ಬ್ರೇಕಿಂಗ್ ನ್ಯೂಸ್
04-01-26 11:02 pm HK News Desk ಕ್ರೈಂ
ಯಲ್ಲಾಪುರ, ಜ.4 : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಮದುವೆಗೆ ನಿರಾಕರಿಸಿದ ವಿಚ್ಛೇದಿತ ಮಹಿಳೆ ರಂಜಿತಾ ಎಂಬವರನ್ನು ರಸ್ತೆ ಮಧ್ಯೆಯೇ ಶನಿವಾರ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆರೋಪಿಯನ್ನ ರಫೀಕ್ ಎಂದು ಗುರುತಿಸಿದ್ದು ಆತ ತಲೆಮರೆಸಿಕೊಂಡಿದ್ದ. ಪೊಲೀಸರು ಶ್ವಾನದಳದ ಸಹಾಯದಿಂದ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಅರಣ್ಯದಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಕಾಳಮ್ಮನಗರ ಅರಣ್ಯ ಪ್ರದೇಶದಲ್ಲಿ ರಫೀಕ್ ಮೃತದೇಹ ಪತ್ತೆಯಾಗಿದೆ. ಘಟನೆ ಶನಿವಾರ ಬೆಳಗ್ಗೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಸುಮಾರು ಹತ್ತು ವರ್ಷಗಳ ಹಿಂದೆ ಗಂಡನಿಂದ ವಿಚ್ಛೇದನ ಪಡೆದಿದ್ದ ರಂಜಿತಾ ರಫೀಕ್ ನನ್ನ ಪ್ರೀತಿಸುತ್ತಿದ್ದಳು. ಇಬ್ಬರೂ ಕ್ಲಾಸ್ ಮೇಟ್‌ಗಳಾಗಿದ್ದರು. ಇಬ್ಬರ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯವಿತ್ತು. ರಫೀಕ್ ಆಗಾಗ ರಂಜಿತಾ ಮನೆಗೆ ಬಂದು ಊಟ ಮಾಡಿ ಹೋಗುತ್ತಿದ್ದ. ರಂಜಿತಾ ತನ್ನ ಮಗನೊಂದಿಗೆ, ತಂದೆ-ತಾಯಿ ಹಾಗೂ ಅಣ್ಣನೊಂದಿಗೆ ಯಲ್ಲಾಪುರದಲ್ಲಿ ವಾಸವಿದ್ದಳು. ಜೀವನೋಪಾಯಕ್ಕಾಗಿ ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು.
ಇತ್ತೀಚೆಗೆ ರಫೀಕ್, ರಂಜಿತಾಳನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಆದರೆ ರಂಜಿತಾ ಇದಕ್ಕೆ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ರಫೀಕ್, ಎಂದಿನಂತೆ ರಂಜಿತಾ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ರಸ್ತೆ ಮಧ್ಯೆ ಆಕೆಯನ್ನು ಅಡ್ಡಗಟ್ಟಿ ಮದುವೆಯ ಪ್ರಸ್ತಾಪ ಮಾಡಿದ್ದು, ನಿರಾಕರಿಸಿದ್ದಕ್ಕೆ ಬೇಸತ್ತು ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಘಟನೆ ನಡೆದ ಹಿಂದಿನ ದಿನದ ರಾತ್ರಿಯೂ ಆರೋಪಿ ರಫೀಕ್ ಮತ್ತು ಮೃತ ರಂಜಿತಾಳ ಅಣ್ಣ ಸ್ನೇಹಿತರಾಗಿದ್ದ ಕಾರಣ ಹಿಂದಿನ ರಾತ್ರಿ ಇಬ್ಬರೂ ಒಟ್ಟಿಗೆ ಪಾರ್ಟಿ ಮಾಡಿದ್ದರು ಎಂದು ತಿಳಿದುಬಂದಿದೆ.
