ಬ್ರೇಕಿಂಗ್ ನ್ಯೂಸ್
28-10-26 10:42 pm HK News Desk ಕ್ರೈಂ
ಮಂಗಳೂರು, ಅ.28 ಫೈರ್ ಅಂಡ್ ಸೇಫ್ಟಿ ಎಕ್ವಿಪ್ ಮೆಂಟ್ಸ್ ಕಂಪನಿಯೊಂದರ ಮಾಲೀಕರಾಗಿರುವ ದಂಪತಿಗೆ ಯುನೈಟೆಡ್ ನೇಶನ್ಸ್ ಹೈಕಮಿಷನರ್ ಫಾರ್ ರೆಫ್ಯುಜಿ ಎನ್ನುವ ಸಂಸ್ಥೆಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಕೀನ್ಯಾ ದೇಶದೊಂದಿಗೆ ವ್ಯವಹಾರ ಕುದುರಿಸುವ ನೆಪದಲ್ಲಿ ನಾನಾ ಬಗೆಯ ಸರ್ಟಿಫಿಕೇಟ್ ಗಳನ್ನು ಮಾಡಿಸಿಕೊಡುವ ನೆಪದಲ್ಲಿ 57 ಲಕ್ಷ ರೂ.ಗಳನ್ನು ಪಡೆದು ವಂಚನೆ ಎಸಗಿದ್ದು ಸೈಬರ್ ಖದೀಮರ ಕೃತ್ಯದ ಅನುಮಾನದಲ್ಲಿ ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ.
ಮಂಗಳೂರಿನಲ್ಲಿ THAKSHEEL FIRE & SAFTY EQUIPMENTS ಸಂಸ್ಥೆಯನ್ನು ಹೊಂದಿರುವ ದಂಪತಿಗೆ ವಂಚನೆ ಎಸಗಲಾಗಿದೆ. ನಿತೇಶ್ ಕುಮಾರ್ ಹೆಸರಲ್ಲಿ ಮೊದಲಿಗೆ ವಾಟ್ಸಪ್ ಕರೆ ಮಾಡಿದ್ದು ತುಳು ಭಾಷೆಯಲ್ಲಿ ತಾನು ಕೀನ್ಯ ದೇಶದ ನೈರೋಬಿಯಿಂದ ಮಾತನಾಡುತ್ತಿದ್ದೇನೆಂದು ಪರಿಚಯ ಮಾಡಿಕೊಂಡಿದ್ದ. UNITED NATIONS HIGH COMMISSIONER FOR REFUGEES ಸಂಸ್ಥೆಯಲ್ಲಿ ನೌಕರನಾಗಿದ್ದು ಮೂಲತಃ ಉಡುಪಿ ಜಿಲ್ಲೆಯ ಕಾಪು ನಿವಾಸಿಯಾಗಿರುತ್ತೇನೆ ಎಂದು ತಿಳಿಸಿದ್ದ. ಅದಕ್ಕೆ ಇವರು ನಮ್ಮಿಂದ ಏನು ಆಗಬೇಕು ಎಂದು ಕೇಳಿದ್ದು ನಿಮ್ಮೊಂದಿಗೆ ವ್ಯವಹಾರ ಮಾಡಲು ಇಚ್ಚಿಸಿದ್ದು, ನೀವು ಮಾರಾಟ ಮಾಡುವ FIRE EXTINGUISHERS ಗಳನ್ನು ನಮ್ಮ ಸಂಸ್ಥೆಯು ಖರೀದಿಸುವುದಾಗಿ ತಿಳಿಸಿರುತ್ತಾನೆ.
ವ್ಯವಹಾರ ಮಾಡಲು ಇಚ್ಚಿಸಿದಲ್ಲಿ ತನ್ನ ಮೇಲಧಿಕಾರಿ ರಾಜಾಗುರು ರೆಡ್ಡಿಯಾರ್ ಎಂಬವರೊಂದಿಗೆ ಮಾತನಾಡುವಂತೆ ತಿಳಿಸಿದ್ದ. ಮರು ದಿನ ರಾಜಾಗುರು ವಾಟ್ಸಪ್ ನಲ್ಲಿ ಕರೆ ಮಾಡಿ ನಿಮ್ಮಿಂದ FIRE EXTINGUISHERS ಗಳನ್ನು ನಮ್ಮ ಸಂಸ್ಥೆಯು ಖರೀದಿಸಲು ಇಚ್ಚಿಸಿದ್ದು ನೀವು ಕೊಟೇಶನ್ ನೀಡಿದರೆ ನಾವು purchase order ನೀಡುತ್ತೇವೆ ಎಂದು ತಿಳಿಸಿದ್ದ. ಕೆಲವು ದಿನಗಳ ಕಾಲ ವ್ಯವಹಾರ ಕುದುರಿಸಿದ ಬಳಿಕ ವಾಟ್ಸಪ್ ನಲ್ಲಿ ಕರೆ ಮಾಡಿದ ರೆಡ್ಡಿಯಾರ್, ನಮ್ಮ ವ್ಯವಹಾರ ನಡೆಯಬೇಕಾದಲ್ಲಿ ಕೀನ್ಯ ದೇಶದ ನಿಯಮದ ಪ್ರಕಾರ Registration Certificate, Anti Money Laundering Certificate, International Monetary Fund Certificate, Financial Intelligence Authority Cirtificate ಹಾಗೂ Insurance & Bank Storage ಹಣ ಕಟ್ಟಲು ಇರುವುದಾಗಿ ತಿಳಿಸಿದ್ದ. ಅಲ್ಲದೆ, ಸದರಿ Certificate ಮಾಡಲು ನಮ್ಮಲ್ಲಿ ಜನ ಇದ್ದು, ನೀವು ಹಣ ನೀಡಿದಲ್ಲಿ ಕೂಡಲೇ Certificate ಮಾಡಿಕೊಂಡು ವ್ಯವಹಾರ ಮುಂದುವರಿಸುವ ಬಗ್ಗೆ ತಿಳಿಸಿದ್ದ.
ಆನಂತರ, ಅ.23ರಿಂದ 29ರ ವರೆಗೆ Rajaguru Reddiar ಎಂಬಾತ ನೀಡಿದ ಬ್ಯಾಂಕ್ ಖಾತೆಗಳಿಗೆ ದಂಪತಿ ತಮ್ಮ ಬ್ಯಾಂಕ್ ಖಾತೆಗಳಿಂದ RTGS, NEFT, IMPS & SWIFT ಮೂಲಕ ಹಂತ ಹಂತವಾಗಿ ಒಟ್ಟು 57,31,175/- ರೂಪಾಯಿ ವರ್ಗಾಯಿಸಿದ್ದಾರೆ. ನಂತರ ಸದ್ರಿ ವ್ಯಕ್ತಿ ಪುನಃ ಕರೆ ಮಾಡಿ ಮತ್ತೆ ಹಣ ಕಳುಹಿಸಲು ತಿಳಿಸಿದ್ದು ಆಗ ದಂಪತಿಗೆ ಅನುಮಾನ ಬಂದು ನಮ್ಮ ಹಣವನ್ನು ವಾಪಸ್ ನೀಡುವಂತೆ ತಿಳಿಸಿದ್ದಾರೆ. ನಿತೇಶ್ ಕುಮಾ ಮತ್ತು ರಾಜಾಗುರು ಅವರಿಗೆ ಹಲವು ಬಾರಿ ಕರೆ ಮಾಡಿ ರಿಫಂಡ್ ಮಾಡುವಂತೆ ಕೇಳಿಕೊಂಡರೂ ಅವರು ಸಬೂಬು ಹೇಳಿ ತಪ್ಪಿಸುತ್ತಿದ್ದಾರೆ. ಫೋನ್ ಕರೆಯನ್ನು ಸ್ವೀಕರಿಸದೇ ಅನುಮಾನಾಸ್ಪದ ರೀತಿ ನಡೆದುಕೊಂಡಿದ್ದು ಇದೊಂದು ಆನ್ ಲೈನ್ ಸ್ಕ್ಯಾಮ್ ಎಂಬ ಸಂಶಯ ಬಂದಿದೆ ಎಂದು ಹಣ ಕಳಕೊಂಡ ಬಗ್ಗೆ ಮಹಿಳೆ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
28-10-26 10:52 pm
HK News Desk
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
ಅರಮನೆ ಮಂಡಳಿ ಸರಕಾರದ್ದು, ಅರಮನೆ ಜಾಗವೂ ಸರಕಾರದ್ದು...
27-10-26 01:23 pm
ದೇವೇಗೌಡ್ರ ಕುಟುಂಬವನ್ನು ಮುಗಿಸಲು ಡಿಕೆಶಿಯಿಂದ 600...
26-10-26 11:55 am
Rahul Gandhi, Siddaramaiah: ಸ್ಟಿಂಗ್ ಆಪರೇಶನ್ ;...
26-10-26 11:53 am
25-10-26 09:40 pm
HK News Staffer
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
28-10-26 09:28 pm
HK News Desk
TIVA Investment Scam, Mangalore: ಮತ್ತೊಂದು ದೋಖ...
28-10-26 07:18 pm
ವೇದವ್ಯಾಸ ಕಾಮತರೇ ಮಂಗಳೂರಿನ ಅಭಿವೃದ್ಧಿಗೆ ನಿಮ್ಮ ಕೊ...
28-10-26 04:59 pm
ಉದಯೋನ್ಮುಖ ನಟಿ ವಿನುತಾ ನಾಯಕ್ ಹಠಾತ್ ಕುಸಿದು ಬಿದ್ದ...
28-10-26 11:53 am
CT Ravi, Mangalore, SIR: ನೇಪಾಳ ಮಾದರಿ ಅರಾಜಕತೆ...
27-10-26 10:52 pm
28-10-26 10:42 pm
HK News Desk
ಬ್ರಹ್ಮಾವರ ರೌಡಿಶೀಟರ್ ಕೊಲೆ ; ಸೋದರರಿಬ್ಬರ ಬಂಧನ, ಹ...
28-10-26 04:57 pm
ತಮಿಳುನಾಡು ಜೈಲಿನಿಂದ 17 ಕೈದಿಗಳ ಪರಾರಿ; 30 ವರ್ಷಗಳ...
28-10-26 10:28 am
ಬ್ರಹ್ಮಾವರದಲ್ಲಿ ರೌಡಿಶೀಟರ್ ಬರ್ಬರ ಹತ್ಯೆ: ಹಣಕಾಸಿನ...
28-10-26 10:25 am
ಆನ್ಲೈನ್ ಬೆಟ್ಟಿಂಗ್ ದಂಧೆ ; ಚಿತ್ರದುರ್ಗದ ಕಾಂಗ್ರೆಸ...
27-10-26 09:32 pm