರಾಹಕರನ್ನು ಮಾಸ್ಕೋ ಪ್ರಧಾನ ಕಚೇರಿಯಲ್ಲಿ ಫೇಸ್ ಟು ಫೇಸ್ ಮಾತುಕತೆಗೆ ಆಹ್ವಾನಿಸಿದೆ.
A Lithuanian man, who was wanted in the US for a massive cryptocurrency fraud, has been arrested in Kerala, officials said on Wednesday. The accused, Aleksej Besciokov, had set up a cryptocurrency exchange 'Garantex', allegedly to launder the proceeds of criminal activities such as ransomware, computer hacking, and narcotics transactions.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm