ಬ್ರೇಕಿಂಗ್ ನ್ಯೂಸ್
08-08-25 12:27 pm Bangalore Correspondent ಕ್ರೈಂ
ಬೆಂಗಳೂರು, ಆ.8 : ಕಳ್ಳರ ಬೇಟೆಯಾಡಬೇಕಿದ್ದ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ತನ್ನ ಮನೆಯಲ್ಲೇ ಕುಖ್ಯಾತ ಕಳ್ಳನಿಗೆ ಆಶ್ರಯ ನೀಡಿ, ಸರ್ಕಾರಿ ಕೆಲಸದಿಂದ ಅಮಾನತುಗೊಂಡ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಕುಖ್ಯಾತ ಕಳ್ಳ ಬಾಂಬೆ ಸಲೀಂ ಜತೆ ಸ್ನೇಹ ಬೆಳೆಸಿ, ಮನೆಯಲ್ಲೇ ಆಶ್ರಯ ಕೊಟ್ಟು ಪೊಲೀಸರ ಕೈಗೆ ಸಿಗದಂತೆ ಮಾಡಿದ್ದ ಆರೋಪದಲ್ಲಿ ಗೋವಿಂದಪುರ ಠಾಣೆ ಕಾನ್ಸ್‌ಟೇಬಲ್ ಎಚ್.ಆರ್. ಸೋನಾರ ಎಂಬವರನ್ನು ಸೇವೆಯಿಂದ ಅಮಾನತುಗೊಳಿಸಿ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ದೇವರಾಜು ಆದೇಶ ಹೊರಡಿಸಿದ್ದಾರೆ.
ಆಡುಗೋಡಿಯ ಪೊಲೀಸ್ ವಸತಿ ಸಮುಚ್ಚಯದಲ್ಲಿ ವಾಸವಿರುವ ಕಾನ್ಸ್‌ಟೇಬಲ್ ಸೋನಾರ ಅವರ ಮನೆಯಲ್ಲಿ ಕೆಲವು ತಿಂಗಳು ವಾಸವಿದ್ದ ಸಲೀಂ, ಸೋನಾರ ಇಲ್ಲದೇ ಇದ್ದಾಗ ಪೊಲೀಸ್ ಯೂನಿಫಾರಂ ಧರಿಸಿ ತನ್ನ ಪತ್ನಿಗೆ ವಿಡಿಯೋ ಕರೆ ಮಾಡಿ ಪೋಸು ನೀಡುತ್ತಿದ್ದ. 'ಕಳ್ಳನಾದರೂ ಪೊಲೀಸರ ಮನೆಯಲ್ಲಿದ್ದೇನೆ. ಅವರದ್ದೇ ಯೂನಿಫಾರಂ ಧರಿಸಿದ್ದೇನೆ ನೋಡು' ಎಂದು ಬಿಲ್ಡಪ್ ಕೊಟ್ಟಿದ್ದ. ಇದಕ್ಕೆ ಸಾಕ್ಷಿಯಾಗಿ ತನ್ನ ಮೊಬೈಲ್ ನಲ್ಲಿ ಸ್ಕ್ರೀನ್ ಶಾಟ್ ಫೋಟೊ ತೆಗೆಸಿಟ್ಟುಕೊಂಡಿದ್ದ.
ಡಿಫೆನ್ಸ್ ಕಾಲೊನಿಯಲ್ಲಿ ವಾಸವಿರುವ ವೈದ್ಯರೊಬ್ಬರ ಮನೆಯಲ್ಲಿ ಜೂ.22ರಂದು ರಾತ್ರಿ ಚಿನ್ನಾಭರಣ ಕಳವಾಗಿತ್ತು. ಪ್ರಕರಣ ಸಂಬಂಧ ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿ ಬಾಂಬೆ ಸಲೀಂನನ್ನು ಇಂದಿರಾ ನಗರ ಠಾಣೆ ಪೊಲೀಸರು ಬಂಧಿಸಿದ್ದರು. ಆರೋಪಿ ಕದ್ದಿದ್ದ ಸುಮಾರು 15 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿದ್ದರು. ತನಿಖೆ ಸಲುವಾಗಿ ಬಾಂಬೆ ಸಲೀಂನ ಮೊಬೈಲ್ ಜಪ್ತಿ ಮಾಡಿ ಪರಿಶೀಲಿಸಿದಾಗ ಪೊಲೀಸ್ ಯೂನಿಫಾರಂ ಧರಿಸಿರುವ ಪೋಟೊಗಳು ಪತ್ತೆಯಾಗಿದ್ದವು. ಜತೆಗೆ, ಅವನು ಧರಿಸಿದ್ದ ಯೂನಿಫಾರಂನ ನಂಬರ್ ಪ್ಲೇಟ್‌ನಲ್ಲಿ ಎಚ್.ಆರ್. ಸೋನಾರ ಹೆಸರಿತ್ತು.
ಈ ಕುರಿತು ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ''ಕೆಲವು ತಿಂಗಳ ಹಿಂದೆ ಕಾನ್ಸ್‌ಟೇಬಲ್ ಸೋನಾರ ಮನೆಯಲ್ಲಿ ವಾಸವಿದ್ದಾಗ ಯೂನಿಫಾರಂ ಧರಿಸಿ ಪತ್ನಿಗೆ ಕರೆ ಮಾಡಿದ್ದೆ'' ಎಂದು ಬಾಯಿಟ್ಟಿದ್ದ. ಈ ವರದಿಯನ್ನು ಡಿಸಿಪಿ ಅವರಿಗೆ ಸಲ್ಲಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಕರ್ತವ್ಯದಲ್ಲಿ ದುರ್ನಡತೆ ಹಾಗೂ ಶಿಸ್ತು ಉಲ್ಲಂಘಿಸಿದ ಕಾನ್ಸ್‌ಟೇಬಲ್ ಸೋನಾರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತು ಮಾಡಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಡಿಸಿಪಿ ದೇವರಾಜು ತಿಳಿಸಿದ್ದಾರೆ.
ಕದ್ದ ಚಿನ್ನ ಮುಂಬೈನಲ್ಲಿ ಮಾರುತ್ತಿದ್ದ, ಐಷಾರಾಮಿ ಜೀವನ
ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮನೆಗಳಿಗೆ ಕನ್ನ ಹಾಕಿ ಕಳವು ನಡೆಸುವುದರಲ್ಲಿ ಸಲೀಂ ಅಲಿಯಾಸ್ ಬಾಂಬೆ ಸಲೀಂ ಕುಖ್ಯಾತಿ ಪಡೆದಿದ್ದಾನೆ. ದಶಕಕ್ಕೂ ಹೆಚ್ಚು ಕಾಲದಿಂದ ಮನೆಗಳ್ಳತನವನ್ನೇ ಉದ್ಯೋಗ ಮಾಡಿಕೊಂಡಿದ್ದ. ಈತನ ವಿರುದ್ಧ 50ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಕೆಲ ತಿಂಗಳ ಹಿಂದೆ ಗೋವಿಂದಪುರ ಠಾಣೆ ಪೊಲೀಸರಿಂದ ಬಂಧಿತನಾಗಿ ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದ ಬಳಿಕವೂ ಪುನಃ ತನ್ನ ಕಸುಬು ಮುಂದುವರಿಸಿದ್ದ. ಮೈಸೂರಿನ ಹುಣಸೂರು ಮೂಲದ ಸಲೀಂ, ಬಾಂಬೆಯಲ್ಲಿ (ಮುಂಬೈ) ಪತ್ನಿ ಜತೆ ವಾಸಿಸುತ್ತಿದ್ದ. ಹೀಗಾಗಿ, ಬಾಂಬೆ ಸಲೀಂ ಎಂಬ ಅಡ್ಡ ಹೆಸರು ಬಂದಿದೆ. ಚಿನ್ನಾಭರಣ ಕಳ್ಳತನ ಮಾಡುವ ಸಲೀಂ, ಮುಂಬೈಗೆ ಒಯ್ದು ಮಾರಾಟ ಮಾಡಿ ಬರುತ್ತಿದ್ದ. ಕಳ್ಳತನದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
The police had arrested Saleem a.k.a Bombay Saleem and while bringing him to the city, the constable had shared a hotel room with the thief. Sonar also let Saleem wear his uniform and make a video call to his wife. Photos of Saleem wearing the police uniform were found on his phone after which an inquiry was launched.
29-08-25 10:51 pm
HK News Desk
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
30-08-25 12:55 pm
Udupi Correspondent
Mangalore Talapady, Speaker Khader Orders Pro...
30-08-25 11:55 am
Mangalore NSUI, FIR: ಗಣೇಶೋತ್ಸವಕ್ಕೆ ಕಾಂಗ್ರೆಸ್...
29-08-25 10:54 pm
Talapady Accident, Ksrtc, Death, Mangalore: ತ...
29-08-25 09:08 pm
Mangalore, Eric Ozario, Konkani, Death: ಮಾಂಡ್...
29-08-25 08:13 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm