ಬ್ರೇಕಿಂಗ್ ನ್ಯೂಸ್
15-04-21 05:51 pm Mangalore Correspondent ಕ್ರೈಂ
ಮಂಗಳೂರು, ಎ.15: ದರೋಡೆ ಪ್ರಕರಣದ ಬೆನ್ನತ್ತಿದ ಮೂಡುಬಿದ್ರೆ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಅಂತರ್ ಜಿಲ್ಲಾ ವ್ಯಾಪ್ತಿಯಲ್ಲಿ ಹರಡಿಕೊಂಡಿದ್ದ ದರೋಡೆ ತಂಡದ ಮೂವರು ಕಿಂಗ್ ಪಿನ್ ಗಳನ್ನೇ ಪೊಲೀಸರು ಹೆಡೆಮುರಿ ಕಟ್ಟಿದ್ದು, ಮತ್ತೆ ಆರು ಮಂದಿಯನ್ನು ಬಂಧಿಸಿದ್ದಾರೆ.
ಅವರೆಲ್ಲ ಹೈಫೈ ವಾಹನಗಳಲ್ಲಿ ತಿರುಗಾಡಿಕೊಂಡಿದ್ದವರು. ತಮ್ಮದೇ ಆದ ದರೋಡೆ ತಂಡವನ್ನು ಕಟ್ಟಿಕೊಂಡು ಬೆಂಗಳೂರು, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಉಡುಪಿ ಹೀಗೆ ಹಲವಾರು ಕಡೆ ವಾಹನ ಅಡ್ಡಗಟ್ಟಿ ದರೋಡೆ, ಮನೆ ಕಳ್ಳತನ, ಒಂಟಿ ಮನೆಗಳಿಗೆ ನುಗ್ಗಿ ದರೋಡೆ ಹೀಗೆ ಹಲವು ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದರು. ಕೆ.ಸಿ.ರೋಡ್ ನಿವಾಸಿ ಮೊಹಮ್ಮದ್ ಜುಬೈರ್, ಬೆಳ್ತಂಗಡಿಯ ಇಬ್ರಾಹಿಂ ಲತೀಫ್, ರಾಕೇಶ್, ಬೆಂಗಳೂರು ಆನೆಕಲ್ ಮೂಲದ ಅರ್ಜುನ್, ನೆಲ್ಯಾಡಿಯ ಮೋಹನ್, ಬೋಳಿಯಾರು ಮನ್ಸೂರ್ ಬಂಧಿತರಾಗಿದ್ದು, ಈ ಪೈಕಿ ಜುಬೈರ್, ಲತೀಫ್ ಮತ್ತು ರಾಕೇಶ್ ಕಿಂಗ್ ಪಿನ್ ಗಳಾಗಿದ್ದಾರೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಮೂಡುಬಿದ್ರೆ ಮತ್ತು ಮೂಲ್ಕಿ ಆಸುಪಾಸಿನಲ್ಲಿ ಒಂದೇ ದಿನದಲ್ಲಿ ನಡೆದ ಮನೆಗಳ್ಳತನ, ವಾಹನ ಅಡ್ಡಗಟ್ಟಿ ದರೋಡೆ ಸೇರಿದಂತೆ ಏಳು ಪ್ರಕರಣಗಳ ಹಿಂದೆ ಬಿದ್ದ ಪೊಲೀಸರು ಮೊದಲಿಗೆ ಒಂಬತ್ತು ಮಂದಿಯನ್ನು ಬಂಧಿಸಿದ್ದರು. ಆರೋಪಿಗಳು ನೀಡಿದ ಮಾಹಿತಿಯಂತೆ, ಬೆಂಗಳೂರು, ಮಂಗಳೂರು ಸೇರಿ ಐದಾರು ಜಿಲ್ಲೆಗಳ ವ್ಯಾಪ್ತಿಯಲ್ಲಿ ದರೋಡೆ ತಂಡ ಹರಡಿಕೊಂಡಿದ್ದು ತಿಳಿದುಬಂದಿತ್ತು. 50-60 ಮಂದಿ ಇರುವ ನಾಲ್ಕು ತಂಡಗಳಿದ್ದು ಪ್ರತೀ ತಂಡಕ್ಕೆ ಕಿಂಗ್ ಪಿನ್ ಇದ್ದಾನೆ ಅನ್ನೋದು ತನಿಖೆಯಲ್ಲಿ ತಿಳಿದುಬಂದಿತ್ತು. ಈಗ ಮೂರು ಕಿಂಗ್ ಪಿನ್ ಗಳು ಸಿಕ್ಕಿಬಿದ್ದಿದ್ದು, ಇನ್ನೊಬ್ಬನ ಪತ್ತೆಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಕಮಿಷನರ್ ತಿಳಿಸಿದ್ದಾರೆ.
