ಬ್ರೇಕಿಂಗ್ ನ್ಯೂಸ್
06-01-26 07:04 pm Bangalore Correspondent ಕ್ರೈಂ
ಬೆಂಗಳೂರು, ಜ 06 : ವಿದೇಶಿ ಪ್ರಜೆಯಿಂದ ಕೋಟ್ಯಂತರ ಮೌಲ್ಯದ ಮಾದಕವಸ್ತು ತರಿಸಿಕೊಂಡು ವ್ಯವಸ್ಥಿತವಾಗಿ ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ದಂಧೆಕೋರರನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕ ಬಾಣಸವಾಡಿ ಸೈಯ್ಯದ್ ತಾರೀಖ್ ಇಕ್ಬಾಕ್ (33) ಹಾಗೂ ಕಾಡುಗೋಡಿಯ ಶೇಕ್ ಮೊಹಮ್ಮದ್ ಆರ್ಬಾಜ್ (29) ಬಂಧಿತ ಆರೋಪಿಗಳಾಗಿದ್ದು, 3.5 ಕೋಟಿ ಮೌಲ್ಯದ 3.2 ಕೆ.ಜಿ. ಎಂಡಿಎಂ ಕ್ರಿಸ್ಟೆಲ್ ವಶಕ್ಕೆ ಪಡೆಯಲಾಗಿದೆ. ಇಬ್ಬರನ್ನು ಪೊಲೀಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಸೈಯದ್ ಬಿ.ಕಾಂ ವ್ಯಾಸಂಗ ಮಾಡಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮತ್ತೋರ್ವ ಆರೋಪಿ ಶೇಕ್ ಮೊಹಮ್ಮದ್ ಪಿಯುಸಿ ಓದಿದ್ದು, ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡುತ್ತಿದ್ದ. ಇಬ್ಬರು ಸ್ನೇಹಿತರಾಗಿದ್ದು, ಮಾದಕವಸ್ತು ಸೇವನೆಗೆ ದಾಸರಾಗಿದ್ದರು. ಹಣ ಸಂಪಾದನೆಗಾಗಿ ಡ್ರಗ್ಸ್ ಪೆಡ್ಲಿಂಗ್ ಗೆ ಮುಂದಾಗಿದ್ದರು.
ಸ್ಮಶಾನದ ಸಮಾಧಿಯೊಂದರಲ್ಲಿ ಡ್ರಗ್ಸ್ ಬಚ್ಚಿಟ್ಟಿದ್ದ ಆರೋಪಿಗಳು:
ನೈಜೀರಿಯಾ ಮೂಲದ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಎಂಡಿಎಂ ಡ್ರಗ್ಸ್ ತರಿಸಿಕೊಂಡಿದ್ದರು. ಹೊಸ ವರ್ಷಾಚರಣೆ ವೇಳೆ ಗ್ರಾಹಕರಿಗೆ ಮಾರಾಟ ಮಾಡಿ ಹೆಚ್ಚಿನ ಹಣ ಸಂಪಾದನೆಗೆ ಮುಂದಾಗಿದ್ದರು. ಯಾರಿಗೂ ಅನುಮಾನ ಬಾರದಿರಲು ಹೊಸೂರು ರಸ್ತೆಯ ಸ್ಮಶಾನದ ಸಮಾಧಿಯೊಂದರಲ್ಲಿ 2 ಕೆ.ಜಿ. 480 ಗ್ರಾಂ ಡ್ರಗ್ಸ್ ಬಚ್ಚಿಟ್ಟಿದ್ದರು. ಖಚಿತ ಮಾಹಿತಿ ಆಧರಿಸಿ ಸೈಯದ್ನನ್ನ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೃತ್ಯದಲ್ಲಿ ಮತ್ತೋರ್ವ ಆರೋಪಿ ಭಾಗಿಯಾಗಿರುವುದಾಗಿ ಬಾಯ್ಟಿಟ್ಟದ್ದ. ಮಾಹಿತಿ ಮೇರೆಗೆ ಮತ್ತೋರ್ವ ಆರೋಪಿಯನ್ನ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಎರಡನೇ ಆರೋಪಿ ಮೊಹಮ್ಮದ್ ಆರ್ಬಾಜ್ ವಿರುದ್ಧ ಬೊಮ್ಮನಹಳ್ಳಿ ಮತ್ತು ಆಡುಗೋಡಿ ಪೊಲೀಸ್ ಠಾಣೆಗಳಲ್ಲಿ ಎನ್ ಡಿಪಿಎಸ್ ಅಡಿ ಪ್ರಕರಣ ದಾಖಲಾಗಿವೆ. ಆರು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಬೆಂಗಳೂರು ನಗರದ ವಿವಿಧೆಡೆ ದಾಸ್ತಾನು ಮಾಡಲಾಗಿದ್ದ 55.88 ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ಮಹಾರಾಷ್ಟ್ರದ ಕೊಂಕಣ್ ವಿಭಾಗದ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ATNF) ಪೊಲೀಸರು ಇತ್ತೀಚೆಗೆ ವಶಪಡಿಸಿಕೊಳ್ಳುವ ಮೂಲಕ ರಾಜಸ್ಥಾನದ ಸೂರಜ್ ರಮೇಶ್ ಯಾದವ್, ಮಲ್ಖಾನ್ ರಾಮಲಾಲ್ ಬಿಷ್ಣೋಯ್ ಎಂಬ ನಾಲ್ವರನ್ನು ಬಂಧಿಸಿದ್ದರು. ಮಹಾರಾಷ್ಟ್ರದಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಸಂಬಂಧ ಈ ನಾಲ್ವರನ್ನು ಬಂಧಿಸಲಾಗಿದ್ದು, ಆರೋಪಿಗಳು RJ ಈವೆಂಟ್ ಹೆಸರಿನಲ್ಲಿ ಮಾದಕ ಪದಾರ್ಥಗಳ ತಯಾರಿಕಾ ಘಟಕಗಳನ್ನು ನಡೆಸುತ್ತಿದ್ದುದು ಬೆಳಕಿಗೆ ಬಂದಿತ್ತು. ಆರೋಪಿ ಪಾಟೀಲ್ ತಿಳಿಸಿದ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿತ್ತು.
