ಬ್ರೇಕಿಂಗ್ ನ್ಯೂಸ್
15-08-26 09:06 pm HK News Staffer ಕ್ರೈಂ
ಮಂಗಳೂರು, ಆ.15: ಮಂಗಳೂರಿನ ಹೆಸರಾಂತ ಸಿಟಿ ಸೆಂಟರ್ ಮಾಲ್ ನಲ್ಲಿರುವ ಕೆಎಫ್ ಸಿ ಚಿಕನ್ ಸೆಂಟರ್ ನಲ್ಲಿ ಕೊಳೆತ ಮಾಂಸದ ಫುಡ್ ಐಟಂ ಕೊಟ್ಟಿದ್ದಾರೆಂಬ ದೂರಿನ ಮೇರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಆರು ತಿಂಗಳ ಹಿಂದೆ ಪ್ಯಾಕ್ ಮಾಡಿಟ್ಟಿರುವ ಕೊಳೆತ ಚಿಕನ್ ಮಾಂಸವನ್ನು ಪತ್ತೆ ಮಾಡಿದ್ದಾರೆ.
ಮಾಜಿ ಮೇಯರ್ ಮತ್ತು ಬಿಜೆಪಿ ನಾಯಕಿ ಕವಿತಾ ಸನಿಲ್ ಅವರು ತನ್ನ ಮಗುವಿಗಾಗಿ ಸ್ವಿಗ್ಗಿ ಮೂಲಕ ಫೆರಿ ಫೆರಿ ಎನ್ನುವ ಚಿಕನ್ ಆರ್ಡರ್ ಮಾಡಿಸಿದ್ದರು. ಕೆಎಫ್ ಸಿ ಚಿಕನ್ ಪಾರ್ಸೆಲ್ ತರಿಸಿ ತನ್ನ ಹತ್ತು ವರ್ಷದ ಮಗು ತಿನ್ನುತ್ತಿದ್ದಾಗಲೇ ಕಪ್ಪಾಗಿರುವುದು ಕಂಡುಬಂದಿತ್ತು. ಅಲ್ಲದೆ, ವಾಸನೆ ಬರುತ್ತಿದ್ದ ರೀತಿ ಇತ್ತು. ಹೀಗಾಗಿ ಅದರ ಬಿಲ್ ಜೊತೆಗೆ ಕವಿತಾ ಸನಿಲ್ ನೇರವಾಗಿ ಸಿಟಿ ಸೆಂಟರ್ ಮಾಲ್ ನಲ್ಲಿರುವ ಚಿಕನ್ ಸೆಂಟರ್ ಗೆ ತೆರಳಿದ್ದು ಸ್ಥಳಕ್ಕೆ ಡಿಎಚ್ಓ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕರೆಸಿದ್ದಾರೆ. ಉಸ್ತುವಾರಿ ಸಚಿವ ಯುಟಿ ಖಾದರ್ ಗಮನಕ್ಕೂ ತಂದಿದ್ದಾರೆ.








ಒಳಗಡೆ ಹೊಕ್ಕು ಪರಿಶೀಲನೆ ನಡೆಸಿದಾಗ ಐದಾರು ತಿಂಗಳ ಹಿಂದೆ ಪ್ಯಾಕ್ ಮಾಡಿರುವ ಚಿಕನ್ ಪತ್ತೆಯಾಗಿದೆ. ಆರಂಭದಲ್ಲಿ ಸಾರಿ ಎನ್ನುತ್ತಲೇ ಆ ರೀತಿ ಏನೂ ಇಲ್ಲ, ಒಂದು ಪಾರ್ಸೆಲ್ ಮಾತ್ರ ಆ ರೀತಿಯಾಗಿದೆ ಎಂದು ಸಮಜಾಯಿಷಿ ಕೊಡುತ್ತಿದ್ದವರು ಬಳಿಕ ಸಪ್ಪಗಾಗಿದ್ದಾರೆ. ಒಳಗಡೆ ಫ್ರೀಜರ್ ನಲ್ಲಿ ಮಾರ್ಚ್ ತಿಂಗಳಲ್ಲಿ ಪ್ಯಾಕ್ ಆಗಿದ್ದ ಚಿಕನ್ ಗಟ್ಟಿಯಾಗಿರುವುದು ಪತ್ತೆಯಾಗಿದೆ. ಅಲ್ಲದೆ, ಒಳಗೆ ಗಬ್ಬು ವಾಸನೆಯೂ ಬರ್ತಾ ಇತ್ತು. ಇದನ್ನು ನೋಡಿದ ಅಧಿಕಾರಿಗಳು ಮತ್ತು ಸಾರ್ವಜನಿಕರು ಗಾಬರಿಗೊಂಡಿದ್ದು ಎಲ್ಲವನ್ನೂ ಹೊರತೆಗೆಸಿ ತಪಾಸಣೆ ನಡೆಸಿದ್ದಾರೆ.
ಮೂರು ಮಾದರಿಯ ಚಿಕನ್ ಗಳನ್ನು ಅಧಿಕಾರಿಗಳು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಬಳಿಕ ಕೆಎಫ್ ಸಿ ಚಿಕನ್ ಶಾಪ್ ಅನ್ನು ಬಂದ್ ಮಾಡಿದ್ದಾರೆ. ಪ್ರಯೋಗಾಲಯ ವರದಿ ಬಂದ ಬಳಿಕ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. ಕೆಎಫ್ ಸಿಯಲ್ಲಿ ಬೇರೆ ಬೇರೆ ಮಾದರಿಯ ಚಿಕನ್ ಐಟಂಗಳಿಗೆ ವಿಶೇಷ ಆಫರ್ ಗಳಿದ್ದು ಚಿಕನ್ ತಿನ್ನುವುದಕ್ಕಾಗಿಯೇ ಸಾವಿರಾರು ಜನರು ಸಿಟಿ ಸೆಂಟರ್ ಬರುತ್ತಾರೆ. ಆದರೆ ಇಂಥ ಹೆಸರಾಂತ ಫುಡ್ ಕೌಂಟರ್ ನಲ್ಲಿ ಚಿಕನ್ ಪತ್ತೆಯಾಗಿರುವುದು ಮಂಗಳೂರಿನಲ್ಲೂ ಕೊಳೆತ ಚಿಕನ್ ತಿನ್ನಿಸುವವವರಿದ್ದಾರೆಂಬುದು ಖಾತ್ರಿಯಾಗಿದೆ. ಕವಿತಾ ಸನಿಲ್ ಮೂರು ಗಂಟೆಗಳ ಕಾಲ ಅಲ್ಲಿಯೇ ಇದ್ದು ಅಧಿಕಾರಿಗಳ ಮೂಲಕ ಪರಿಶೀಲನೆಗೆ ಒಳಪಡಿಸಿದ್ದಾರೆ.

ಸ್ಟೋರೇಜ್ ರೂಂನಲ್ಲಿ ದುರ್ವಾಸನೆ
ಔಟ್‌ಲೆಟ್‌ಗೆ ಬೆಂಗಳೂರಿನಿಂದ ಕೋಳಿ ಮಾಂಸ ರವಾನೆಯಾಗುತ್ತಿದ್ದು, ಸುಮಾರು 5-6 ತಿಂಗಳ ಮಾಂಸವನ್ನು ದಾಸ್ತಾನಿಡಲಾಗುತ್ತದೆ. ಅಧಿಕಾರಿಗಳು ಸ್ಟೋರೆಜ್ ರೂಂ ಪ್ರವೇಶಿಸುತ್ತಲೇ ಗಬ್ಬು ವಾಸನೆ ಬಂದಿದ್ದು, ಗರಂ ಆಗಿದ್ದಾರೆ. ಸ್ಟೊರೇಜ್‌ನಲ್ಲಿ ಚಿಲ್ಲ್ ಚಿಕನ್, ಫ್ರೋಝನ್ ಚಿಕನ್ ಸೇರಿದಂತೆ ಮೂರು ಮಾದರಿಯ ಚಿಕನ್‌ಗಳನ್ನು ದಾಸ್ತಾನಿಡಲಾಗುತ್ತದೆ. ಸ್ಟೋರೆಜ್ ಸಂಪೂರ್ಣ ಅನೈರ್ಮಲ್ಯದಿಂದ ಕೂಡಿದ್ದು, ಎಲ್ಲ ಮಾದರಿಗಳನ್ನು ಸಂಗ್ರಹ ಮಾಡಿದ್ದಾರೆ.
ಅವಧಿ ಮೀರಿದ ಎಣ್ಣೆ ಬಳಕೆ
ಸಾಮಾನ್ಯವಾಗಿ ಎಣ್ಣೆಯಲ್ಲಿ 2ರಿಂದ 3 ಬಾರಿ ಬ್ರೊಸ್ಟೆಡ್ ಚಿಕನ್‌ಗಳನ್ನು ಫ್ರೈ ಮಾಡಬಹುದು. ಔಟ್‌ಲೆಟ್‌ನಲ್ಲಿ 3 ದಿನಗಳಿಂದ ಅದೇ ಎಣ್ಣೆಯನ್ನು ಬಳಕೆ ಮಾಡುತ್ತಿರುವುದಾಗಿ ಸಿಬ್ಬಂದಿ ಹೇಳಿದ್ದಾರೆ. ಎಣ್ಣೆ ಕಪ್ಪು ಬಣ್ಣಕ್ಕೆ ತಿರುಗಿದ್ದು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೂರು ಮಾದರಿಯ ಕೋಳಿ ಮಾಂಸ ಹಾಗೂ ಅವಧಿ ಮೀರಿದ ಎಣ್ಣೆಯನ್ನು ಸಂಗ್ರಹಿಸಿದ್ದು, ಅದರ ಗುಣಮಟ್ಟ ಪರಿಶೀಲನೆಗೆ ಮೈಸೂರಿನ ಆಹಾರ ತಪಾಸಣಾ ಲ್ಯಾಬೋರೇಟರಿಗೆ ಕಳುಹಿಸಲಾಗುವುದು. ಆ ವರದಿ ಬಂದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಆಹಾರ ಸುರಕ್ಷತಾ ಪ್ರವೀಣ್ ತಿಳಿಸಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am