ಬ್ರೇಕಿಂಗ್ ನ್ಯೂಸ್
16-08-25 11:25 am HK News Desk ಕ್ರೈಂ
ಲಕ್ನೋ, ಆ.16 : ಉತ್ತರ ಪ್ರದೇಶ ಪೊಲೀಸರು ಮತ್ತೊಂದು ಭಾರೀ ಮತಾಂತರ ಜಾಲ ಪ್ರಕರಣವನ್ನು ಪತ್ತೆ ಮಾಡಿದ್ದು ಮುಸ್ಲಿಂ ವ್ಯಕ್ತಿಯೊಬ್ಬ ತನ್ನನ್ನು ಹಿಂದೂ ವ್ಯಕ್ತಿ ಎಂದು ನಂಬಿಸಿ ಅನೇಕ ಹಿಂದೂ ಯುವತಿಯರನ್ನು ವಿವಾಹವಾಗಿ ಮೋಸ ಮಾಡಿದ್ದನ್ನು ಪತ್ತೆಹಚ್ಚಿದ್ದಾರೆ. ಘಟನೆ ಸಂಬಂಧಿಸಿ ಶರಾಫ್ ರಿಜ್ವಿ ಎಂಬಾತನನ್ನು ಸಾರನಾಥ ಪೊಲೀಸರು ಬಂಧಿಸಿದ್ದಾರೆ.
ಸಾರಾನಾಥದ ಮಹಿಳೆಯೊಬ್ಬರು ದೂರು ನೀಡಿದ ಬಳಿಕ ಆರೋಪಿ ರಿಜ್ವಿ ಸಿಕ್ಕಿಬಿದ್ದಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದು ರೂ.5 ಲಕ್ಷ ಸುಲಿಗೆ ಮಾಡಿದ್ದಾನೆ. ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹಾಕುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಮ್ಯಾಟ್ರಿಮೋನಿಯಲ್ ಸೈಟ್ಗಳಲ್ಲಿ ನಕಲಿ ಗುರುತಿನ ಮೂಲಕ ಉತ್ತರ ಪ್ರದೇಶ ಸೇರಿದಂತೆ ಮೂರು ರಾಜ್ಯಗಳಲ್ಲಿ ಕನಿಷ್ಠ 12 ಯುವತಿಯರನ್ನು ವಿವಾಹವಾಗಿರುವುದಾಗಿ ರಿಜ್ವಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಸಾರನಾಥ ಪೊಲೀಸರು ತಿಳಿಸಿದ್ದಾರೆ. ಹಿಂದು ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ರಿಜ್ವಿ, ಹಣ ಮತ್ತು ಉಡುಗೊರೆಗಳನ್ನು ಪಡೆದು ಸುಲಿಗೆ ಮಾಡುತ್ತಿದ್ದ. ದೈಹಿಕ ಸಂಬಂಧ ಹೊಂದಿದ ನಂತರ ತನ್ನ ನೈಜ ಗುರುತನ್ನು ಬಹಿರಂಗಪಡಿಸುತ್ತಿದ್ದ. ಆನಂತರ, ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದ. ತನ್ನ ನಿಜಬಣ್ಣ ತಿಳಿಸದೆ ಮದುವೆಯ ನಾಟಕವಾಡಿ ಬಲೆಗೆ ಬೀಳಿಸುತ್ತಿದ್ದ.
ಮ್ಯಾಟ್ರಿಮೋನಿಯಲ್ ವೆಬ್ಸೈಟ್ಗಳಲ್ಲಿ ಮಹಿಳೆಯರನ್ನು ಗುರುತಿಸುತ್ತಿದ್ದ ರಿಜ್ವಿ, ತನ್ನನ್ನು ಶ್ರೀಮಂತ ಹಿಂದೂ ಉದ್ಯಮಿ ಎಂದು ಹೇಳಿಕೊಂಡು ಅವರನ್ನು ಉಪಾಯದಿಂದ ಬಲೆಗೆ ಹಾಕುತ್ತಿದ್ದ. ನಂಬಿಕೆ ಗಳಿಸಿ ಬಳಿಕ ದೈಹಿಕ ಸಂಬಂಧ ಹೊಂದುತ್ತಿದ್ದ. ಆನಂತರ ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
ಸಾಮ್ರಾಟ್ ಸಿಂಗ್, ಅಜಯ್ ಕುಮಾರ್ ಮತ್ತು ವಿಜಯ್ ಕುಮಾರ್ ಎಂದು ವಿಭಿನ್ನ ಹಿಂದೂ ಹೆಸರುಗಳಲ್ಲಿ ಮೂರು ಫೇಸ್ಬುಕ್ ಖಾತೆಗಳನ್ನು ನಿರ್ವಹಿಸುತ್ತಿದ್ದ ರಿಜ್ವಿ, ತನ್ನ ನೈಜ ಹೆಸರಲ್ಲಿ ಖಾತೆ ಹೊಂದಿರಲಿಲ್ಲ. ಹಿಂದೂ ಹೆಸರಿನ ಖಾತೆಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದ ನಂತರ ತನ್ನನ್ನು ಹಿಂದೂ ಅಂತ ತೋರ್ಪಡಿಸಿಕೊಳ್ಳುವುದನ್ನು ಹೆಚ್ಚಿಸಿದ್ದಾಗಿ ಆತ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
Shaadi.com ನಂತಹ ಸೈಟ್ಗಳ ಮೂಲಕ ಚಂದದಾರನಾದ ನಂತರ ರಿಜ್ವಿ 100 ಕ್ಕೂ ಹೆಚ್ಚು ಮಹಿಳೆಯರು ಹಾಗೂ ಅವರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದ. ಹಲವಾರು ನಗರಗಳಲ್ಲಿ ಆಸ್ತಿ ಹೊಂದಿರುವ ರಫ್ತುದಾರ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ. ವೀಡಿಯೊ ಕರೆ ಮೂಲಕ ಕುಟುಂಬಸ್ಥರನ್ನು ಪರಿಚಯಿಸಲು ಕೇಳಿದಾಗ, ಸ್ನೇಹಿತರನ್ನೇ ತನ್ನ ಕುಟುಂಬದವರು ಎಂದು ತೋರಿಸುತ್ತಿದ್ದ. ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆದು ದುಬಾರಿ ಉಡುಪುಗಳನ್ನು ಧರಿಸಿ ಶ್ರೀಮಂತನಂತೆ ಫೋಸು ನೀಡುತ್ತಿದ್ದ.
ಮದುವೆಯ ಸಿದ್ಧತೆಗಾಗಿ ರೂ. 5 ಲಕ್ಷ ಪಡೆದು ದೈಹಿಕ ಸಂಪರ್ಕದ ನೆಪದಲ್ಲಿ ಮಹಿಳೆಯರನ್ನು ಮತಾಂತರಕ್ಕೆ ಯತ್ನಿಸುತ್ತಿದ್ದ. ಸಾರನಾಥದ ಮಹಿಳೆಗೂ ಇದೇ ರೀತಿಯ ವಂಚನೆಯಾಗಿದ್ದ ಹಣ ಕಳಕೊಂಡ ನಂತರ ಆರೋಪಿಯ ನೈಜ ಗುರುತು ಪತ್ತೆಹಚ್ಚಿ ದೂರು ದಾಖಲಿಸಿದ್ದಾರೆ. ಮಹಿಳೆಯ ಫ್ಲಾಟ್ನಲ್ಲಿಯೇ ಕೆಲವೊಮ್ಮೆ ಉಳಿದುಕೊಂಡಿದ್ದ ರಿಜ್ವಿ ವಾರಣಾಸಿ ಮತ್ತು ಲಕ್ನೋದಲ್ಲಿನ ಹೋಟೆಲ್ಗಳಿಗೂ ಆಕೆಯನ್ನು ಕರೆದೊಯ್ಯುತ್ತಿದ್ದ. ಹಣ ಹಿಂತಿರುಗಿಸುವಂತೆ ಒತ್ತಾಯಿಸಿದಾಗ ಬೆದರಿಕೆ ಹಾಕುತ್ತಿದ್ದ ಎಂದು ದೂರಲಾಗಿದೆ. ರಿಜ್ವಿ ದೊಡ್ಡ ಮತಾಂತರ ಮತ್ತು ಸುಲಿಗೆಕೋರ. ಇಲ್ಲಿಯವರೆಗೆ ಸುಮಾರು 10-12 ಮಹಿಳೆಯರೊಂದಿಗೆ ವಿವಾಹವಾಗಿರುವುದು ತಿಳಿದುಬಂದಿದೆ. ಆತನ ಮತ್ತಷ್ಟು ಸಂಪರ್ಕಗಳು ಹಾಗೂ ಇಸ್ಲಾಮಿಕ್ ಸಂಘಟನೆಯೊಂದಿಗೆ ಸಂಪರ್ಕಗಳ ಕುರಿತು ತನಿಖೆ ಮಾಡುತ್ತಿದ್ದೇವೆ ಎಂದು ಸಾರನಾಥದ ಎಸಿಪಿ ವಿಜಯ್ ಪ್ರತಾಪ್ ಖಚಿತಪಡಿಸಿದ್ದಾರೆ.
Uttar Pradesh police have uncovered yet another major forced religious conversion racket. A Muslim man, identified as Sharaf Rizvi, allegedly posed as a Hindu under multiple fake identities to trap Hindu women into marriage and subsequently pressured them to convert to Islam.
10-12-25 09:40 pm
HK News Desk
ಬೆಂಗಳೂರಿನಲ್ಲಿ ರಸ್ತೆ ಅಪಘಾತ ; ಆರು ತಿಂಗಳ ಹಿಂದಷ್ಟ...
10-12-25 05:37 pm
ಅಧಿಕಾರ ಹಂಚಿಕೆ ಬಗ್ಗೆ ಗೊಂದಲ ; ಯಾರೂ ಆ ಬಗ್ಗೆ ಮಾತನ...
10-12-25 12:58 pm
ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ; ಹೊಟೇಲುಗಳ ಸಂಘ...
09-12-25 08:56 pm
ಶಾಲಾ ಬಸ್ಸಿನಡಿಗೆ ಬಿದ್ದು ಎಂಟು ವರ್ಷದ ಬಾಲಕಿ ದುರಂತ...
09-12-25 08:53 pm
10-12-25 01:17 pm
HK News Desk
ಮಾಜಿ ಸಿಜೆಐ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್ ಕಿ...
09-12-25 11:03 pm
Goa Fire Accident, 23 dead: ಗೋವಾದ ನೈಟ್ಕ್ಲಬ್...
07-12-25 02:04 pm
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
10-12-25 08:45 pm
Mangalore Correspondent
“Board Exams Made Easier: AI Shikshak Breaks...
10-12-25 06:01 pm
Mangalore Accident, Gowjee Events owner Death...
10-12-25 04:00 pm
Mangalore, Builder Encroaches Bejai Canal: ಬಿ...
09-12-25 07:30 pm
ರಿಷಬ್ ಶೆಟ್ಟಿ ತೊಡೆಯ ಮೇಲೆ ಮಲಗಿದ ದೈವ ! ಹರಕೆ ನೇಮದ...
09-12-25 05:21 pm
10-12-25 10:14 pm
Udupi Correspondent
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am
ಗಡಿಭಾಗ ತಲಪಾಡಿಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ; ಎರ...
08-12-25 09:29 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm