ಬ್ರೇಕಿಂಗ್ ನ್ಯೂಸ್
30-10-26 11:01 pm HK News Staffer ಕ್ರೈಂ
ಬೆಂಗಳೂರು, ಅ.30: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಮಾಡಲಾಗಿದ್ದ 'ಸ್ಟಿಂಗ್ ಆಪರೇಷನ್' ಷಡ್ಯಂತ್ರದ ಆರೋಪ ಎದುರಿಸುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.
ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ನಡೆಸಲಾದ ನಕಲಿ ರಹಸ್ಯ ಕಾರ್ಯಾಚರಣೆ ಷಡ್ಯಂತ್ರದಲ್ಲಿ ಕೃಪಾ ಆಳ್ವ ಅವರ ಪಾತ್ರವಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಇದರಿಂದ ಪಕ್ಷಕ್ಕೆ ಭಾರಿ ಮುಜುಗರ ಉಂಟಾಗಿತ್ತಲ್ಲದೆ, ಆಡಳಿತ ಪಕ್ಷದ ನಾಯಕರು ಮುಜುಗರಕ್ಕೀಡಾಗಿದ್ದರು.
ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಶಿಸ್ತು ಸಮಿತಿಯು ಕೃಪಾ ಆಳ್ವ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು. ಆದರೆ ಕೃಪಾ ಆಳ್ವ ಅವರು ಯಾವುದೇ ಸಮರ್ಪಕ ವಿವರಣೆ ಅಥವಾ ಉತ್ತರ ನೀಡದ ಕಾರಣ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಈ ನಡುವೆ, ಸಿದ್ದರಾಮಯ್ಯ ಅವರು ನೀಡಿದ ಸೈಬರ್ ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಕೃಪಾ ಆಳ್ವ ಅವರು ಈಗಾಗಲೇ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಶಿಸ್ತು ಸಮಿತಿಯ ಸೂಚನೆ ಮೇರೆಗೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ 6 ವರ್ಷಗಳ ಕಾಲ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ. ಸಿಸಿಬಿ ಪೊಲೀಸರ ವಿಚಾರಣೆ ಬೆನ್ನಲ್ಲೇ ಕೃಪಾ ಆಳ್ವ ವಿದೇಶಕ್ಕೆ ತೆರಳಿದ್ದರು.
ಸಿದ್ದರಾಮಯ್ಯಗೆ ಕ್ಲೀನ್ ಚಿಟ್
ಇದೇ ವೇಳೆ, ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಸಿಸಿಬಿ ಸೈಬರ್ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದು ಸಿದ್ದರಾಮಯ್ಯಗೆ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಸ್ಟಿಂಗ್ ಆಪರೇಷನ್ನಲ್ಲಿ ಬರುವ ಅಷ್ಟೂ ವಿಚಾರ ಕಟ್ಟುಕಥೆ ಎಂದು ಪ್ರಕಟಣೆ ಹೊರಡಿಸಿದೆ. ಪ್ರಕರಣದ ಕುರಿತಾಗಿ ಸಿಸಿಬಿ ಪೊಲೀಸರಿಂದ ಸಮಗ್ರ ತನಿಖೆ ಕೈಗೊಳ್ಳಲಾಗಿದೆ. ವಿಡಿಯೋದಲ್ಲಿ ಬಿಂಬಿಸಿರುವಂತೆ ಲೈಂಗಿಕ ದೌರ್ಜನ್ಯದ ಆರೋಪ ಕಟ್ಟುಕಥೆ ಎಂದು ಸಿಸಿಬಿ ಸ್ಪಷ್ಟನೆ ನೀಡಿದೆ. ತನಿಖೆಯಲ್ಲಿ ಸಾಕ್ಷ್ಯಾಧಾರಗಳು ಮತ್ತು ದಾಖಲಿಸಲಾದ ಹೇಳಿಕೆ ಆಧಾರದಲ್ಲಿ ತನಿಖೆ ಮಾಡಲಾಗಿದ್ದು, ವಿಡಿಯೋವನ್ನು ಉದ್ದೇಶಪೂರ್ವಕ ಸೃಷ್ಟಿಸಿರೋದು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಸಿಸಿಬಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
30-10-26 08:26 pm
HK News
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
'ಮೈಸೂರು ಅರಮನೆ ಸರ್ಕಾರಕ್ಕೆ ಸೇರಿದ್ದು' ತನ್ನ ಹೇಳಿಕ...
28-10-26 10:52 pm
ವಿಧಾನ ಪರಿಷತ್ತಿನ ನಾಲ್ಕು ಸ್ಥಾನಕ್ಕೆ ಚುನಾವಣೆ ; ನಾ...
27-10-26 09:47 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
30-10-26 12:51 pm
HK News Staffer
ಸೌಜನ್ಯಾ ಪ್ರಕರಣ ತನಿಖೆಯಲ್ಲಿ ಭಾಗಿಯಾಗಿದ್ದ ಎಲ್ಲ ಪೊ...
30-10-26 12:19 pm
UPSCಯಲ್ಲಿ 42ನೇ ರ್ಯಾಂಕ್ನಿಂದ ರಫೇಲ್ ಪೈಲಟ್ ವರೆ...
30-10-26 12:16 pm
ಕುಸುಮಾವತಿಯೇ, ಇಂದಿರಾವತಿಯೇ ? ಸರ್ಕಾರಿ ಜಮೀನು ಅಕ್ರ...
29-10-26 08:19 pm
ಸೌಜನ್ಯಾ ಕೊಲೆ ಪ್ರಕರಣದ ಮರುತನಿಖೆ ; ಪಿಎಸ್ಐ ಯೋಗೀಶ್...
29-10-26 02:12 pm
30-10-26 11:01 pm
HK News Staffer
Cyprian Pinto, Mangalore: 50ಕ್ಕೂ ಹೆಚ್ಚು ಬಾಲಕರ...
30-10-26 09:57 pm
ಆನ್ಲೈನಲ್ಲಿ ಕೇರಳ ಲಾಟರಿ ಗೆದ್ದ ಮಂಗಳೂರಿನ ವ್ಯಕ್ತಿಗ...
30-10-26 05:16 pm
ಉತ್ತರಾಖಂಡದಲ್ಲಿ ಭೀಕರ ಹೆಲಿಕಾಪ್ಟರ್ ದುರಂತ: ಬೆಂಗಳೂ...
30-10-26 05:13 pm
ಶಿವಮೊಗ್ಗದಿಂದ ಮಂಗಳೂರಿಗೆ 1.15 ಕೋಟಿ ನಗದು ರವಾನೆ ;...
29-10-26 11:02 pm