ಬ್ರೇಕಿಂಗ್ ನ್ಯೂಸ್
19-01-26 04:16 pm HK News Desk ಕ್ರೈಂ
ಮೈಸೂರು, ಜ.19 : ಹುಣಸೂರಿನಲ್ಲಿ ಎರಡು ವಾರಗಳ ಹಿಂದೆ ಹಾಡಹಗಲೇ ಚಿನ್ನದಂಗಡಿ ದರೋಡೆಗೈದು ಪರಾರಿಯಾಗಿದ್ದ ಪ್ರಕರಣದಲ್ಲಿ ಮೈಸೂರು ಪೊಲೀಸರು ಬಿಹಾರ ಮೂಲದ ಇಬ್ಬರನ್ನು ಕಡೆಗೂ ಹೆಡೆಮುರಿ ಕಟ್ಟಿದ್ದಾರೆ.
ಬಿಹಾರದ ದರ್ಭಾಂಗ ಜಿಲ್ಲೆಯ ಹೃಷಿಕೇಶ್ ಸಿಂಗ್ ಮತ್ತು ಬಾಗಲ್ಪುರದ ಪಂಕಜ್ ಕುಮಾರ್ ಬಂಧಿತರು. ಬಂಧಿತ ಆರೋಪಿಗಳನ್ನು ಮೈಸೂರಿಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಇನ್ನೂ ಮೂವರು ಆರೋಪಿಗಳ ಪತ್ತೆಗೆ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ. ಬಿಹಾರದ ಎಸ್‌ಟಿಎಫ್ ನೆರವಿನೊಂದಿಗೆ ರಾಜ್ಯದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಒಂದು ಚಿನ್ನದ ಸರ, 1 ಲಕ್ಷ ಮೌಲ್ಯದ ಚಿನ್ನದ ಉಂಗುರ, ಬೈಕ್ ಆಭರಣ ಸಂಗ್ರಹಿಸಿಡುವ ಪೆಟ್ಟಿಗೆ ವಶಪಡಿಸಲಾಗಿದೆ. ದರೋಡೆಕೋರರ ಸೆರೆಗಾಗಿ ಪೊಲೀಸರ ಐದು ತಂಡಗಳನ್ನು ರಚಿಸಲಾಗಿತ್ತು. ದರೋಡೆ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪಕ್ಕಾ ವೃತ್ತಿಪರರು ಕೃತ್ಯ ಎಸಗಿರುವ ಶಂಕೆ ಬಂದಿತ್ತು. ಹುಣಸೂರು ನಗರದ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಚಿನ್ನದಂಗಡಿಯಲ್ಲಿ ದರೋಡೆ ನಡೆದಿತ್ತು. ಹಾಡ ಹಗಲೇ ಚಿನ್ನದಂಗಡಿಗೆ ನುಗ್ಗಿದ್ದ ಬಂದೂಕುಧಾರಿಗಳು ಕೆಲವೇ ಕ್ಷಣಗಳಲ್ಲಿ 10 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದರು.
Mysuru police have arrested two men from Bihar in connection with the daylight robbery at Sky Gold and Diamond Jewellery in Hunsur, where gold ornaments worth over ₹10 crore were looted. The accused, identified as Hrishikesh Singh and Pankaj Kumar, were nabbed with the help of Bihar STF after a two-week hunt. Police have recovered some gold items and are continuing the search for three other suspects involved in the well-planned robbery captured on CCTV.
10-03-26 01:47 pm
HK News Staffer
ಗುರುಗ್ರಾಮ್ನಲ್ಲಿ ನಿರ್ಮಾಣ ಹಂತದ ಗೋಡೆ ಕುಸಿತ ; 7...
10-03-26 11:04 am
ಸ್ತ್ರೀ–ಪುರುಷರ ನಗ್ನ ಫೋಟೋಗಳು, ಕೊಳೆತ ಟೊಮೆಟೋ ; ಬೆ...
10-03-26 10:49 am
ಕಲಬುರಗಿ ಜಾತ್ರೆಯಲ್ಲಿ ಭೀಕರ ದುರಂತ; ರಥದ ಚಕ್ರಕ್ಕೆ...
09-03-26 09:51 pm
ಕೊಡಗು ; ಹತ್ತು ದಿನ ಅಂತರದಲ್ಲಿ ಕಾಡಾನೆಗೆ ಎರಡನೇ ಬಲ...
09-03-26 08:07 pm
10-03-26 09:46 pm
HK News Desk
ಹರ್ಮುಜ್ ಜಲಸಂಧಿಯಲ್ಲಿ ತೈಲ ಹಡಗು ಬಂಧಿ ; ಜಗತ್ತಿಗೆ...
10-03-26 04:30 pm
ಕಚ್ಚಾ ತೈಲ ದರ ಏರಿಕೆ ; ಪಾಕಿಸ್ತಾನದಲ್ಲಿ ಅಲ್ಲೋಲಕಲ್...
10-03-26 01:31 pm
ಇರಾನ್ ನೂತನ ಸರ್ವೋಚ್ಚ ನಾಯಕನಾಗಿ ಆಯತುಲ್ಲಾ ಮೊಜ್ತಬ...
09-03-26 01:44 pm
ಇರಾನ್ ಮೇಲೆ ಮತ್ತೊಂದು ಭಾರಿ ದಾಳಿಗೆ ಟ್ರಂಪ್ ಸಿದ್ಧ...
07-03-26 11:58 am
10-03-26 05:00 pm
HK News Staffer
ಬಿಸಿಲಿಗೆ ತತ್ತರಿಸಿದ ಅಳಿಲಿನ ದಣಿವು ನೀಗಿಸಿದ ಟ್ರಾಫ...
09-03-26 09:52 pm
ಗಲ್ಫ್ ಯುದ್ಧ ; ಮಂಗಳೂರಿನಿಂದ ದುಬೈ, ಜೆದ್ದಾ ಸೇರಿ ಹ...
09-03-26 07:29 pm
ತಲಪಾಡಿಯ ಯುವಕ ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಸ...
09-03-26 02:53 pm
ಬೇರೆ ರಾಷ್ಟ್ರಗಳಿಂದ ಬಂದವರಿಗೆ ಮಸೀದಿ, ಚರ್ಚ್ ಕಟ್ಟಲ...
09-03-26 12:50 pm
10-03-26 08:32 pm
Mangaluru Staffer
ಉಪ್ಪಿನಂಗಡಿ ; ಖಾಸಗಿ ವ್ಯಕ್ತಿ ಮನೆಯಲ್ಲಿ ಅಕ್ರಮ ಶೇಖ...
10-03-26 07:01 pm
ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವೇಳೆ ಕಿರಿಕ್ ; 19 ವರ...
10-03-26 01:49 pm
Vexon fraud Company, FIR: ಬ್ಲೇಡ್ ಕಂಪನಿ ವೆಕ್ಸನ...
28-02-26 11:12 am
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm