ಶಾರ್ಜಾದಲ್ಲಿ ಹತ್ಯೆಯಾದ ಕುಂದಾಪುರದ ವ್ಯಕ್ತಿಯ ಶವ ಹುಟ್ಟೂರಿಗೆ ; ಅಪ್ಪ-ಅಮ್ಮನ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ, ಪತ್ನಿ- ಪುತ್ರ ನಾಪತ್ತೆ

25-09-26 04:53 pm       HK News Staffer   ಕ್ರೈಂ

ಶಾರ್ಜಾದಲ್ಲಿ ಕಳೆದ ಜುಲೈನಲ್ಲಿ ಹತ್ಯೆಯಾದ ಕುಂದಾಪುರದ ಪುರಸಭೆ ವ್ಯಾಪ್ತಿಯ ಹೊನ್ನನಕೇರಿ ನಿವಾಸಿ ಅಲ್ವಿನ್ ಪ್ರಕಾಶ್ ಕುಂದರ್ (50) ಅವರ ಪಾರ್ಥಿವ ಶರೀರ ಶಾರ್ಜಾದಿಂದ ಸೆ.25 ರಂದು ವಿಮಾನದ ಮೂಲಕ ಹುಟ್ಟೂರಿಗೆ ತಲುಪಿದ್ದು ಶುಕ್ರವಾರ ಬೆಳಗ್ಗೆ ಮನೆಗೆ ಕೊಂಡೊಯ್ದು ಅಂತಿಮ ವಿಧಿಗಳನ್ನು ನೆರವೇರಿಸಲಾಯಿತು. ಬೆಳಗ್ಗೆ 10.30 ರ ಸುಮಾರಿಗೆ ಶಾಸ್ತ್ರೀ ವೃತ್ತದ ಬಳಿಯ ಸಿ.ಎಸ್.ಐ ಕೃಪಾ ದೇವಾಲಯ, ಸಮಾಧಿ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಯಿತು. ಆಲ್ವಿನ್ ಅವರ ಅಪ್ಪ-ಅಮ್ಮನ ಸಮಾಧಿ ಪಕ್ಕದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಕುಂದಾಪುರ, ಸೆ.25: ಶಾರ್ಜಾದಲ್ಲಿ ಕಳೆದ ಜುಲೈನಲ್ಲಿ ಹತ್ಯೆಯಾದ ಕುಂದಾಪುರದ ಪುರಸಭೆ ವ್ಯಾಪ್ತಿಯ ಹೊನ್ನನಕೇರಿ ನಿವಾಸಿ ಅಲ್ವಿನ್ ಪ್ರಕಾಶ್ ಕುಂದರ್ (50) ಅವರ ಪಾರ್ಥಿವ ಶರೀರ ಶಾರ್ಜಾದಿಂದ ಸೆ.25 ರಂದು ವಿಮಾನದ ಮೂಲಕ ಹುಟ್ಟೂರಿಗೆ ತಲುಪಿದ್ದು ಶುಕ್ರವಾರ ಬೆಳಗ್ಗೆ ಮನೆಗೆ ಕೊಂಡೊಯ್ದು ಅಂತಿಮ ವಿಧಿಗಳನ್ನು ನೆರವೇರಿಸಲಾಯಿತು. ಬೆಳಗ್ಗೆ 10.30 ರ ಸುಮಾರಿಗೆ ಶಾಸ್ತ್ರೀ ವೃತ್ತದ ಬಳಿಯ ಸಿ.ಎಸ್.ಐ ಕೃಪಾ ದೇವಾಲಯ, ಸಮಾಧಿ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಯಿತು. ಆಲ್ವಿನ್ ಅವರ ಅಪ್ಪ-ಅಮ್ಮನ ಸಮಾಧಿ ಪಕ್ಕದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಸಿ.ಎಸ್.ಐ ಕೃಪಾ ಚರ್ಚ್ ಧರ್ಮಗುರು ರೆ. ಫಾ. ಇಮಾನ್ಯುವಲ್ ಜಯಕರ್ ನೇತೃತ್ವದಲ್ಲಿ ಏರಿಯಾ ಅಧ್ಯಕ್ಷರಾದ ರೆ. ಕಿಶೋರ್ ಕುಮಾರ್, ರೆ. ಎಡ್ವಿನ್ ಜೋಸೆಫ್, ಸಿಎಎಸ್ಐ ಡಯಾಸಿಸ್ ಕೋಶಾಧಿಕಾರಿ ಐವಾನ್ ಸೋನ್ಸ್, ರೆ. ಪ್ರವೀಣ್ ಮಾಬೆನ್, ಬಸ್ರೂರು ಎಲಿಜಬೆತ್ ಚರ್ಚ್‌ನ ರೆ. ಫಾ. ರವಿ ಶಶಿಕಲಾ, ರೆ. ಸ್ಟೀವನ್ ಸರ್ವೋತ್ತಮ್ ಇವರು ವಿಧಿಗಳನ್ನು ನೆರವೇರಿಸಿದರು.

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಪುರಸಭೆ ಮಾಜಿ ಸದಸ್ಯರಾದ ಪ್ರಭಾಕರ್, ರಾಜೇಶ ಕಾವೇರಿ, ರತ್ನಾಕರ, ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ವಿಕಾಸ ಹೆಗ್ಡೆ, ವಿಜಯ್ ಎಸ್‌ ಪೂಜಾರಿ, ವಿ. ನರಸಿಂಹ ಮೊದಲಾದವರು ಭೇಟಿ ನೀಡಿದ್ದರು. 

ಪತ್ನಿ ಟೀನಾ ಮತ್ತು ಎಸ್ಸೆಸ್ಸೆಲ್ಸಿ ಓದುತ್ತಿದ್ದ ಪುತ್ರ ದೆಹಲಿಗೆ ಬಂದಿದ್ದಾರೆಂದು ಹೇಳಲಾಗಿದ್ದು ಅವರು ಎಲ್ಲಿದ್ದಾರೆಂದು ಯಾರಿಗೂ ಗೊತ್ತಿಲ್ಲ. ಈ ನಡುವೆ, ಅವರ ಪತ್ತೆಯಾಗಬೇಕೆಂದು ಆಗ್ರಹ ಕೇಳಿಬಂದಿದೆ. ನೂರಾರು ಸಾರ್ವಜನಿಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಕುಟುಂಬದ ದುಃಖಕ್ಕೆ ಕಣ್ಣೀರಾದರು.

The mortal remains of Alvin Prakash Kunder, 50, a resident of Honnanakere within Kundapura municipality limits who was killed in Sharjah in July, were brought to his hometown by air on September 25. His final rites were performed on Friday morning.