ಬ್ರೇಕಿಂಗ್ ನ್ಯೂಸ್
30-09-26 08:59 pm HK News Staffer ಕ್ರೈಂ
ಮಂಗಳೂರು, ಸೆ.30: ಎಂಆರ್ ಪಿಎಲ್ ತೈಲ ಸ್ಥಾವರ ಘಟಕದಲ್ಲಿ ನಡೆದ ದುರಂತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆಯಲ್ಲಿ ಒಟ್ಟು 13 ಮಂದಿ ಗಾಯಗೊಂಡಿದ್ದು, ಈ ಪೈಕಿ ಮುಲ್ಕಿ ಹಳೆಯಂಗಡಿ ನಿವಾಸಿ ಮನೀಶ್ ಕರ್ಕಡ(23) ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ.
ಕಾರ್ಕಳ ಹಿರ್ಗಾನ ನಿವಾಸಿ ರವಿ ಪೂಜಾರಿ ಎಂಬವರು ಎಂಆರ್ ಪಿಎಲ್ 3ನೇ ಫೇಸ್ ನಲ್ಲಿರುವ ಘಟಕದ ನೌಕರರಿಗೆ ಊಟ, ಉಪಹಾರ ಪೂರೈಸುವ ಕೆ-ಸ್ಟಾರ್ ಫುಡ್ ಅಂಡ್ ಹಾಸ್ಪಿಟಾಲಿಟಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಮಧ್ಯಾಹ್ನ 12.15ರ ವೇಳೆಗೆ ಊಟ ವಿತರಣೆಗೆ ಬಂದಿದ್ದಾಗ ಕೋಕರ್ ಹೈಡ್ರೋ ಟ್ರೀಯರ್ ಯೂನಿಟ್ ನಲ್ಲಿ ಒಮ್ಮಿಂದೊಮ್ಮೆಲೇ ಸ್ಫೋಟ ಸಂಭವಿಸಿದೆ. ಇದರಿಂದಾಗಿ ರವಿ ಪೂಜಾರಿ ಸೇರಿದಂತೆ ಸ್ಥಳದಲ್ಲಿದ್ದ ಘಟಕದ ನೌಕರರಾದ ರಾಜೇಶ್ ಪ್ರಸಾದ್, ಇಂದ್ರಜಿತ್, ರಮಣ್ ಕುಮಾರ್, ಲೋಕೇಶ್ ಕುಳಾಯಿ, ಜಯರಾಮ್, ಜೆರೋಮ್, ಅವಿನಾಶ್, ಅಕ್ಷಯ್, ಜಗಜೀವನ್ ಸಿಂಗ್, ಶರತ್ ಶೆಟ್ಟಿ ಗಾಯಗೊಂಡಿದ್ದಾರೆ. ರಾಜೇಶ್ ಪೂಜಾರಿ ಮತ್ತು ಮನೀಶ್ ಕರ್ಕಡ ಎಂಬವರಿಗೆ ಗಂಭೀರ ಗಾಯವಾಗಿದ್ದು, ಮನೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಎಂಆರ್ ಪಿಎಲ್ ಫೇಸ್ 3ರಲ್ಲಿ ಕೋಕರ್ ಹೈಡ್ರೋ ಟ್ರೀಯರ್ ಯೂನಿಟ್ ನಲ್ಲಿ ಯಂತ್ರೋಪಕರಣಗಳನ್ನು ಯುನಿಟ್ ಮುಖ್ಯಸ್ಥರು ಮತ್ತು ಎಂಆರ್ ಪಿಎಲ್ ಸಂಸ್ಥೆಯವರು ಸರಿಯಾಗಿ ನೋಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದ ಘಟನೆ ನಡೆದಿದೆ ಎಂದು ರವಿ ಪೂಜಾರಿಯವರ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ಬಿಎನ್ಎಸ್ 287, 125 ಬಿ, 106 ಅಡಿ ಪ್ರಕರಣ ದಾಖಲಾಗಿದೆ.




ಹಳೆಯಂಗಡಿ ಸಿಎಸ್ಐ ಚರ್ಚ್ ಸದಸ್ಯ
ಘಟನೆಯಲ್ಲಿ ಮೃತಪಟ್ಟ ಮನೀಶ್ ಕರ್ಕಡ (23) ಮುಲ್ಕಿ ಹಳೆಯಂಗಡಿ ನಿವಾಸಿಯಾಗಿದ್ದು, ಒಂದೂವರೆ ವರ್ಷದ ಹಿಂದಷ್ಟೇ ಮನೀಶ್ ಗುತ್ತಿಗೆ ನೌಕರನಾಗಿ ಎಂಆರ್ ಪಿಎಲ್ ಸೇರಿದ್ದರು. ಈತನ ಅಕಾಲಿಕ ಸಾವಿಗೆ ಸ್ಥಳೀಯರು ಮಮ್ಮಲ ಮರುಗಿದ್ದಾರೆ. ಹಳೆಯಂಗಡಿಯ ಆಲ್ಬರ್ಟ್ ಕರ್ಕಡ ಮತ್ತು ಸುನಿತಾ ಕರ್ಕಡ ದಂಪತಿಯ (ಮನೀಶ್- ಅನೀಶ್) ಇಬ್ಬರು ಅವಳಿ ಮಕ್ಕಳಲ್ಲಿ ಕಿರಿಯವನಾಗಿದ್ದು, ಉತ್ತಮ ಕಬಡ್ಡಿ ಆಟಗಾರನೂ ಆಗಿದ್ದ. ಇದಲ್ಲದೆ, ಹಳೆಯಂಗಡಿ ಸಿಎಸ್ಐ ಅಮ್ಮಾನ್ ಮೆಮೋರಿಯಲ್ ಚರ್ಚ್ ಸದಸ್ಯರಾಗಿದ್ದು, ದುರಂತ ಸಾವಿಗೀಡಾದ ಹಿನ್ನೆಲೆಯಲ್ಲಿ ಸ್ನೇಹಿತರು ಮತ್ತು ಚರ್ಚ್ ಸಮುದಾಯ ತೀವ್ರ ಕಂಬನಿ ಮಿಡಿದಿದೆ.
ವೆನ್ಲಾಕ್ ಬಳಿ ಕುಟುಂಬಸ್ಥರ ಆಕ್ರೋಶ
ಮನೀಶ್ ಶವವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ತರಲಾಗಿದ್ದು, ಶವಾಗಾರದ ಬಳಿ ಬಹಳಷ್ಟು ಗೆಳೆಯರು, ಕುಟುಂಬಸ್ಥರು ಸೇರಿದ್ದು ಎಂಆರ್ ಪಿಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಸಂಸದ ಬ್ರಿಜೇಶ್ ಚೌಟ ಬರಬೇಕೆಂದು ಆಗ್ರಹಿಸಿದ ಬಳಿಕ ಸಂಸದರು ಸ್ಥಳಕ್ಕಾಗಮಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಪ್ರತ್ಯೇಕ ಎಫ್ಐಆರ್ ಮಾಡಬೇಕೆಂದು ಆಗ್ರಹಿಸಿದರು. ಒಂದು ಎಫ್ಐಆರ್ ಈಗಾಗಲೇ ಆಗಿದ್ದು, ಇನ್ನೊಂದು ಎಫ್ಐಆರ್ ಮಾಡಲು ಪೊಲೀಸರ ಜೊತೆಗೆ ಮಾತನಾಡೋಣ. ಪರಿಹಾರದ ಬಗ್ಗೆ ಕಂಪನಿ ಜೊತೆಗೆ ಮಾತುಕತೆ ನಡೆಸಿ ವ್ಯವಸ್ಥೆ ಮಾಡಿಸುತ್ತೇನೆ ಎಂದು ಸಂಸದರು ಭರವಸೆ ನೀಡಿದರು.
An FIR has been registered at Surathkal Police Station following the fatal blast at the Mangalore Refinery and Petrochemicals Limited (MRPL) facility, with the complaint alleging negligence in the maintenance and operation of equipment at the plant.
23-10-26 08:34 pm
HK News Staffer
ಮಾಧ್ಯಮದ ಮುಖ್ಯಸ್ಥನ ಜೊತೆಗಿದ್ದ ವಿಕ್ಕಿ ಎಂಬ ವ್ಯಕ್ತ...
23-10-26 05:47 pm
ಬ್ಲ್ಯಾಕ್ಮೇಲ್ ಉದ್ದೇಶದಿಂದ ಸ್ಟಿಂಗ್ ಮಾಡಿದ್ದಾರೆ...
23-10-26 03:56 pm
ಬಿಲ್ ಬಾಕಿಯಿದ್ದರೂ ಮೃತದೇಹ ತಡೆಹಿಡಿಯುವಂತಿಲ್ಲ: ಖಾಸ...
23-10-26 02:53 pm
ಶಿವಮೊಗ್ಗ ದಸರಾದಲ್ಲಿ ದಿಕ್ಕಾಪಾಲು ಓಡಿದ ಅಂಬಾರಿ ಹೊತ...
21-10-26 10:31 pm
21-10-26 04:21 pm
HK News Desk
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
23-10-26 05:48 pm
HK News Desk
19 ಗಂಟೆ 29 ನಿಮಿಷಗಳ ಸಾಧನೆ: 2,000 ಮೆಹಂದಿ ಕೋನ್ ತ...
23-10-26 02:56 pm
Builder Donald Pinto Fraud: ಮಾರ್ನಮಿಕಟ್ಟೆ ಸರ್ಕ...
22-10-26 09:37 pm
ರೆಸ್ಲರ್ ‘ಗ್ರೇಟ್ ಖಲಿ’ ನೋಡಲು ಹುಚ್ಚೆದ್ದು ಸೇರಿದ ಅ...
21-10-26 09:20 pm
ಕದ್ರಿ ರಾಜಾಂಗಣದಲ್ಲಿ ‘ಅಷ್ಟಭುಜೆ’ಯಾಗಿ ಅವತರಿಸಿದ ಆರ...
21-10-26 07:52 pm
23-10-26 05:48 pm
HK News Staffer
B Care Company, Madhumita Kaur: ಇನ್ಶೂರೆನ್ಸ್ ಪ...
22-10-26 03:21 pm
ಮೂಡುಬಿದಿರೆಯಲ್ಲಿ ಕರುಣಾಜನಕ ದುರಂತ ; ಮಗನನ್ನು ರಕ್ಷ...
22-10-26 01:03 pm
ನೆಲ್ಯಾಡಿ ಬಳಿ ಭೀಕರ ಅಪಘಾತ ; ನಿಂತಿದ್ದ ಗ್ಯಾಸ್ ಟ್...
22-10-26 01:01 pm
Boliyaru Murder Case, Dakshina Kannada Crime...
22-10-26 10:32 am