ಬ್ರೇಕಿಂಗ್ ನ್ಯೂಸ್
06-08-26 06:13 pm HK News Staffer ಕ್ರೈಂ
ಬೆಂಗಳೂರು, ಆ 06: ನೇಪಾಳ ಮೂಲದ ಇಬ್ಬರು ಯುವತಿಯರು ಒಂದೇ ಮರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ನೇಪಾಳ ಮೂಲದ ಸಿರಿಜನ (24) ಹಾಗೂ ರೀತಾ (24) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯರು. ಜಕ್ಕೂರಿನ ಶಿವನಹಳ್ಳಿ ಹೋಟೆಲ್ ಬಳಿಯ ಮರವೊಂದರಲ್ಲಿ ವೇಲಿನಿಂದ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಗುರುವಾರ ಬೆಳಗ್ಗೆ ಇಬ್ಬರ ಮೃತದೇಹಗಳು ಪತ್ತೆಯಾಗಿದೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲಿಸಿ, ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನ ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.
ಇಬ್ಬರು ಯುವತಿಯರು ಸಂಬಂಧಿಗಳಾಗಿದ್ದು, ಒಂದು ತಿಂಗಳ ಹಿಂದೆ ಕೆಲಸ ಅರಸಿ ನೇಪಾಳದಿಂದ ಇಬ್ಬರು ಒಟ್ಟಿಗೆ ಬೆಂಗಳೂರಿಗೆ ಬಂದಿದ್ದರು. ಓರ್ವ ಯುವತಿ ಪ್ರೇಜರ್ ಟೌನ್ನಲ್ಲಿ ವಾಸವಿದ್ದರೆ ಮತ್ತೋರ್ವ ಯುವತಿ ಜಕ್ಕೂರಿನಲ್ಲಿ ವಾಸವಿದ್ದರು. ಬಡತನ ಹಿನ್ನೆಲೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಬಡತನ ಹಾಗೂ ಮಾನಸಿಕ ಖಿನ್ನತೆಯಿಂದ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಂಬಂಧಿ ರಂಜಿತ್ ಎಂಬುವರು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ. ಮಿಥುನ್ ಕುಮಾರ್, ಇಂದು ಬೆಳಗ್ಗೆ 7:30ರ ಸುಮಾರಿಗೆ ಮರವೊಂದಕ್ಕೆ ಇಬ್ಬರು ಯುವತಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಯಿತು. ಒಂದು ತಿಂಗಳ ಹಿಂದೆ ನೇಪಾಳದಿಂದ ಬೆಂಗಳೂರಿಗೆ ಬಂದಿದ್ದರು. ಇಬ್ಬರು ಯುವತಿಯರು ಪ್ರತ್ಯೇಕವಾಗಿ ವಾಸವಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
25-09-26 04:49 pm
HK News Staffer
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
26-09-26 08:05 pm
HK News Staffer
ಸೌಜನ್ಯ ಪ್ರಕರಣದ ಮರು ತನಿಖೆ ; ಹಿಂದಿನ ತನಿಖಾ ಲೋಪಗಳ...
26-09-26 03:35 pm
ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ ವಿಚಾರಣೆ ; ಪ...
26-09-26 11:04 am
ಮೈಸೂರು ದಸರಾಕ್ಕೆ ಕರಾವಳಿಯ ಕಂಬಳದ ಮೆರುಗು ; ಅ.18-1...
25-09-26 07:31 pm
ಬಂಟ್ವಾಳ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಬಿಗ್...
25-09-26 07:05 pm
25-09-26 04:53 pm
HK News Staffer
ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಓ ನೇ...
25-09-26 11:17 am
ಉಡುಪಿ ; ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಟಿ ಬಸ...
25-09-26 10:30 am
ಶ್ರೀನಿವಾಸ ಕಾಲೇಜಿನಲ್ಲಿ ರ್ಯಾಗಿಂಗ್ ; ಸೀನಿಯರ್ ಗುಂ...
25-09-26 08:57 am
ಪ್ರೀತಿ ನೆಪದಲ್ಲಿ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ದೌ...
24-09-26 05:10 pm