ಬ್ರೇಕಿಂಗ್ ನ್ಯೂಸ್
24-01-26 08:53 pm HK Staffer ಕ್ರೈಂ
ಬೆಂಗಳೂರು, ಜ.24: ಬಳ್ಳಾರಿಯಲ್ಲಿರುವ ಬಿಜೆಪಿ ಶಾಸಕ ಜನಾರ್ಧನ ರೆಡ್ಡಿ ಅವರಿಗೆ ಸೇರಿದ ಮಾಡೆಲ್ ಹೌಸ್ ಗೆ ನಿನ್ನೆ ರಾತ್ರಿ ಬೆಂಕಿ ಹಾಕಿದ ಘಟನೆ ನಡೆದಿದ್ದು ಪ್ರಕರಣ ಸಂಬಂಧಿಸಿ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ. ಇದೇ ವೇಳೆ, ಘಟನೆಗೆ ಶಾಸಕ ನಾರಾ ಭರತ್ ರೆಡ್ಡಿ ಕಾರಣ ಎಂಬ ಆರೋಪ ಕೇಳಿಬಂದಿದೆ.
ಬಳ್ಳಾರಿ ನಗರದ ಬೆಳಗಲ್ಲು ರಸ್ತೆಯ ಜಿ.ಸ್ಕ್ವೇರ್ ಲೇಔಟ್ ನಲ್ಲಿ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರು ನಿರ್ಮಿಸಿದ್ದ ಮಾಡೆಲ್ ಮನೆಗೆ ನಿನ್ನೆ ರಾತ್ರಿ ಯಾರೋ ಬೆಂಕಿ ಹಚ್ಚಿದ್ದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಬಗ್ಗೆ ಜಿ ಸ್ಕ್ವೆಯರ್ ಸೈಟ್ ಇಂಜಿಯರ್ ರಿಜ್ವಾನ್ ಮತ್ತು ಮಾಡೆಲ್ ಹೌಸ್ ಸೂಪರ್ ವೈಸರ್ ಇಮ್ರಾನ್ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಲೇಔಟ್ ನಲ್ಲಿ ನಿವೇಶನ ಖರೀದಿ ಮಾಡುವವರು 60*60 ನಿವೇಶನದಲ್ಲಿ ಮಾದರಿ(ಮಾಡೆಲ್) ಮನೆ ನಿರ್ಮಾಣ ಮಾಡಿದ್ದರು. ಇದಕ್ಕೆ ಇನ್ನೂ ವಿದ್ಯುತ್ ಸಂಪರ್ಕ ಸಹ ನೀಡಿರಲಿಲ್ಲ. ನಿನ್ನೆ ಸಂಜೆ ಕೆಲ ದುಷ್ಕರ್ಮಿಗಳು ಈ ಮನೆಗೆ ಬೆಂಕಿ ಹಚ್ಚಿದ್ದಾರೆ. ದೂರದಲ್ಲಿದ್ದ ಸೆಕ್ಯೂರಿಟಿ ಗಾರ್ಡ್ಗಳು ಬರುವ ವೇಳೆಗೆ ಅವರು ಪರಾರಿಯಾಗಿದ್ದಾರೆ.
ವಿಚಾರ ತಿಳಿದು ಅಗ್ನಿ ಶಾಮಕ ವಾಹನ ಬಂದು ನಂದಿಸುವ ವೇಳೆಗೆ ಮನೆ ಬಹುತೇಕ ಸುಟ್ಟು ಹೋಗಿತ್ತು. ಘಟನಾ ಸ್ಥಳಕ್ಕೆ ಎಸ್ಪಿ ಸುಮನ್ ಪೆನ್ನೇಕರ್, ಎಎಸ್ಪಿ ರವಿಕುಮಾರ್ ಸೇರಿದಂತೆ ಪೊಲೀಸರು ಆಗಮಿಸಿ ಪರಿಶೀಲಿಸಿದರು. ಫೋರೆನ್ಸಿಕ್ ತಂಡ ಪರಿಶೀಲನೆ ನಡೆಸಿದೆ. ಪೆಟ್ರೋಲ್ ಅಥವಾ ಡಿಸೇಲ್ ಬಳಸಲಾಗಿದೆಯಾ? ಬೆಂಕಿ ಹೇಗೆ ಹತ್ತಿರಬಹುದು ಎನ್ನುವ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಘಟನೆ ಬಗ್ಗೆ ಎಸ್ಪಿ ಡಾ.ಸುಮನ್ ಡಿ. ಪೆನ್ನೆಕರ್ ಪ್ರತಿಕ್ರಿಯಿಸಿದ್ದು, ಮನೆಗೆ ಬೆಂಕಿ ಹಚ್ಚಿದ್ದು ರೀಲ್ಸ್ ಮಾಡಲು ಹೋದ ಹುಡುಗರು ಎಂದು ಹೇಳಿದ್ದಾರೆ. ಯುವಕರ ಗುಂಪು ರೀಲ್ಸ್ ಹಾಗೂ ಪೋಟೋ ಶೂಟ್ ಮಾಡಲು ಈ ಕೃತ್ಯ ಎಸಗಿದ್ದೆಂದು ಪ್ರಾಥಮಿಕ ತನಿಖೆಯಲ್ಲಿ ನಮಗೆ ತಿಳಿದು ಬಂದಿರೋದಾಗಿ ಎಸ್ಪಿ ಹೇಳಿದ್ದಾರೆ. ಅವರಲ್ಲಿ ಆರು ಜನ ಅಪ್ರಾಪ್ತರು. ಇಬ್ಬರು ಮೇಜರ್ ಇದ್ದಾರೆ. ವಶಕ್ಕೆ ಪಡೆದವರ ಮೊಬೈಲ್ ನಲ್ಲಿ ನಮಗೆ ರೀಲ್ಸ್ ಹಾಗೂ ಫೋಟೊ ಸಿಕ್ಕಿವೆ. ಅಲ್ಲಿಯೇ ಬಿದ್ದಿದ್ದ ಬೆಂಕಿ ಪಟ್ಟಣದಿಂದ ಬಾಲಕನೊಬ್ಬ ಗೊತ್ತಿಲ್ಲದೇ ವಸ್ತುವೊಂದಕ್ಕೆ ಬೆಂಕಿ ಹಚ್ಚಿದ್ದಾನೆ ಎಂದು ತಿಳಿಸಿದ್ದಾರೆ.
ಭರತ್ ರೆಡ್ಡಿ ಕೈವಾಡ ಎಂದು ಆರೋಪ
ಮಾಡೆಲ್ ಹೌಸ್ ಗೆ ಬೆಂಕಿ ಹಚ್ಚಿದ್ದರಲ್ಲಿ ನಗರದ ಶಾಸಕ ನಾರಾ ಭರತ್ ರೆಡ್ಡಿ ಕೈವಾಡ ಇದೆಯೆಂದು ಜನಾರ್ದನ ರೆಡ್ಡಿ ಮತ್ತು ಸೋಮಶೇಖರ್ ರೆಡ್ಡಿ ಸಹೋದರರು ಆರೋಪಿಸಿದ್ದಾರೆ. ಭರತ್ ರೆಡ್ಡಿ ಜನವರಿ 1ರಂದು ಅವಂಬಾವಿಯ ನಮ್ಮ ಮನೆಗೆ ಬಂದು ಬ್ಯಾನರ್ ಗಲಾಟೆ ವಿಚಾರದಲ್ಲಿ ನಾನು ಮನಸ್ಸು ಮಾಡಿದ್ದರೆ ನಿಮ್ಮ ಮನೆಯನ್ನು ಸುಟ್ಟು ಹಾಕುವೆ ಎಂದು ಹೇಳಿದ್ದ. ನಾವು ವಾಸ ಮಾಡಿರುವ ಮನೆ ಸುಡಲು ಆಗದ ಕಾರಣ ನಮಗೆ ಸೇರಿದ ಈ ಮನೆ ಸುಟ್ಟಿದ್ದಾನೆ ಎಂದು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.
A model house belonging to BJP MLA G. Janardhan Reddy was set on fire on Thursday night in Ballari district. In connection with the incident, police have taken eight persons into custody, including six minors and two adults. aThe incident occurred at a model house constructed by Janardhan Reddy and former minister B. Sriramulu at G-Square Layout on Belagallu Road in Ballari city. The incident has triggered strong reactions from BJP leaders and supporters.
24-01-26 08:31 pm
Mangaluru Staffer
ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾದಿಂದ ಅಕ್ರಮ ನಿವೇಶನ...
23-01-26 03:21 pm
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
24-01-26 11:23 pm
Mangaluru Staffer
ದೇಶದ ಅತಿ ಹಳೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ಮಂಗಳೂರಿನ...
24-01-26 08:14 pm
ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ...
24-01-26 08:04 pm
ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ...
23-01-26 09:21 pm
National Conference on Neuropsychiatry Held a...
23-01-26 09:08 pm
24-01-26 11:18 pm
Mangaluru Staffer
ಜನಾರ್ದನ ರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ; ಎಂಟು ಮಂ...
24-01-26 08:53 pm
ಅವಧಿ ಮೀರಿದ ಮಾತ್ರೆ ನೀಡಿದ್ದಾಗಿ ವಿಡಿಯೋ ವೈರಲ್ ; ಕ...
24-01-26 02:13 pm
ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ...
23-01-26 09:36 pm
ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನಕಲಿ ಚಿನ್ನ...
23-01-26 03:34 pm