ಬ್ರೇಕಿಂಗ್ ನ್ಯೂಸ್
22-10-26 03:21 pm HK News Staffer ಕ್ರೈಂ
ಲಕ್ನೋ, ಅ.22: ಇನ್ಶೂರೆನ್ಸ್ ಪ್ರೀಮಿಯಂ ಹೆಸರಲ್ಲಿ ಭಾರೀ ಆರ್ಥಿಕ ಲಾಭವನ್ನು ತೋರಿಸಿ 250 ಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ ಲಕ್ನೋ ಮೂಲದ ಬಿ ಕೇರ್ ಕಂಪನಿಯ ನಿರ್ದೇಶಕಿ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮಧುಮಿತಾ ಕೌರ್ ಎಂಬವರನ್ನು ಜಾರ್ಖಂಡ್‌ನ ರಾಂಚಿಯಲ್ಲಿ ಉತ್ತರ ಪ್ರದೇಶ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮತ್ತು ಕಂಪನಿಯೊಂದಿಗೆ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಉತ್ತರ ಪ್ರದೇಶ, ಜಾರ್ಖಂಡ್, ಉತ್ತರಾಖಂಡ ಮತ್ತು ಬಿಹಾರ ರಾಜ್ಯಗಳಲ್ಲಿ ಒಟ್ಟು 26 ಪ್ರಕರಣಗಳು ದಾಖಲಾಗಿವೆ. ಕಂಪನಿಯು 2008-09ರಲ್ಲಿ ದೆಹಲಿ ಮತ್ತು ಹರಿಯಾಣದಲ್ಲಿ ನೋಂದಾಯಿಸಲ್ಪಟ್ಟಿದ್ದರೂ, ಲಕ್ನೋದ ಕೃಷ್ಣಾನಗರ ಪ್ರದೇಶದಲ್ಲಿ ಪ್ರಾದೇಶಿಕ ಕಚೇರಿಯನ್ನಾಗಿ ತೋರಿಸಿ ವಹಿವಾಟು ನಡೆಸುತ್ತಿದ್ದರು.
ರಿಲಯನ್ಸ್ ಲೈಫ್ ಇನ್ಶೂರೆನ್ಸ್, ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಮತ್ತು ಏಗಾನ್ ಲೈಫ್ ಇನ್ಶೂರೆನ್ಸ್ ಮುಂತಾದ ಪ್ರತಿಷ್ಠಿತ ಕಂಪನಿಗಳಿಂದ ವಿಮೆಗಳನ್ನು ಖರೀದಿಸುವಂತೆ ಹೇಳಿ ಗ್ರಾಹಕರಿಗೆ ಆಕರ್ಷಕ ಲಾಭ ಹಾಗೂ ಆರ್ಥಿಕ ಪ್ರೋತ್ಸಾಹಕಗಳ ಭರವಸೆ ನೀಡುತ್ತಿದ್ದರು. ಅಲ್ಲದೆ, ಹೊಸ ಗ್ರಾಹಕರನ್ನು ಸೇರಿಸುವ ಅಥವಾ ಇತರರನ್ನು ವಿಮೆ ಖರೀದಿಸಲು ಪ್ರೇರೇಪಿಸುವ ವ್ಯಕ್ತಿಗಳಿಗೆ, ಕಂಪನಿಯೇ ಅವರ ಪರವಾಗಿ ಎರಡನೇ ವರ್ಷದ ಪ್ರೀಮಿಯಂ ಕಂತುಗಳನ್ನು ಪಾವತಿಸುವುದಾಗಿ ನಂಬಿಸಿದ್ದರು.
ಆದರೆ, ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ವಿಮಾ ಕಂಪನಿಗೆ ಜಮಾ ಮಾಡದೆ ದುರುಪಯೋಗಪಡಿಸಿದ್ದು ನಂತರ ತಮ್ಮ ಕಚೇರಿಗಳನ್ನು ಮುಚ್ಚಿ ತಲೆಮರೆಸಿಕೊಂಡಿದ್ದರು. ಎರಡನೇ ಕಂತನ್ನು ಕಂಪನಿಯೇ ಕಟ್ಟುತ್ತದೆ ಎಂದು ಹೇಳಿದ್ದರೂ, ಪಾವತಿಯಾಗದ ಹಿನ್ನೆಲೆಯಲ್ಲಿ ಗ್ರಾಹಕರು ಉತ್ತರ ಪ್ರದೇಶ, ಜಾರ್ಖಂಡ್, ಉತ್ತರಾಖಂಡ, ಬಿಹಾರ ರಾಜ್ಯದ ಹಲವೆಡೆ ಪ್ರಕರಣ ದಾಖಲಿಸಿದ್ದರು.
ರಾಂಚಿಯಲ್ಲಿ ಬಂಧಿಸಿದ ಬಳಿಕ ಪೊಲೀಸರು ಆರ್ಥಿಕ ಅಪರಾಧ ನ್ಯಾಯಾಲಯದಿಂದ ಟ್ರಾನ್ಸಿಟ್ ರಿಮಾಂಡ್ ಪಡೆದು ಮಧುಮಿತಾ ಕೌರ್ ಅವರನ್ನು ಲಕ್ನೋಗೆ ಕರೆತಂದು ಅಲ್ಲಿನ ನ್ಯಾಯಾಲಯದ ಮುಂದೆ ಹಾರುಪಡಿಸಿದ್ದಾರೆ. ಅಪರಾಧ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
21-10-26 10:31 pm
HK News Desk
ಸಕಲೇಶಪುರ ; ನಕಲಿ ದಾಖಲೆ ಸೃಷ್ಟಿಸಿ ಬರೋಬ್ಬರಿ 13,10...
20-10-26 06:06 pm
ಮೈಸೂರು ದಸರಾ ಕಂಬಳ ಸಂಪನ್ನ ; 16 ಗ್ರಾಂ ಚಿನ್ನ ಗೆದ್...
20-10-26 11:04 am
ಸಂಪುಟದಲ್ಲಿ ಮಹಿಳೆಗೆ ಸಿಗದ ಸ್ಥಾನ ; ಮಹಿಳಾ ಕಾಂಗ್ರ...
17-10-26 07:30 pm
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
21-10-26 04:21 pm
HK News Desk
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
21-10-26 09:20 pm
HK News Desk
ಕದ್ರಿ ರಾಜಾಂಗಣದಲ್ಲಿ ‘ಅಷ್ಟಭುಜೆ’ಯಾಗಿ ಅವತರಿಸಿದ ಆರ...
21-10-26 07:52 pm
Mangalore Accident, Ullal: ಓವರ್ ಟೇಕ್ ಧಾವಂತದಲ್...
19-10-26 08:41 pm
ಸಹಕಾರಿ ಬ್ಯಾಂಕ್ ನಿರ್ದೇಶಕ ಸ್ಥಾನ 10 ವರ್ಷಕ್ಕೆ ಮಿತ...
19-10-26 07:10 pm
G I Bakery Raid, Mangalore: ಅವಧಿ ಮುಗಿದ ತಿಂಡಿಗ...
17-10-26 11:04 pm
22-10-26 03:21 pm
HK News Staffer
ಮೂಡುಬಿದಿರೆಯಲ್ಲಿ ಕರುಣಾಜನಕ ದುರಂತ ; ಮಗನನ್ನು ರಕ್ಷ...
22-10-26 01:03 pm
ನೆಲ್ಯಾಡಿ ಬಳಿ ಭೀಕರ ಅಪಘಾತ ; ನಿಂತಿದ್ದ ಗ್ಯಾಸ್ ಟ್...
22-10-26 01:01 pm
Boliyaru Murder Case, Dakshina Kannada Crime...
22-10-26 10:32 am
ಬೋಳಿಯಾರಿನಲ್ಲಿ ಸ್ಕೂಟರ್ ಸವಾರರ ಸಾವು ಪ್ರಕರಣ ; ಅಪಘ...
20-10-26 05:06 pm