ಆಮ್ಲಜನಕ ಸಂಪರ್ಕ ಕಡಿತಗೊಳಿಸಿದ ಕ್ರೂರಿ ವಾರ್ಡ್​ ಬಾಯ್​ ; ಕೆಲವೇ ಕ್ಷಣಗಳಲ್ಲಿ ಕೊರೊನಾ ರೋಗಿ ಸಾವು

15-04-21 03:30 pm       Headline Karnataka News Network   ಕ್ರೈಂ

ಕೋವಿಡ್​ ರೋಗಿಯ ಆಮ್ಲಜನಕ ಸಂಪರ್ಕವನ್ನು ವಾರ್ಡ್​ ಬಾಯ್​ ಕಡಿತಗೊಳಿಸಿದ್ದು, ಪರಿಣಾಮ ಸೋಂಕಿತ ಮೃತಪಟ್ಟಿದ್ದಾನೆ.

ಮಧ್ಯಪ್ರದೇಶ, ಏ.15 :  ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್​ ರೋಗಿಯ ಆಮ್ಲಜನಕ ಸಂಪರ್ಕವನ್ನು ವಾರ್ಡ್​ ಬಾಯ್​ ಕಡಿತಗೊಳಿಸಿದ್ದು, ಪರಿಣಾಮ ಸೋಂಕಿತ ಮೃತಪಟ್ಟಿದ್ದಾನೆ.

ಮಧ್ಯಪ್ರದೇಶದ ಶಿವಪುರಿ ಜಿಲ್ಲಾಸ್ಪತ್ರೆಯಲ್ಲಿ ಇಂತಹದೊಂದು ಘಟನೆ ನಡೆದಿದೆ. ವಾರ್ಡ್​ ಬಾಯ್​ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೋಗಿಗೆ ಉಸಿರಾಡಲು ಸಂಪರ್ಕಿಸಿದ್ದ ಆಮ್ಲಜನಕ ಪೂರೈಸುವ ಯಂತ್ರವನ್ನು ವಾರ್ಡ್​ ಬಾಯ್ ತೆಗೆದುಕೊಂಡು ಹೋಗುವ ದೃಶ್ಯವನ್ನು ಸಿಸಿಟಿವಿ ವಿಡಿಯೋದಲ್ಲಿ ಕಾಣಬಹುದಾಗಿದೆ.

ರೋಗಿಯು ಸಕ್ಕರೆ ಕಾಯಿಲೆಯಿಂದ ಕೂಡ ಬಳಲುತ್ತಿದ್ದು, ಹಿಮೋಗ್ಲೋಬಿನ್​​ ಪ್ರಮಾಣ ಕಡಿಮೆಯಾಗಿದೆ. ತಕ್ಷಣವೇ ಉಸಿರಾಟದ ಸಮಸ್ಯೆ ಎದುರಾಗಿದ್ದು, ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಹಾಗೂ ಮೃತನ ಕುಟುಂಬಸ್ಥರ ಆರೋಪದ ಮೇರೆಗೆ ತನಿಖೆ ನಡೆಸುತ್ತಿರುವುದಾಗಿ ಮುಖ್ಯ ವೈದ್ಯಕೀಯ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

Family members of a Covid-19 patient in Madhya Pradesh are alleging that negligence on the part of a state-run hospital led to his death. The case has come to light from the Shivpuri district hospital in MP.