ವಾಹನ ಬಾಡಿಗೆ ಪಡೆದು ಕೃತ್ಯಕ್ಕೆ ಬಳಕೆ
ಆರೋಪಿಗಳು ಕೃತ್ಯಕ್ಕೆ ಇಳಿಯುತ್ತಿದ್ದಾಗ, ವಾಹನಗಳನ್ನು ಬಾಡಿಗೆ ಪಡೆಯುತ್ತಿದ್ದರು. ಬಾಡಿಗೆ ಪಡೆದು ನಂಬರ್ ಪ್ಲೇಟ್ ಬದಲಿಸಿ, ವಿವಿಧ ಕಡೆಗಳಿಗೆ ಸುತ್ತಾಡುತ್ತಿದ್ದರು. ಚಿಕ್ಕಮಗಳೂರು, ಹಾಸನದಲ್ಲಿ ತೋಟಗಳ ನಡುವೆ ಇರುತ್ತಿದ್ದ ಒಂಟಿ ಮನೆಗಳನ್ನು ಟಾರ್ಗೆಟ್ ಮಾಡ್ಕೊಂಡು ದರೋಡೆ ನಡೆಸುತ್ತಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದ ಸಂದರ್ಭದಲ್ಲಿ ಹಲವು ಬೆಳ್ಳಿ ತಟ್ಟೆಗಳು ಪತ್ತೆಯಾಗಿವೆ. ತೋಟದ ಮನೆಯಲ್ಲಿ ಶೇಖರಿಸಿಟ್ಟಿದ್ದ ಬೆಳ್ಳಿಯ ತಟ್ಟೆಗಳವು ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟು 28 ಪ್ರಕರಣಗಳು ಪತ್ತೆ
ದಕ್ಷಿಣ ಕನ್ನಡ, ಉಡುಪಿ, ಹಾಸನ, ಬೆಂಗಳೂರು ಸೇರಿ ಒಟ್ಟು 28 ಅಪರಾಧ ಕೃತ್ಯಗಳು ಪತ್ತೆಯಾಗಿವೆ. ಎಫ್ಐಆರ್ ಆಗಿರುವುದನ್ನು ತಲಾಶೆ ನಡೆಸಿದಾಗ, ಈ ಕೃತ್ಯಗಳನ್ನು ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಹಲವಾರು ಕೃತ್ಯಗಳು ಪೊಲೀಸ್ ಠಾಣೆಗೆ ತಿಳಿಯದೇ ಇರುವಂಥದ್ದು ಇನ್ನೂ ಇರಬಹುದು. ಎಫ್ಐಆರ್ ಆಗಿರದೇ ಇದ್ದರೆ ಅಂಥವು ಟ್ರೇಸ್ ಆಗಲ್ಲ. ವಿಚಾರಣೆಯಲ್ಲಿ ಕೇರಳದ ಕಾಸರಗೋಡು, ಕೊಡಗು, ಮೈಸೂರು ಹೀಗೆ ಎಲ್ಲೆಲ್ಲೋ ಅಪರಾಧ ಕೃತ್ಯ ಎಸಗಿರುವುದನ್ನು ಹೇಳುತ್ತಿದ್ದಾರೆ. ಆಯಾ ಠಾಣೆಗಳಲ್ಲಿ ವ್ಯವಹರಿಸಿ, ಅಪರಾಧ ಕೃತ್ಯಗಳನ್ನು ಬಾಯಿ ಬಿಡಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ ಕಮಿಷನರ್.
ಅತ್ಯಂತ ಚಾಲಾಕಿಯಾಗಿದ್ದ ಜುಬೈರ್
ಮೊಹಮ್ಮದ್ ಜುಬೈರ್ ಅತ್ಯಂತ ಚಾಲಾಕಿಯಾಗಿದ್ದು ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದಾನೆ. ಈತನ ವಿರುದ್ಧ ಬೆಂಗಳೂರು, ಮಂಗಳೂರು, ಉಡುಪಿ ಸೇರಿ 25ಕ್ಕೂ ಹೆಚ್ಚು ಕಡೆ ಕೇಸುಗಳಿವೆ. ರಾಕೇಶ್ ವಿರುದ್ಧ ಮೂಡುಬಿದ್ರೆ ಸೇರಿದಂತೆ ಐದು ಕೇಸುಗಳಿವೆ. ಮನ್ಸೂರ್ ಕೋಣಾಜೆ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಹಾಸನದ ಅರೇಹಳ್ಳಿ ಎಂಬಲ್ಲಿ ಮನೆಗಳ್ಳತನ ಮಾಡುತ್ತಿದ್ದ ವೇಳೆ ಪಿಸ್ತೂಲ್ ಒಂದನ್ನು ಕಳವು ಮಾಡಿದ್ದು, ಅದನ್ನು ಉಳ್ಳಾಲದ ಸಮೀರ್ ಎಂಬಾತನಿಗೆ ಮಾರಾಟ ಮಾಡಿದ್ದರು.
