ಉಪ್ಪಿನಂಗಡಿಯಲ್ಲಿ ತಲವಾರು ಝಳಪಿಸಿದ ಗ್ಯಾಂಗ್ ; ಕುಡಿದ ಮತ್ತಿನಲ್ಲಿ ಗಲಾಟೆ, ಇಬ್ಬರು ಪೊಲೀಸ್ ವಶಕ್ಕೆ 

19-10-26 04:20 pm       HK News Staffer   ಕ್ರೈಂ

ಉಪ್ಪಿನಂಗಡಿಯ ಕಾರ್ತಿಕ್ ಬಾರ್ ಎದುರು ತಲವಾರು ಮತ್ತು ಬಿಯರ್ ಬಾಟಲಿ ಹಿಡಿದು ಎರಡು ತಂಡಗಳು ಗಲಾಟೆ ನಡೆಸಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಗಲಾಟೆಯಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಪುತ್ತೂರು, ಅ.19: ಉಪ್ಪಿನಂಗಡಿಯ ಕಾರ್ತಿಕ್ ಬಾರ್ ಎದುರು ತಲವಾರು ಮತ್ತು ಬಿಯರ್ ಬಾಟಲಿ ಹಿಡಿದು ಎರಡು ತಂಡಗಳು ಗಲಾಟೆ ನಡೆಸಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಗಲಾಟೆಯಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಘಟನೆಗೆ ಸಂಬಂಧಿಸಿ ಇಳಂತಿಲದ ಮಂಜುನಾಥ ಮತ್ತು ಕರ್ವೇಲ್‌ನ ವಿಶ್ವನಾಥ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಕರ್ವೇಲ್‌ನ ಮುನ್ನ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ.

ಮದ್ಯ ಸೇವಿಸಿದ್ದರೆನ್ನಲಾದ ತಂಡದ ಸದಸ್ಯರು ಬಾರ್‌ನ ಹೊರಭಾಗದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಗಲಾಟೆ ನಡೆಸಿದ್ದಾರೆ. ಈ ವೇಳೆ ಮಂಜುನಾಥ ತಲವಾರು ಝಳಪಿಸುತ್ತಿದ್ದರೆ, ಮುನ್ನ ಕೈಯಲ್ಲಿ ಬಿಯರ್ ಬಾಟಲಿ ಹಿಡಿದಿದ್ದ ಎಂದು ತಿಳಿದುಬಂದಿದೆ. ವಾಗ್ವಾದ, ಗಲಾಟೆಯ ಮಾಹಿತಿ ಲಭಿಸಿದ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಮಂಜುನಾಥನನ್ನು ವಶಕ್ಕೆ ಪಡೆದು, ಆತನ ಕೈಯಲ್ಲಿದ್ದ ತಲವಾರನ್ನು ವಶಪಡಿಸಿದ್ದಾರೆ. ಪೊಲೀಸರನ್ನು ಕಂಡ ಮುನ್ನಾ ಸ್ಥಳದಿಂದ ಪರಾರಿಯಾಗಿದ್ದಾನೆ.