ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು ಬಾವಿಗೆಸೆದ ಮಹಿಳೆ ; ಎರಡು ವರ್ಷದ ಪುಟಾಣಿ ಸಾವು, ಇನ್ನೊಬ್ಬ ಮಗು ಗಂಭೀರ

19-09-26 09:57 pm       HK News Staffer   ಕ್ರೈಂ

ಗಂಡನೊಂದಿಗಿನ ಕೌಟುಂಬಿಕ ಕಲಹದ ಸಿಟ್ಟಿನಲ್ಲಿ ಮಹಿಳೆಯೊಬ್ಬಳು ತನ್ನ ಜೊತೆಗಿದ್ದ ಇಬ್ಬರು ಎಳೆಯ ಮಕ್ಕಳನ್ನು ಬಾವಿಗೆ ಎಸೆದ ಘೋರ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ನೆ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಪುತ್ತೂರು, ಸೆ.19: ಗಂಡನೊಂದಿಗಿನ ಕೌಟುಂಬಿಕ ಕಲಹದ ಸಿಟ್ಟಿನಲ್ಲಿ ಮಹಿಳೆಯೊಬ್ಬಳು ತನ್ನ ಜೊತೆಗಿದ್ದ ಇಬ್ಬರು ಎಳೆಯ ಮಕ್ಕಳನ್ನು ಬಾವಿಗೆ ಎಸೆದ ಘೋರ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ನೆ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. 

ಪತಿಯ ತಂಗಿಯ ಮಗು ಎರಡು ವರ್ಷದ ರಬೀಹಾ ಮೃತಪಟ್ಟಿದ್ದು, ಮಹಿಳೆಯ ಮಗು ನಾಲ್ಕು ವರ್ಷದ ಆಲಿಯಾ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಪೆರ್ನೆ ನಿವಾಸಿ ಸಿನಾನ್ (32) ಹಾಗೂ ಆತನ ಪತ್ನಿ ನೂರುನ್ನೀಸಾ (28) ನಡುವೆ ಫೋನ್ ಕರೆಯಲ್ಲಿ ವೈವಾಹಿಕ ವಿಚಾರಕ್ಕೆ ಸಂಬಂಧಿಸಿ ತೀವ್ರ ವಾಗ್ವಾದ ನಡೆದಿತ್ತು. ಈ ವೇಳೆ ಕೋಪಗೊಂಡ ಪತ್ನಿ ನೂರುನ್ನೀಸಾ, ಮನೆಯಲ್ಲಿದ್ದ ತನ್ನ ನಾಲ್ಕು ವರ್ಷದ ಮಗು ಹಾಗೂ ಪತಿಯ ತಂಗಿಯ ಎರಡು ವರ್ಷದ ಮಗುವನ್ನು ಕರೆದೊಯ್ದು ಮನೆಯ ಸಮೀಪದ ಬಾವಿಗೆ ಎಸೆದಿದ್ದಾಳೆ.

ಘಟನೆ ತಿಳಿದ ತಕ್ಷಣವೇ ಕಾರ್ಯ ಪ್ರವೃತ್ತರಾದ ಸ್ಥಳೀಯರು ಬಾವಿಗಿಳಿದು ಮಕ್ಕಳನ್ನು ಮೇಲಕ್ಕೆತ್ತಿದ್ದಾರೆ. ಆದರೆ, ಅಷ್ಟರಲ್ಲಿ ಪತಿಯ ತಂಗಿಯ ಮಗು ಮೃತಪಟ್ಟಿತ್ತು. ಆರೋಪಿತ ಮಹಿಳೆಯ ಸ್ವಂತ ಮಗುವಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಮಂಗಳೂರಿನ ಆಸ್ಪತ್ರೆಗೆ ರವಾನಿಸಿ ತುರ್ತು ಚಿಕಿತ್ಸೆ ನೀಡಲಾಗಿದೆ. ದುರಂತಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ (ಅ.ಕ್ರಂ 121/2026) ಪ್ರಕರಣ ದಾಖಲಾಗಿದೆ. ಕೃತ್ಯ ಎಸಗಿದ ನೂರುನ್ನಿಸಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

A woman allegedly threw two young children into a well following a heated marital dispute with her husband at Perne in the Uppinangady police station limits on Saturday afternoon. One child died, while the other sustained serious injuries and is undergoing treatment at a private hospital in Mangaluru.