ಬ್ರೇಕಿಂಗ್ ನ್ಯೂಸ್
14-10-25 11:19 am Mangalore Correspondent ಕ್ರೈಂ
ಮಂಗಳೂರು, ಅ.14 : ಮಹಿಳೆಯೊಬ್ಬರಿಗೆ ನೀವು ನೀಡುವ ಹಣಕ್ಕೆ 4 ಪಟ್ಟು ಹೆಚ್ಚು ಯುಕೆ ಪೌಂಡ್ ಕರೆನ್ಸಿಗಳನ್ನು ನೀಡುವುದಾಗಿ ನಂಬಿಸಿ ಆನ್ ಲೈನ್ ಮೂಲಕ 79,19,850 ರೂ. ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ಮಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಒಬ್ಬಾಕೆ ದುಬೈಯಲ್ಲಿದ್ದಾರೆ. ಮನೆ ಕೆಲಸಕ್ಕೆಂದು ವಾಮಂಜೂರಿನ ಮಹಿಳೆಯೊಬ್ಬರನ್ನು ಮಹಿಳೆ ತನ್ನ ಮನೆಗೆ ಕರೆಸಿಕೊಂಡಿದ್ದರು. ಆಕೆ ಫೇಸ್‌ಬುಕ್‌ನಲ್ಲಿ ಯುಕೆ(ಲಂಡನ್) ಮೂಲದ ಅಪರಿಚಿತ ವ್ಯಕ್ತಿ ಮ್ಯಾಕ್ಸ್ ಅಲೆಕ್ಸಾಂಡರ್ ಎಂಬಾತನೊಂದಿಗೆ ಸಂಪರ್ಕದಲ್ಲಿರುವುದನ್ನು ತಿಳಿಸಿದ್ದಳು.
ಅಲ್ಲದೆ, ಅಪರಿಚಿತ ವ್ಯಕ್ತಿ ಭಾರತಕ್ಕೆ ಬರುತ್ತಿದ್ದು ರೂಪಾಯಿಗೆ 4 ಪಟ್ಟು ಹೆಚ್ಚು ವಿದೇಶಿ ಪೌಂಡ್ಸ್ ತರುವುದಾಗಿ ತಿಳಿಸಿದ್ದಾನೆ. ಆನಂತರ ತನ್ನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಮಹಿಳೆಗೆ ತಿಳಿಸಿದ್ದು, ಹಣ ಕಳುಹಿಸುವಂತೆ ಕೇಳಿಕೊಂಡಿದ್ದ. ಮಹಿಳೆ ಈ ಸಂದರ್ಭದಲ್ಲಿ ವ್ಯಕ್ತಿಗೆ ಹಣದ ಸಹಾಯವನ್ನೂ ಮಾಡಿದ್ದಾಳೆ. ಈ ನಡುವೆ ದೂರುದಾರ ಮಹಿಳೆಯೂ ಅಪರಿಚಿತ ವ್ಯಕ್ತಿಯೊಂದಿಗೆ ವಾಟ್ಸಾಪ್ ಮೂಲಕ ಸಂಪರ್ಕದಲ್ಲಿದ್ದು ಪೌಂಡ್, ಡಾಲರ್ ತರುತ್ತಿರುವ ವಿಷಯ ತಿಳಿಸಿದ್ದಾನೆ.
ಅಪರಿಚಿತ ವ್ಯಕ್ತಿ ಹೆಚ್ಚಿನ ವಿದೇಶಿ ಪೌಂಡ್‌ಗಳನ್ನು ನೀಡುವುದಾಗಿ ಹೇಳಿಕೊಂಡು, ಮಂಗಳೂರಿನಲ್ಲಿ ಮನೆ ಎಲ್ಲಿ ಎಂದು ವಿಳಾಸ ಪಡೆದು ಭೇಟಿ ನೀಡುವುದಾಗಿ ತಿಳಿಸಿದ್ದಾನೆ. ಆ.21ರಂದು ನೀಗ್ರೋ ವ್ಯಕ್ತಿಯೊಬ್ಬ ಮಹಿಳೆಯ ಮನೆಗೆ ಬಂದಿದ್ದು ಸ್ಟೀವ್ ಎಂದು ತನ್ನ ಹೆಸರನ್ನು ಪರಿಚಯಿಸಿದ್ದಾನೆ. ಬಳಿಕ ವಿದೇಶಿ ಡಾಲರ್ ಇರುವುದನ್ನು ತೋರಿಸಿದ್ದಾನೆ. ಇದನ್ನು ನೋಡಿದ ಮಹಿಳೆ ಸತ್ಯವೆಂದೇ ನಂಬಿದ್ದಾರೆ.
ಪೌಂಡ್ ಮತ್ತು ಡಾಲರ್ ನೋಟುಗಳನ್ನು ನೋಡಿ ಎಲ್ಲವನ್ನೂ ಸತ್ಯವೆಂದೇ ನಂಬಿದ ದೂರುದಾರ ಮಹಿಳೆ, ಈ ವಿಚಾರವನ್ನು ತನ್ನ ಪರಿಚಯದ ನೀರುಮಾರ್ಗದ ಮಹಿಳೆಗೂ ತಿಳಿಸಿದ್ದಾರೆ. ತನಗೂ ವಿದೇಶಿ ಪೌಂಡ್ ಕಡಿಮೆ ದರಕ್ಕೆ ಸಿಗಬಹುದು ಎಂದು ಆಕೆಯೂ ಆಸೆಯಿಂದ 25 ಲಕ್ಷ ಮೊತ್ತವನ್ನು ದೂರುದಾರರಿಗೆ ವರ್ಗಾಯಿಸಿದ್ದಾರೆ. ಇದೇ ವೇಳೆ, ವಿಷಯ ತಿಳಿದು ಇನ್ನೊಬ್ಬ ಮಹಿಳೆಯೂ 2 ಲಕ್ಷ ರೂ. ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ದೂರುದಾರ ಮಹಿಳೆಯಿಂದ ಗ್ಯಾರಂಟಿಗೆಂದು ಚೆಕ್ ಪಡೆದಿದ್ದಾರೆ. ತನ್ನಲ್ಲಿರುವ ಹಣವನ್ನೆಲ್ಲ ಸೇರಿಸಿ ಅಪರಿಚಿತ ವ್ಯಕ್ತಿಗೆ ಒಟ್ಟು 79,19,850 ರೂ. ವನ್ನು ದೂರುದಾರ ಮಹಿಳೆ ನಾನಾ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಆದರೆ ಅಪರಿಚಿತ ವ್ಯಕ್ತಿ ಪೌಂಡ್ ನೀಡಲು ಇನ್ನೂ ಹೆಚ್ಚಿನ ಹಣ ವರ್ಗಾಯಿಸುವಂತೆ ಒತ್ತಾಯಿಸಿದ್ದು, ಅನುಮಾನ ಬಂದು ಮಕ್ಕಳಲ್ಲಿ ವಿಚಾರಿಸಿದಾಗ ಮೋಸದ ಅರಿವಾಗಿದೆ.
A shocking online scam has surfaced in Mangaluru, where women from Vamanjoor fell prey to a fraudster who promised four times the value of their money in UK pounds. Believing the offer, the victims transferred ₹79.19 lakh to multiple bank accounts. The scam began when a woman’s domestic help introduced her to a man named “Max Alexander” from the UK via Facebook, who claimed he would bring high-value pounds to India. Later, another man posing as “Steve” visited her home and showed fake foreign currency, convincing the women of its authenticity.
09-11-25 03:47 pm
Bangalore Correspondent
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 03:50 pm
Mangalore Correspondent
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm