ಬ್ರೇಕಿಂಗ್ ನ್ಯೂಸ್
29-09-26 03:48 pm HK News Staffer ಕ್ರೈಂ
ಮಂಗಳೂರು, ಸೆ.29: ತಿಂಗಳಿಗೆ 3 ಪರ್ಸೆಂಟ್ ಬಡ್ಡಿ ಕೊಡಿಸುತ್ತೇನೆಂದು ಹೇಳಿ ಸಾವಿರಾರು ಮಂದಿಯಿಂದ ಹಣ ಕಟ್ಟಿಸಿಕೊಂಡು ವಂಚನೆ ಎಸಗಿ ಜೈಲು ಪಾಲಾಗಿರುವ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾಲಕ ಶಿವಾನಂದ ನೀಲಣ್ಣವರ್ ಇನ್ನೂ ಮಂಗಳೂರಿನ ಜೈಲಿನಲ್ಲೇ ಇದ್ದಾನೆ. ಆದರೆ, ಆತನ 40ಕ್ಕೂ ಹೆಚ್ಚು ಸಹಚರರು ಸೇರಿಕೊಂಡು ಯಾರು ದೂರು ಕೊಟ್ಟಿದ್ದಾರೋ ಅವರನ್ನೇ ಖರೀದಿಸಿ ಎಫ್ಐಆರ್ ಹಿಂತೆಗೆಸುವ ಕೆಲಸ ಮಾಡುತ್ತಿದ್ದಾರೆಂಬ ಮಾಹಿತಿ ಲಭಿಸಿದೆ.
ಈಗಾಗಲೇ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, 500 ಕೋಟಿಗೂ ಹೆಚ್ಚು ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. ಆದರೆ ಇದರ ನಡುವೆಯೇ ವಂಚನೆ ಬಗ್ಗೆ ದೂರು ಕೊಟ್ಟಿದ್ದ ವಕೀಲನೊಬ್ಬ ತನ್ನ ದೂರನ್ನೇ ಹಿಂಪಡೆದು ಪೊಲೀಸರನ್ನೇ ಯಾಮಾರಿಸುವ ಕೆಲಸ ಮಾಡಿದ್ದಾನೆ. ಮೊದಲಿಗೆ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆನಂತರ, ತಹಸೀಲ್ದಾರ್ ನೇತೃತ್ವದಲ್ಲಿ ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ದಾಳಿ ನಡೆದಿತ್ತು. ಪೊಲೀಸರ ಎಂಟ್ರಿ ಬಳಿಕ ಶಿವಾನಂದ ನೀಲಣ್ಣವರ್ ನಡೆಸುತ್ತಿದ್ದ ಕರಾಳ ಬಡ್ಡಿ ದಂಧೆ ಬೆಳಕಿಗೆ ಬಂದಿತ್ತು.
ಪೊಲೀಸರು ಇಡೀ ಪ್ರಕರಣದಲ್ಲಿ ಈವರೆಗೆ ಒಬ್ಬನನ್ನು ಮಾತ್ರ ಅರೆಸ್ಟ್ ಮಾಡಿದ್ದು, ಆತನೊಂದಿಗೆ ದಂಧೆ ನಡೆಸುತ್ತಿದ್ದ ಇತರ ಖದೀಮರು ಬೇರೆ ಬೇರೆ ಕಡೆ ತಲೆಮರೆಸಿಕೊಂಡು ಸಂತ್ರಸ್ತರನ್ನು ಹಣ ಕೊಡಿಸುತ್ತೇವೆಂದು ಹೇಳಿ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಶಿವಾನಂದ್ ಎರಡು ಸಾವಿರ ಕೋಟಿಗೂ ಹೆಚ್ಚು ವಂಚನೆ ಎಸಗಿದ್ದಾನೆಂದು ಇಡಿ ಅಧಿಕಾರಿಗಳು ಪತ್ತೆಹಚ್ಚಿದ್ದರೂ, ಇಬ್ಬರು ಮಾತ್ರ ಎಫ್ಐಆರ್ ದಾಖಲಿಸಿದ್ದಾರೆ. ಇದೀಗ ಅದರಲ್ಲಿ ಒಬ್ಬಾತನಿಗೆ ಆಮಿಷ ಒಡ್ಡಿ ದೂರು ಹಿಂಪಡೆಯುವಂತೆ ಮಾಡಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಗೋವಾ, ಛತ್ತೀಸ್ಗಢದಲ್ಲಿ ಈತನ ವಂಚನಾ ಜಾಲ ಹರಡಿದ್ದು, ಅಂದಾಜು 40 ಸಾವಿರಕ್ಕೂ ಹೆಚ್ಚು ಜನರು ದುಬಾರಿ ಬಡ್ಡಿಯ ಆಮಿಷಕ್ಕೆ ಬಿದ್ದು ಹಣ ಹೂಡಿದ್ದಾರೆ. ತಿಂಗಳಿಗೆ 3 ಪರ್ಸೆಂಟ್ ಅಂದರೆ, ವರ್ಷಕ್ಕೆ 36 ಪರ್ಸೆಂಟ್ ಬಡ್ಡಿ ಸಿಗುತ್ತದೆ ಎಂದುಕೊಂಡು ನಿವೃತ್ತಿಯೊಂದಿಗೆ ಗಂಟು ಪಡೆದ ಸರ್ಕಾರಿ ನೌಕರರು, ನಿವೃತ್ತಿಯಿಂದ ದೊಡ್ಡ ಮೊತ್ತದ ಹಣ ಪಡೆದಿರುವ ಸೈನಿಕರು ಹೆಚ್ಚಾಗಿ ಹಣ ತೊಡಗಿಸಿದ್ದಾರಂತೆ. ಈಗ, ಶಿವಾನಂದ ನೀಲಣ್ಣವರ್ ಅರೆಸ್ಟ್ ಆಗಿದ್ದು, ವಂಚನಾ ಜಾಲ ಹೊರಬಂದರೂ ತಾವು ಹಣ ಕಳಕೊಂಡ ಬಗ್ಗೆ ಯಾರೂ ಮುಂದೆ ಬರುತ್ತಿಲ್ಲ ಎನ್ನುವುದು ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೂ ತಲೆನೋವು ಸೃಷ್ಟಿಸಿದೆ.
500 ಕೋಟಿಯಷ್ಟು ಆಸ್ತಿ ಜಪ್ತಿ ಮಾಡಿದ್ದರೂ, ದೂರು ಹೇಳಿಕೊಂಡು ಬಂದಿದ್ದರಷ್ಟೇ ಅವರಿಗೆ ಬಟವಾಡೆ ಮಾಡಲು ಅವಕಾಶ ಇರುತ್ತದೆ. ಇಲ್ಲದೇ ಇದ್ದರೆ ಯಾರೂ ದೂರುದಾರರು ಇಲ್ಲವೆಂದು ಕೋರ್ಟಿನಲ್ಲಿ ಇಡೀ ಪ್ರಕರಣ ಬಿದ್ದು ಹೋಗುವ ಸಾಧ್ಯತೆಯೂ ಇರುತ್ತದೆ. ಹಣಕಾಸು ವಂಚನೆ ಪ್ರಕರಣದಲ್ಲಿ ಆರೋಪಿ ವಿರುದ್ಧ ಶಿಕ್ಷೆಯಾಗುವಲ್ಲಿ ದೂರುದಾರರ ಪಾತ್ರವೇ ಪ್ರಮುಖವಾಗಿರುತ್ತದೆ.