ಇತ್ತ, ಹಿಂದೂ ಯುವತಿಯನ್ನು ಬರ್ಬರವಾಗಿ ಹತ್ಯೆಗೈದಿರುವುದನ್ನು ಖಂಡಿಸಿ ವಿಎಚ್‌ಪಿ ಸಂಘಟನೆ ಯಲ್ಲಾಪುರದಲ್ಲಿ ಇಂದು ಬಂದ್‌ಗೆ ಕರೆ ನೀಡಿತ್ತು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲಿಸುವಂತೆ ಮನವಿ ಮಾಡಲಾಗಿತ್ತು. ಪಟ್ಟಣದ ಬಸವೇಶ್ವರ ಸರ್ಕಲ್‌ನಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆದಿತ್ತು. ಆರೋಪಿ ಬಂಧಿಸುವ ವರೆಗೂ ರಂಜಿತಾಳ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದವು. ಆದರೆ, ಈ ಬೆಳವಣಿಗೆಗಳ ನಡುವೆಯೇ ಆರೋಪಿ ರಫೀಕ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
A shocking murder rocked Yellapur in Uttara Kannada when Ranjitha, a divorced woman, was brutally stabbed in the middle of the road after refusing a marriage proposal from Rafeeq, her former classmate. The accused fled after the attack, prompting an extensive police search with dog squads. Amid rising tension and a bandh call by VHP and Bajrang Dal demanding his arrest, Rafeeq was found dead by suicide in the Kalammana Nagar forest area. Ranjitha, who lived with her family and worked as a mid-day meal assistant in a government school, had reportedly been pressured for marriage by Rafeeq, leading to the fatal confrontation.
05-01-26 03:14 pm
Bangalore Correspondent
ಬಳ್ಳಾರಿ ಪ್ರಕರಣ ; ಸುಮೊಟೋ ಕೇಸು ದಾಖಲಿಸಿ ಪೊಲೀಸರ ತ...
05-01-26 01:24 pm
ಎಸ್ ಪಿ ಪವನ್ ಆತ್ಮಹತ್ಯೆ ವದಂತಿ ; ಸರ್ಕಾರ ಅವರ ಡೆತ...
04-01-26 10:27 pm
Janardhan Reddy, DK Shivakumar: ನನಗೆ ಜೀವ ಬೆದರ...
04-01-26 07:24 pm
ಜನಾರ್ದನ ರೆಡ್ಡಿ ದೊಡ್ಡ ಡ್ರಾಮಾ ಮಾಸ್ಟರ್.. ಕೋಟೆ ಕಟ...
03-01-26 10:40 pm
05-01-26 02:13 pm
HK News Desk
Venezuelan President Maduro: ವೆನಿಜುವೆಲಾ ಅಧ್ಯಕ...
04-01-26 06:38 pm
ಕೆಕೆಆರ್ ತಂಡಕ್ಕೆ ಬಾಂಗ್ಲಾ ಕ್ರಿಕೆಟಿಗ ಮುಸ್ತಾಫಿಜುರ...
02-01-26 06:43 pm
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಗೆ ಬೆಂಕಿ ಹ...
01-01-26 09:34 pm
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
05-01-26 05:11 pm
Mangalore Correspondent
ಬಿಜೆಪಿ ಮುಖಂಡನ ಸೋದರನ ಪತ್ನಿ ಮಗುವಿನೊಂದಿಗೆ ಬಾವಿಗೆ...
04-01-26 11:10 pm
Suhas Shetty, Social Media Post, Bajpe Police...
04-01-26 02:44 pm
Dharmasthala Case, Belthangady Court: ಧರ್ಮಸ್ಥ...
04-01-26 01:57 pm
ಕಂಬಳ ಕ್ಷೇತ್ರದ ಭೀಷ್ಮ ಗುಣಪಾಲ ಕಡಂಬರಲ್ಲಿ ಬಹಿರಂಗ ಕ...
03-01-26 11:04 pm
04-01-26 11:02 pm
HK News Desk
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm
Bank of Baroda, Fraud, Mangalore: ಬ್ಯಾಂಕ್ ಆಫ್...
03-01-26 03:43 pm
ಮುಲ್ಕಿ ಕಂಬಳದಲ್ಲಿ ಬಹುಮಾನ ಗೆದ್ದ ಕೋಣದ ಮುಸ್ಲಿಂ ಮಾ...
02-01-26 12:58 pm
ಮುಂಬೈ ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್...
02-01-26 12:32 pm