ಬ್ರೇಕಿಂಗ್ ನ್ಯೂಸ್
20-10-26 05:06 pm HK News Staffer ಕ್ರೈಂ
ಉಳ್ಳಾಲ, ಅ.20: ಬೋಳಿಯಾರಿನ ಪೆಟ್ರೋಲ್ ಬಂಕ್ ಬಳಿ ಪಿಕಪ್ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಸಾವನ್ನಪ್ಪಿದ ಘಟನೆ ಹಿಂದೆ ಕೊಲೆ ಕೃತ್ಯದ ಆರೋಪ ಕೇಳಿಬಂದಿದೆ. ಅಪಘಾತಕ್ಕೂ ಮುನ್ನ ಪಿಕಪ್ ಚಾಲಕ ಹಾಗೂ ಸ್ಕೂಟರ್ ಸವಾರರ ನಡುವೆ ಹೊಡೆದಾಟ ನಡೆದಿರುವ ವಿಚಾರ ಬೆಳಕಿಗೆ ಬಂದಿದ್ದು, ಪಿಕಪ್ ಚಾಲಕನೇ ಉದ್ದೇಶಪೂರ್ವಕ ಕೊಲೆ ನಡೆಸಿರುವುದಾಗಿ ಮೃತ ಯುವಕನ ತಂದೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನಿನ್ನೆ ಸಂಜೆ ಬೋಳಿಯಾರಿನಿಂದ ಮುಡಿಪು ಕಡೆಗೆ ಸಾಗುತ್ತಿದ್ದ ಸ್ಕೂಟರ್ ಒಂದಕ್ಕೆ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರರು ಕಿನ್ಯ ಗ್ರಾಮದ ಉಕ್ಕುಡ ನಿವಾಸಿಗಳಾದ ಮಹಮ್ಮದ್ ಅಫ್ರಾಝ್ ( 23) ಮತ್ತು ಮಹಮ್ಮದ್ ಝುನೈದ್(23) ದಾರುಣವಾಗಿ ಮೃತಪಟ್ಟಿದ್ದರು. ಆರಂಭದಲ್ಲಿ ಸ್ಥಳೀಯರು ಅಪಘಾತವೆಂದು ಭಾವಿಸಿ ಗಾಯಾಳು ಯುವಕರನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು.






ಆದರೆ ಅಪಘಾತಕ್ಕೂ ಮುನ್ನ ಪಿಕಪ್ ಚಾಲಕ ಹಾಗೂ ಸ್ಕೂಟರ್ ಸವಾರರ ಮಧ್ಯೆ ಗಲಾಟೆ ನಡೆದಿದ್ದು, ಸ್ಕೂಟರ್ ಸವಾರರನ್ನ ಹಿಂಬಾಲಿಸಿದ ಪಿಕಪ್ ಚಾಲಕ ಅಪಘಾತ ನಡೆಸಿ ಕೊಲೆ ಮಾಡಿರುವುದಾಗಿ ವ್ಯಕ್ತಿಯೋರ್ವರು ಹೇಳಿಕೊಂಡಿರುವ ಆಡಿಯೋ ತುಣುಕು ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಅಪಘಾತ ನಡೆಸಿದ ಪಿಕಪ್ ಚಾಲಕನೂ ಸ್ಥಳದಿಂದ ಪರಾರಿಯಾಗಿದ್ದ.