ಹೆಚ್ಚಿನ ಬಡ್ಡಿಯಾಸೆಗೆ ಹಣ ತೊಡಗಿಸಿದವರಲ್ಲಿ ಬೆಳಗಾವಿಯವರು ಮತ್ತು ಮಹಾರಾಷ್ಟ್ರದವರೇ ಹೆಚ್ಚಿದ್ದಾರೆ. ನಿವೃತ್ತ ನೌಕರರನ್ನೇ ಗುರಿಯಾಗಿಸಿ ಹಣ ಪಡೆದಿರುವುದರಿಂದ ಈಗ ಅವರನ್ನು ನಾವು ನಿಮ್ಮ ಹಣ ಹಿಂತಿರುಗಿಸುತ್ತೇವೆ, ದೂರು ಕೊಡಲು ಹೋದರೆ ಅದೂ ಸಿಗಲ್ಲ ಎಂದು ಶಿವಾನಂದ ಸಹಚರರು ಬೆದರಿಸುತ್ತಿದ್ದಾರೆಂಬ ಮಾಹಿತಿಗಳಿವೆ. ಕೋಟ್ಯಂತರ ರೂಪಾಯಿ ಕಳಕೊಂಡು ವಂಚನೆಗೆ ಒಳಗಾದವರು ಸಾವಿರಾರು ಮಂದಿ ಇದ್ದರೂ, ದೂರು ಕೊಡಲು ಮುಂದೆ ಬಾರದಿರುವುದು ತನಿಖೆಗೂ ತೊಂದರೆಯಾಗಲಿದೆ. ಹಣಕಾಸು ವಂಚನೆಯ ಬಗ್ಗೆ ಸಾಕ್ಷ್ಯ ಸಂಗ್ರಹವೂ ಅಗತ್ಯವಾದ್ದರಿಂದ ಮೋಸ ಹೋದವರೇ ಹಣ ಕಟ್ಟಿದ ಬಗ್ಗೆ ಸಾಕ್ಷ್ಯ ನೀಡಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
Shivam Associates owner Shivanand Neelannavar of Belagavi, who was arrested for allegedly collecting money from thousands of people by promising monthly returns of 3%, remains lodged in Mangaluru jail. Meanwhile, more than 40 of his alleged associates are reportedly attempting to persuade complainants to withdraw their police complaints.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
29-09-26 01:25 pm
HK News Staffer
ಬಿ.ಸಿ.ರೋಡ್ ಸಭೆಯಲ್ಲಿ ಕರಾವಳಿ ಶಾಸಕರು, ಸಂಸದರ ಬಗ್ಗ...
29-09-26 11:41 am
ಕಂಬಳ ಲೋಕದ ದಿಗ್ಗಜ ‘ನಂದಳಿಕೆ ಪಾಂಡು’ ಇನ್ನಿಲ್ಲ: 20...
29-09-26 10:45 am
ದೇಶದಲ್ಲಿ 13 ಕೋಟಿ ಮತ ಡಿಲೀಟ್ ಆಗಿದ್ದು ಹೇಗೆ ? ಆಳು...
28-09-26 11:08 pm
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಕರಾವಳಿಗೇನು ಕೊಟ್ಟಿ...
28-09-26 09:33 pm
29-09-26 03:48 pm
HK News Staffer
ಕರಂಗಲ್ಪಾಡಿಯಲ್ಲಿ ಅಪಘಾತ ; ನ್ಯಾಯಾಧೀಶರಿದ್ದ ಕಾರಿಗೆ...
29-09-26 01:22 pm
ಪತಿಯನ್ನು ಬಿಟ್ಟು ಪ್ರತ್ಯೇಕ ವಾಸ ; ಮಾಂಸದಂಗಡಿ ಮಾಲೀ...
29-09-26 09:20 am
ಮಾಡೂರು ಇಸುಬು ಹತ್ಯೆ ಪ್ರಕರಣ ; ನಾಲ್ವರು ಆರೋಪಿಗಳು...
28-09-26 11:03 pm
ಮಂಗಳೂರಲ್ಲಿ ಡ್ರಗ್ಸ್ ಜಾಲಕ್ಕೆ ಸಿಸಿಬಿ ಶಾಕ್ : ₹ 24...
28-09-26 03:08 pm