ಬ್ರೇಕಿಂಗ್ ನ್ಯೂಸ್
22-10-26 10:32 am HK News Staffer ಕ್ರೈಂ
ಮಂಗಳೂರು, ಅ.22: ಬೋಳಿಯಾರಿನಲ್ಲಿ ಪಿಕಪ್ ಡಿಕ್ಕಿಯಾಗಿಸಿ ಇಬ್ಬರು ಸ್ಕೂಟರ್ ಸವಾರರನ್ಜು ಕೊಲೆಗೈದ ಪ್ರಕರಣದಲ್ಲಿ ಆರೋಪಿ ಮಹಮ್ಮದ್ ಹಫೀಜ್ ನನ್ನು ಕೊಣಾಜೆ ಪೊಲೀಸರು ಸ್ಥಳ ಮಹಜರು ನಡೆಸುವುದಕ್ಕಾಗಿ ಕರೆದೊಯ್ದ ವೇಳೆ ಮೃತ ಯುವಕರ ಇಬ್ಬರು ಸ್ನೇಹಿತರು ಆರೋಪಿಗೆ ಹಲ್ಲೆ ನಡೆಸಲು ಮುಂದಾದ ಘಟನೆ ನಡೆದಿದ್ದು ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಯನ್ನು ಕೃತ್ಯ ನಡೆದ ಸ್ಥಳದ ಮಹಜರು ತಯಾರಿಸುವ ಸಲುವಾಗಿ ಪೊಲೀಸರು ಪಂಚರನ್ನು, ತನಿಖಾ ಸಹಾಯಕರನ್ನು ಕರೆದುಕೊಂಡು ಸ್ಥಳಕ್ಕೆ ತೆರಳಿದ್ದರು. ಪಂಚರ ಸಮಕ್ಷಮದಲ್ಲಿ ಬೋಳಿಯಾರು ಗ್ರಾಮದ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ಆರೋಪಿ ತೋರಿಸಿಕೊಟ್ಟಂತೆ ಮಹಜರನ್ನು ತಯಾರಿಸುವ ಸಮಯ ಕೊಲೆಯಾದ ಮೊಹಮ್ಮದ್ ಝುನೈದ್ ಮತ್ತು ಮೊಹಮ್ಮದ್ ಆಫ್ರಾಜ್ ಅವರ ಸ್ನೇಹಿತರಾದ ಅಬ್ದುಲ್ ರಹಿಮಾನ್ ಮತ್ತು ಜಾಹೀರ್ ಎಂಬವರು ಏಕಾಏಕಿಯಾಗಿ ಕೊಲೆ ಆರೋಪಿ ಮಹಮ್ಮದ್ ಹಫೀಜ್ ಅಪ್ಪಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ, ಪಿರ್ಯಾದಿದಾರರು ಮತ್ತು ಸ್ಥಳದಲ್ಲಿದ್ದವರು ತಡೆದು ನಿಲ್ಲಿಸಿದ್ದಾರೆ.



ಆರೋಪಿ ತಮ್ಮ ಸ್ನೇಹಿತರನ್ನು ಕೊಲೆ ಮಾಡಿರುತ್ತಾನೆಂದು ದ್ವೇಷವನ್ನು ಹೊಂದಿದ್ದ ಯುವಕರು ಆತನ ಹಲ್ಲೆ ನಡೆಸಲು ಪ್ರಯತ್ನಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಇದರ ಬಗ್ಗೆ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿದ್ದಾರೆ. ಹಣಕಾಸು ವಿಚಾರದ ವೈಷಮ್ಯದಲ್ಲಿ ಪಿಕಪ್ ಚಾಲಕ ಮಹಮ್ಮದ್ ಹಫೀಜ್, ಸ್ಕೂಟರಿನಲ್ಲಿ ಬಂದಿದ್ದ ಮೊಹಮ್ಮದ್ ಝುನೈದ್ ಮತ್ತು ಮೊಹಮ್ಮದ್ ಆಫ್ರಾಜ್ ಅವರ ಮೇಲೆ ಬೋಳಿಯಾರಿನಲ್ಲಿ ಹಿಂದಿನಿಂದ ಅವರಿಗೆ ಡಿಕ್ಕಿಯಾಗಿಸಿ ಕೊಲೆ ಮಾಡಿದ್ದಾಗಿ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
20-11-26 05:15 pm
HK News Staffer
2028ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ; ಮಾಜಿ ಸಿಎಂ...
20-11-26 12:04 pm
ಹಿರಿಯೂರು ಅಭ್ಯರ್ಥಿ ; ನಾವು ಕುಮಾರಸ್ವಾಮಿ ಜೊತೆ ಮಾತ...
19-11-26 12:32 pm
ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ ; ಕಾರು - ಬೊಲೆರೋ...
18-11-26 11:03 pm
ರಾಜ್ಯದಲ್ಲಿ 30ಕ್ಕೂ ಹೆಚ್ಚು ಐಪಿಎಸ್ ವರ್ಗಾವಣೆ ; ಬೆ...
18-11-26 07:26 pm
21-11-26 11:44 am
HK News Staffer
ಜಾಗತಿಕ ಜನಸಂಖ್ಯೆಯಲ್ಲಿ ಇಸ್ಲಾಂ ಪಾರಮ್ಯ ; 2035ಕ್ಕೆ...
20-11-26 12:58 pm
ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ; ಮಾಜಿ ಮುಖ್ಯಸ್...
19-11-26 07:30 pm
"ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದಲ್...
19-11-26 01:19 pm
ಸೌದಿಗೆ ನವೆಂಬರ್ 30ರ ವರೆಗೆ ವಿಮಾನ ಸೇವೆ ರದ್ದು ; ಇ...
18-11-26 11:28 pm
22-11-26 04:17 pm
HK News Staffer
ಮಂಗಳೂರು ಏರ್ಪೋರ್ಟ್ ನಲ್ಲಿ ಪಾರ್ಕಿಂಗ್ ಶುಲ್ಕ ದುಬಾರ...
21-11-26 10:59 pm
‘ಮಹಾತ್ಮೆ ಕುದ್ಮುಲ್’ ; ಸೂರಿಲ್ಲದ, ತುಂಡು ಭೂಮಿ ಇಲ್...
21-11-26 10:29 pm
ಅಪಹರಣ ಆಗಿಲ್ಲ, ವಿದ್ಯಾರ್ಥಿನಿ ತಪ್ಪುದಾರಿ ತುಳಿದಿದ್...
20-11-26 09:53 pm
ಮುಸ್ಲಿಂ ಯುವತಿ ಅಪಹರಣ ; ಕೇರಳದಲ್ಲಿ ಸಂಬಂಧಿಕರ ಮನೆಯ...
20-11-26 09:51 pm
21-11-26 04:41 pm
HK News Staffer
ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕ...
21-11-26 12:41 pm
'ಬಸವ ಮಂಟಪ' ಕೃತಿ ವಿವಾದ ಹಿನ್ನೆಲೆ ; ಲೇಖಕ ರವಿ ಹಂಜ...
21-11-26 12:33 pm
ಬಂಟ್ವಾಳ ; ಶಾಲೆಯಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ...
19-11-26 09:20 pm
Baglur Manchapanahalli Murder: ಗುಜರಿ ವ್ಯಾಪಾರದ...
19-11-26 03:20 pm