ನಿನ್ನೆ ಮಧ್ಯಾಹ್ನದ ವೇಳೆ ಝುನೈದ್ ನೆರೆಮನೆಯ ಅಫ್ರಾಝ್ ಜೊತೆಗೆ ಸ್ಕೂಟರಿನಲ್ಲಿ ಬೋಳಿಯಾರಿಗೆ ತೆರಳಿದ್ದ. ಸಂಜೆ 4 ಗಂಟೆ ವೇಳೆ ಬೋಳಿಯಾರಿನ ರಂತಡ್ಕ ಕ್ರಾಸ್ ಬಳಿ ಅಲ್ಲಿನ ಸ್ಥಳೀಯ ಪಿಕಪ್ ವಾಹನ ಚಾಲಕ ಹಫೀಝ್ ಯಾನೆ ಅಪ್ಪಿ ಎಂಬವನಲ್ಲಿ ಝುನೈದ್ ಹಾಗೂ ಅಫ್ರಾಝ್ ಅವರು ಯಾವುದೋ ವಿಚಾರಕ್ಕೆ ತಗಾದೆ ಎತ್ತಿದ್ದು, ಮೂವರ ಮಧ್ಯೆ ಹೊಡೆದಾಟ ನಡೆದಿತ್ತು. ಬಳಿಕ ಪಿಕಪ್ ಚಾಲಕ ಸ್ಕೂಟರ್ ಸವಾರರನ್ನ ಹಿಂಬಾಲಿಸಿ ಮುಡಿಪು ಕಡೆಗೆ ತೆರಳಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ಝುನೈದ್ ತಂದೆ ಇಸ್ಮಾಯಿಲ್ ಅವರಲ್ಲಿ ತಿಳಿಸಿದ್ದಾರೆ.
ಇದೇ ಹೇಳಿಕೆಯನ್ನು ಆಧರಿಸಿ ಮೃತ ಝುನೈದ್ ತಂದೆ ಇಸ್ಮಾಯಿಲ್ ಅವರು ಪಿಕಪ್ ಚಾಲಕ ಹಫೀಝ್ ಉದ್ಧೇಶಪೂರ್ವಕ ಅಪಘಾತ ನಡೆಸಿ ಕೊಲೆ ಮಾಡಿರೋದಾಗಿ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನನ್ವಯ ಪೊಲೀಸರು ಆರೋಪಿ ಹಫೀಝ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
20-10-26 06:06 pm
HK News Staffer
ಮೈಸೂರು ದಸರಾ ಕಂಬಳ ಸಂಪನ್ನ ; 16 ಗ್ರಾಂ ಚಿನ್ನ ಗೆದ್...
20-10-26 11:04 am
ಸಂಪುಟದಲ್ಲಿ ಮಹಿಳೆಗೆ ಸಿಗದ ಸ್ಥಾನ ; ಮಹಿಳಾ ಕಾಂಗ್ರ...
17-10-26 07:30 pm
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
20-10-26 01:18 pm
HK News Staffer
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
19-10-26 08:41 pm
HK News Staffer
ಸಹಕಾರಿ ಬ್ಯಾಂಕ್ ನಿರ್ದೇಶಕ ಸ್ಥಾನ 10 ವರ್ಷಕ್ಕೆ ಮಿತ...
19-10-26 07:10 pm
G I Bakery Raid, Mangalore: ಅವಧಿ ಮುಗಿದ ತಿಂಡಿಗ...
17-10-26 11:04 pm
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
20-10-26 05:06 pm
HK News Staffer
ಮಂಗಳೂರಿನ ಮಹಿಳಾ ಅಧಿಕಾರಿಗೆ ಅಶ್ಲೀಲ ವಿಡಿಯೋ ಕಳುಹಿಸ...
20-10-26 04:13 pm
ಮೊಗವೀರಪಟ್ನ ಶಾರದಾ ಮೆರವಣಿಗೆ ; ಟ್ಯಾಬ್ಲೋಗಳಿಗೆ ಬಾಂ...
20-10-26 03:10 pm
ಮೈಸೂರು ದಸರಾ ನೋಡಿ ವಾಪಸಾಗುತ್ತಿದ್ದ ವೇಳೆ ಬೆಳ್ತಂಗ...
20-10-26 10:56 am
ಉಪ್ಪಿನಂಗಡಿಯಲ್ಲಿ ತಲವಾರು ಝಳಪಿಸಿದ ಗ್ಯಾಂಗ್ ; ಕುಡಿ...
19-10-26 04:20 pm