ಬ್ರೇಕಿಂಗ್ ನ್ಯೂಸ್
27-06-25 07:50 pm HK News Desk ಕ್ರೈಂ
ದಾವಣಗೆರೆ, ಜೂ 27 : 25 ವರ್ಷದ ಹೊಸ ಅಳಿಯನ ಜೊತೆಗೆ 55 ವರ್ಷದ ಅತ್ತೆ ಓಡಿಹೋಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಮದುವೆಯಾಗಿ ಕೇವಲ ಎರಡು ತಿಂಗಳಿಗೆ ಈ ಘಟನೆ ನಡೆದಿದ್ದು, ಇದರಿಂದ ಆಘಾತಗೊಂಡಿರುವ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಇಂಹತ ಕೇಸ್‌ಗಳು ಉತ್ತರ ಭಾರತದ ರಾಜ್ಯಗಳಲ್ಲಿ ಸಾಮಾನ್ಯವಾಗಿದ್ದವು. ಇದೀಗ ಕರ್ನಾಟಕದಲ್ಲೂ ಇಂತಹ ಪ್ರಕರಣಗಳು ನಡೆಯುತ್ತಿರುವುದು ದುರಂತವೆಂದೇ ಹೇಳಬಹುದು.
ಮದುವೆಯಾದ ಎರಡೇ ತಿಂಗಳಿಗೆ ಅತ್ತೆ ಜೊತೆ ಪತಿ ಎಸ್ಕೇಪ್ ಆಗಿದ್ದರಿಂದ ಆತನ ಪತ್ನಿ ಪೊಲೀಸ್ ಠಾಣೆಯಲ್ಲಿ ಕಣ್ಣೀರಿಟ್ಟಿದ್ದಾಳೆ. ಅಳಿಯನಿಗೆ 25 ವರ್ಷವಾದರೆ, ಅತ್ತೆಗೆ 55 ವರ್ಷ ಎನ್ನಲಾಗಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಈ ಶಾಕಿಂಗ್ ಘಟನೆ ನಡೆದಿದೆ.
55 ವರ್ಷದ ಶಾಂತಾ ಜೊತೆಗೆ ಗಣೇಶ್ ಎಸ್ಕೇಪ್ ಆಗಿದ್ದಾನೆ. ಗಣೇಶ್ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದವ. ಮೇ 2ರಂದು ಚನ್ನಗಿರಿ ಬಸ್ ನಿಲ್ದಾಣದಲ್ಲಿ ಪತ್ನಿಯನ್ನ ಬಿಟ್ಟು ಅತ್ತೆಯ ಜೊತೆ ಎಸ್ಕೇಪ್ ಆಗಿದ್ದಾನೆಂದು ಹೇಳಲಾಗಿದೆ. ಶಾಂತಾ ಮುದ್ದೇನಹಳ್ಳಿ ಗ್ರಾಮದ ನಾಗರಾಜ್ ಎಂಬುವರ ಎರಡನೇ ಪತ್ನಿ. 13 ವರ್ಷದ ಹಿಂದೆ ನಾಗರಾಜ್ ಅವರ 2ನೇ ಪತ್ನಿಯಾಗಿ ಶಾಂತಾ ಮನೆಗೆ ಬಂದಿದ್ದಳಂತೆ. ನಾಗರಾಜ್ ಅವರ ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಮಗ ಇದ್ದಾನೆ. ನಾಗರಾಜ್ ಜೊತೆ ಹಿರಿಯ ಮಗಳು ಹೇಮಾ ವಾಸವಿದ್ದರು.
ಎರಡು ವರ್ಷಗಳ ಹಿಂದೆ ಗಣೇಶನನ್ನ ಮನೆಗೆ ಕರೆದುಕೊಂಡು ಬಂದಿದ್ದ ಶಾಂತಾ, ಆತನಿಗೆ ಮಗಳನ್ನ ಮದುವೆ ಮಾಡಿಕೊಡೋಣ. ಮನೆ ಅಳಿಯನಾಗಿ ಇಲ್ಲಿಯೇ ಇರ್ತಾನೆ ಅಂತಾ ನಂಬಿಸಿದ್ದರಂತೆ. ಅದರಂತೆ ನಾಗರಾಜ್ ಎರಡು ತಿಂಗಳ ಹಿಂದಷ್ಟೇ ಅದ್ದೂರಿಯಾಗಿ ಗಣೇಶ್ ಜೊತೆಗೆ ಹಿರಿಯ ಮಗಳು ಹೇಮಾಳ ವಿವಾಹ ಮಾಡಿದ್ದರು. ಮದುವೆ ಮಾಡಿಕೊಟ್ಟ 15 ದಿನಕ್ಕೆ ಗಣೇಶ್ ತನ್ನ ಮಲ ಅತ್ತೆ ಶಾಂತಾ ಜೊತೆ ಅಕ್ರಮ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿತ್ತಂತೆ. ಗಣೇಶನ ಮೊಬೈಲ್‌ನಲ್ಲಿ ಮಲತಾಯಿ ಶಾಂತಾ ಕಳಿಸಿದ್ದ ಅಶ್ಲೀಲ ಮೆಸೇಜ್‌ಅನ್ನು ಹೇಮಾ ನೋಡಿದ್ದರಂತೆ.
ತಕ್ಷಣ ಮೆಸೇಜ್‌ಗಳನ್ನು ತನ್ನ ತಂದೆ ನಾಗರಾಜ್‌ಗೆ ಹೇಮಾ ಫಾರ್ವರ್ಡ್ ಮಾಡಿದ್ದಳು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಹಣ, ಆಭರಣ ಕದ್ದು ಶಾಂತಾ ಅಳಿಯ ಗಣೇಶನ ಜೊತೆಗೆ ಎಸ್ಕೇಪ್ ಆಗಿದ್ದಾಳೆ. ಪತ್ನಿ ಹೇಮಾಳನ್ನ ಬಸ್ ಸ್ಟಾಪ್‌ನಲ್ಲಿಯೇ ಬಿಟ್ಟು ಗಣೇಶ್ ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
In a bizarre and disturbing incident, a 55-year-old woman has allegedly eloped with her 25-year-old son-in-law in Karnataka’s Davanagere district. The shocking case, reminiscent of stories from northern India, has left the family and local community stunned. The incident took place in Muddenahalli village of Channagiri taluk. According to reports, Shanta (55) and her son-in-law Ganesh (25) went missing just two months after Ganesh's marriage to Shanta’s stepdaughter Hema. A devastated Hema has now filed a police complaint.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm