Fr. Cyprian Pinto Posco Case, Mangalore: ಅಪ್ರಾಪ್ತ ಬಾಲಕರಿಗೆ ಲೈಂಗಿಕ ದೌರ್ಜನ್ಯ ; ವೆಲೆನ್ಸಿಯಾ ಚರ್ಚ್ ಪಾದ್ರಿ ಸಿಪ್ರಿಯನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್ಐಆರ್, ಶೀಘ್ರದಲ್ಲೇ ಬಂಧನ ಸಾಧ್ಯತೆ

16-10-26 10:03 am       HK News Staffer   ಕ್ರೈಂ

ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಸೈಂಟ್ ವಿನ್ಸೆಂಟ್ ಫೆರಾರ್ ಚರ್ಚ್ ಪಾದ್ರಿ ಸಿಪ್ರಿಯನ್ ಪಿಂಟೋ ವಿರುದ್ಧ ನಗರದ ಪಾಂಡೇಶ್ವರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮಂಗಳೂರು, ಅ.16: ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಸೈಂಟ್ ವಿನ್ಸೆಂಟ್ ಫೆರಾರ್ ಚರ್ಚ್ ಪಾದ್ರಿ ಸಿಪ್ರಿಯನ್ ಪಿಂಟೋ ವಿರುದ್ಧ ನಗರದ ಪಾಂಡೇಶ್ವರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಘಟನೆ ಸಂಬಂಧಿಸಿ ಮೈಸೂರಿನ ಒಡನಾಡಿ ಸಂಸ್ಥೆಯವರು ಪೊಲೀಸ್ ಕಮಿಷನರಿಗೆ ದೂರಿತ್ತ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಸಂತ್ರಸ್ತರನ್ನು ಭೇಟಿಯಾಗಿ ಪೊಲೀಸ್ ದೂರು ನೀಡುವಂತೆ ಮಾಡಿದ್ದಾರೆ. ಇದರಂತೆ, ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಪ್ರಿಯನ್ ಪಿಂಟೋ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಚರ್ಚಿಗೆ ಸಂಜೆ ವೇಳೆ ಬರುತ್ತಿದ್ದ ಬಾಲಕನಿಗೆ ಚಾಕಲೇಟ್ ಕೊಟ್ಟು ನೀನು ಬಾರಿ ಚಂದ ಇದ್ದೀಯಾ, ಸ್ವೀಟ್ ಬಾಯ್.. ಐ ಲವ್ ಯೂ ಎಂದು ಹೇಳಿ ತಬ್ಬಿಕೊಂಡು ಪುಸಲಾಯಿಸಿ ಚರ್ಚ್ ಕೊಠಡಿಯ ಒಳಗೆ ಕರೆದೊಯ್ದು ಲೈಂಗಿಕ ಉದ್ದೇಶದಿಂದ ಕಿರುಕುಳ ನೀಡಿದ್ದಾನೆ. ಮೊದಲಿಗೆ ಬಾಲಕನ ತಿಕವನ್ನು ಹಿಚುಕುವುದನ್ನು ಮಾಡುತ್ತಿದ್ದ. ನಂತರದ ದಿನಗಳಲ್ಲಿಯೂ ಪ್ರಾರ್ಥನೆಗೆ ಬರುತ್ತಿದ್ದ ಬಾಲಕನನ್ನು ತನ್ನ ಕೊಠಡಿಗೆ ಕರೆದೊಯ್ದು ಆತನ ಪ್ಯಾಂಟಿಗೆ ಕೈಹಾಕಿ ಗುಪ್ತಾಂಗವನ್ನು ಹಿಚುಕುವ ಕೃತ್ಯ ಮಾಡುತ್ತಿದ್ದ.

ಆಗಸ್ಟ್ 14ರಂದು ಸಂಜೆ 6.30ಕ್ಕೆ ಪ್ರಾರ್ಥನೆಗೆಂದು ಚರ್ಚಿಗೆ ಹೋದ ಸಂದರ್ಭದಲ್ಲಿ ಬಾಲಕನನ್ನು ಕೊಠಡಿಗೆ ಕರೆದೊಯ್ದು ಪ್ಯಾಂಟಿನ ಒಳಗೆ ಕೈಹಾಕಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಬಾಲಕನು ತನ್ನ ಸ್ನೇಹಿತ ಇತರ ಬಾಲಕರಲ್ಲಿ ವಿಷಯ ತಿಳಿಸಿದಾಗ, ತಮಗೂ ಅದೇ ರೀತಿ ಪಾದ್ರಿ ಮಾಡಿದ್ದಾಗಿ ತಿಳಿಸಿದ್ದಾರೆ. ಪಾದ್ರಿ ಸಿಪ್ರಿಯನ್ ಪಿಂಟೋ ಆನಂತರವೂ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದು ಈ ಬಗ್ಗೆ ಬಾಲಕ ತನ್ನ ಹೆತ್ತವರಿಗೆ ತಿಳಿಸಿದ್ದ. ಹೆತ್ತವರು ಮಂಗಳೂರು ಕ್ರಿಸ್ತಿಯನ್ ಧರ್ಮಪ್ರಾಂತ್ಯದ ಮುಖ್ಯಸ್ಥ ಬಿಷಪರಿಗೆ ತಿಳಿಸಿದ್ದು ಆನಂತರ ಈಗ ತಡವಾಗಿ ಪೊಲೀಸ್ ದೂರು ನೀಡುತ್ತಿರುವುದಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

An FIR has been registered under the Protection of Children from Sexual Offences (POCSO) Act against Father Cyprian Pinto of St. Vincent Ferrer Church in Valencia, Mangaluru, over allegations of sexually abusing minor boys.