ಇದಕ್ಕೂ ಮುನ್ನ ಬ್ರೆಡ್ ಪ್ಯಾಕೆಟ್ನಲ್ಲಿ ಡ್ರಗ್ಸ್ ಅವಿತಿಟ್ಟು ಮುಂಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ನೈಜೀರಿಯಾ ಮೂಲದ ಒಲಾಜಿಡೆ ಎಸ್ತಾರ್ ಎಂಬ ಯುವತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, 1.20 ಕೋಟಿ ರೂ ಮೌಲ್ಯದ ಕೊಕೇನ್ ವಶಕ್ಕೆ ಪಡೆದಿದ್ದ ಘಟನೆ ನಡೆದಿತ್ತು. ಈಕೆಯಿಂದ 1.20 ಕೋಟಿ ಮೌಲ್ಯದ 121 ಗ್ರಾಂ ಕೊಕೇನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ವಶಕ್ಕೆ ಪಡೆದು ಆರೋಪಿತೆಯ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವ ಬಗ್ಗೆ ಪೊಲೀಸರು ತಿಳಿಸಿದ್ದರು.
The Ashoknagar police in Bengaluru have arrested two individuals involved in procuring high-value narcotics from a foreign national and selling them across the city. The accused, Syed Tariq Iqbal (33) of Chikka Banaswadi and Sheikh Mohammed Arbaaz (29) of Kadugodi, were caught with 3.2 kg of MDMA crystals worth ₹3.5 crore.
07-01-26 10:33 pm
Bangalore Correspondent
ಇನ್ನೆಷ್ಟು ದಿನ ರಾಜಕೀಯದಲ್ಲಿ ಇರುತ್ತೇನೋ ಗೊತ್ತಿಲ್ಲ...
07-01-26 08:00 pm
ಬಂಧನ ವೇಳೆ ಪೊಲೀಸರ ಎಳೆದಾಟ, ಹರಿದ ಮಹಿಳೆಯ ಬಟ್ಟೆ ;...
07-01-26 03:07 pm
ಮತಪಟ್ಟಿ ಪರಿಷ್ಕರಣೆ ; ಉತ್ತರ ಪ್ರದೇಶದಲ್ಲಿ 2.89 ಕೋ...
07-01-26 12:12 pm
ಬಳ್ಳಾರಿ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ 25 ಲಕ...
06-01-26 08:23 pm
07-01-26 09:37 pm
HK News Desk
ದೆಹಲಿಯಲ್ಲಿ ಹಿಂಸಾಚಾರ ; ಮಸೀದಿ ಆವರಣದಲ್ಲಿ ಅಕ್ರಮ ಕ...
07-01-26 04:47 pm
ತಮಿಳುನಾಡಿನ ದೀಪೋತ್ಸವಕ್ಕೆ ಹೈಕೋರ್ಟ್ ಅನುಮತಿ ; ಅವಕ...
07-01-26 01:53 pm
ಬಾಂಗ್ಲಾದಲ್ಲಿ ಒಂದೇ ದಿನ ಮತ್ತಿಬ್ಬರು ಹಿಂದುಗಳ ಹತ್ಯ...
06-01-26 12:40 pm
ಹರಿದ್ವಾರ - ಹೃಷಿಕೇಶ ಪರಿಸರದಲ್ಲಿ ಹಿಂದುಯೇತರ ವ್ಯಕ್...
05-01-26 02:13 pm
07-01-26 11:06 pm
Mangalore Correspondent
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯಗೆ ನಿಂದಿಸಿ ಬರೆದು ಜ...
07-01-26 05:15 pm
ಬೋಟನ್ನು ಎಳೆದು ಕಟ್ಟುತ್ತಿದ್ದಾಗ ನದಿಗೆ ಬಿದ್ದು ಮೀನ...
07-01-26 12:10 pm
ವಿಧವೆ ಮೊಮ್ಮಗಳು, ಮರಿ ಮಕ್ಕಳೊಂದಿಗಿದ್ದ ವೃದ್ಧೆಯ ಗು...
06-01-26 08:25 pm
ನವೋದಯ ಟ್ರಸ್ಟ್ ನಿಂದ ಮಹಿಳಾ ಸಬಲೀಕರಣಕ್ಕೆ ಕೊಡುಗೆ ;...
06-01-26 07:51 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm