ಬ್ರೇಕಿಂಗ್ ನ್ಯೂಸ್
15-10-26 05:06 pm HK News Staffer ಕ್ರೈಂ
ಪುತ್ತೂರು, ಅ.15: ಪುತ್ತೂರು ಕಸಬಾ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಮತ್ತು ಪಾನ್ ಸ್ಟಾಲ್ ಅಂಗಡಿಯಲ್ಲಿ ಅಕ್ರಮವಾಗಿ ನಿಷೇಧಿತ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪೊಲೀಸರು ದಾಳಿ ನಡೆಸಿ ಸದ್ರಿ ಲಾಟರಿ ಮಾರುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ಕೇಸು ದಾಖಲಿಸಿದ್ದಾರೆ.
ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಅಂಗಡಿ ಮಾಲೀಕರಾದ ಪುತ್ತೂರು ಕಸಬಾ ನಿವಾಸಿ ಶ್ರೀನಿವಾಸ ಪೈ (33) ಎಂಬವರು ಕೇರಳ ರಾಜ್ಯದ ಲಾಟರಿಯನ್ನು ತಂದು ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದು, ಮಾರಾಟಕ್ಕಾಗಿ ತಂದಿದ್ದ ಲಾಟರಿ ಟಿಕೇಟ್ ಗಳನ್ನು ತೆಗೆದು ಹಾಜರುಪಡಿಸಿರುತ್ತಾರೆ. ಅವುಗಳನ್ನು ಸ್ವಾಧೀನಪಡಿಸಿ ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 124/2026, ಕಲಂ:7(iii) ಲಾಟರಿ ನಿಷೇಧ ಕಾಯ್ದೆ 1998 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಇನ್ನೊಂದು ಪ್ರಕರಣದಲ್ಲಿ ಪುತ್ತೂರು ಕಸಬಾ ಗ್ರಾಮದ ಲಿನೆಟ್ ಜಂಕ್ಷನ್ ಬಳಿ ಪಾನ್ ಸ್ಟಾಲ್ ಅಂಗಡಿಯಲ್ಲಿ ಅಕ್ರಮವಾಗಿ ನಿಷೇಧಿತ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ನಗರ ಠಾಣೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಅಂಗಡಿಯ ಮಾಲಿಕರಾದ ಪುತ್ತೂರು ಪಡ್ನೂರು ಗ್ರಾಮ ನಿವಾಸಿ ಲಕ್ಷ್ಮಣ (42) ಎಂಬವರನ್ನು ವಿಚಾರಿಸಿದ್ದು ಕೇರಳದಿಂದ ಲಾಟರಿ ಟಿಕೆಟ್ ತಂದು ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಾರಾಟಕ್ಕಾಗಿ ತಂದಿದ್ದ ಲಾಟರಿ ಟಿಕೇಟ್ ಗಳನ್ನು ಸ್ವಾಧೀನಪಡಿಸಿ ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 125 /2026, ಕಲಂ: 7(iii) ಲಾಟರಿ ನಿಷೇಧ ಕಾಯ್ದೆ 1998ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಅ.14ರ ಸಂಜೆ ಎರಡೂ ಕಡೆಗಳಿಗೆ ದಾಳಿಯಾಗಿದೆ.
20-11-26 05:15 pm
HK News Staffer
2028ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ; ಮಾಜಿ ಸಿಎಂ...
20-11-26 12:04 pm
ಹಿರಿಯೂರು ಅಭ್ಯರ್ಥಿ ; ನಾವು ಕುಮಾರಸ್ವಾಮಿ ಜೊತೆ ಮಾತ...
19-11-26 12:32 pm
ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ ; ಕಾರು - ಬೊಲೆರೋ...
18-11-26 11:03 pm
ರಾಜ್ಯದಲ್ಲಿ 30ಕ್ಕೂ ಹೆಚ್ಚು ಐಪಿಎಸ್ ವರ್ಗಾವಣೆ ; ಬೆ...
18-11-26 07:26 pm
21-11-26 11:44 am
HK News Staffer
ಜಾಗತಿಕ ಜನಸಂಖ್ಯೆಯಲ್ಲಿ ಇಸ್ಲಾಂ ಪಾರಮ್ಯ ; 2035ಕ್ಕೆ...
20-11-26 12:58 pm
ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ; ಮಾಜಿ ಮುಖ್ಯಸ್...
19-11-26 07:30 pm
"ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದಲ್...
19-11-26 01:19 pm
ಸೌದಿಗೆ ನವೆಂಬರ್ 30ರ ವರೆಗೆ ವಿಮಾನ ಸೇವೆ ರದ್ದು ; ಇ...
18-11-26 11:28 pm
22-11-26 04:17 pm
HK News Staffer
ಮಂಗಳೂರು ಏರ್ಪೋರ್ಟ್ ನಲ್ಲಿ ಪಾರ್ಕಿಂಗ್ ಶುಲ್ಕ ದುಬಾರ...
21-11-26 10:59 pm
‘ಮಹಾತ್ಮೆ ಕುದ್ಮುಲ್’ ; ಸೂರಿಲ್ಲದ, ತುಂಡು ಭೂಮಿ ಇಲ್...
21-11-26 10:29 pm
ಅಪಹರಣ ಆಗಿಲ್ಲ, ವಿದ್ಯಾರ್ಥಿನಿ ತಪ್ಪುದಾರಿ ತುಳಿದಿದ್...
20-11-26 09:53 pm
ಮುಸ್ಲಿಂ ಯುವತಿ ಅಪಹರಣ ; ಕೇರಳದಲ್ಲಿ ಸಂಬಂಧಿಕರ ಮನೆಯ...
20-11-26 09:51 pm
21-11-26 04:41 pm
HK News Staffer
ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕ...
21-11-26 12:41 pm
'ಬಸವ ಮಂಟಪ' ಕೃತಿ ವಿವಾದ ಹಿನ್ನೆಲೆ ; ಲೇಖಕ ರವಿ ಹಂಜ...
21-11-26 12:33 pm
ಬಂಟ್ವಾಳ ; ಶಾಲೆಯಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ...
19-11-26 09:20 pm
Baglur Manchapanahalli Murder: ಗುಜರಿ ವ್ಯಾಪಾರದ...
19-11-26 03:20 pm