ಅರೇಹಳ್ಳಿಯ ಪಿಸ್ತೂಲ್ ಮಾರಿದ್ದ ಮನ್ಸೂರ್ !
ಮೂರು ತಿಂಗಳ ಹಿಂದೆ ಮಂಗಳೂರಿನ ಫಳ್ನೀರ್ ನಲ್ಲಿ ನಡೆದ ಎಂಎಫ್ ಸಿ ಹೊಟೇಲಿಗೆ ನುಗ್ಗಿ ದಾಂಧಲೆಗೈದು ಪಿಸ್ತೂಲ್ ಫೈರ್ ಮಾಡಿದ್ದ ಪ್ರಕರಣದಲ್ಲಿ ಅರೇಹಳ್ಳಿಯ ಪಿಸ್ತೂಲ್ ಬಳಕೆಯಾಗಿತ್ತು ಎನ್ನೋದನ್ನು ಕಮಿಷನರ್ ಶಶಿಕುಮಾರ್ ಹೊರಗೆಡವಿದ್ದಾರೆ. ಎಂಎಫ್ ಸಿ ಪ್ರಕರಣದ ಸಮೀರ್ ಪಿಸ್ತೂಲ್ ಬಳಕೆ ಮಾಡಿದ್ದ. ಆ ಪಿಸ್ತೂಲ್ ಲೈಸನ್ಸ್ ಹೊಂದಿದ್ದ ಗನ್ ಆಗಿದ್ದು, ಅರೇಹಳ್ಳಿಯ ತೋಟದ ಮನೆಯಲ್ಲಿ ದರೋಡೆ ತಂಡಕ್ಕೆ ಸಿಕ್ಕಿತ್ತು. ಅದನ್ನು ಪಡೆದಿದ್ದ ಕೋಣಾಜೆಯ ಮನ್ಸೂರ್, ಉಳ್ಳಾಲದ ಸಮೀರ್ ಗೆ ಮಾರಾಟ ಮಾಡಿದ್ದ.
ಇನ್ನೊಬ್ಬ ಗ್ಯಾಂಗ್ ಲೀಡರ್ ಇದ್ದಾನೆ !
ಮೂಡುಬಿದ್ರೆ ಠಾಣೆಯ ಇನ್ ಸ್ಪೆಕ್ಟರ್ ದಿನೇಶ್ ಕುಮಾರ್ ಮತ್ತು ಎಸ್ಐ ಸುದೀಪ್ ಉತ್ತಮ ಕಾರ್ಯಾಚರಣೆ ನಡೆಸಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ. ಆರೋಪಿಗಳನ್ನು ಒಂದು ವಾರ ಕಾಲ ಕಸ್ಟಡಿ ಪಡೆಯುತ್ತೇವೆ. ಇನ್ನೂ ಹಲವರು ಈ ಪ್ರಕರಣದಲ್ಲಿ
ಅಡಗಿಕೊಂಡಿದ್ದಾರೆ. ಆರೋಪಿಗಳಿಗೆ ಫೈನಾನ್ಸ್ ಮಾಡುತ್ತಿದ್ದ ವ್ಯಕ್ತಿ ಹೊರಗಿದ್ದಾನೆ. ಮೂಡುಬಿದ್ರೆ ಮೂಲದ ಇನ್ನೊಬ್ಬ ಗ್ಯಾಂಗ್ ಲೀಡರ್ ಇದ್ದಾನೆ. ಎಲ್ಲರನ್ನೂ ಬಂಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಕಮಿಷನರ್.
ಆರೋಪಿಗಳಿಂದ ಒಂದು ಇನೋವಾ ಕ್ರಿಸ್ಟ ಕಾರು, ಮತ್ತೊಂದು ಇನೋವಾ ಕಾರು, ಒಂದು ಐ20 ಕಾರು, ಎಂಟು ಮೊಬೈಲ್ ಫೋನ್, 54 ಗ್ರಾಮ್ ಚಿನ್ನಾಭರಣಗಳು, 3.5 ಕೇಜಿ ಬೆಳ್ಳಿ ಸಾಮಗ್ರಿಗಳು, ಎರಡು ತಲವಾರನ್ನು ವಶಕ್ಕೆ ಪಡೆಯಲಾಗಿದೆ.
Moodbidri police arrest gang of six involved in dacoity theft and burglaries in connection to the series of thefts around Moodbidri, Mulky and Bajpe police station limits,” informed police commissioner N Shashi Kumar. Moodbidri Police inspector Dinesh and Sub-inspector Sudeep and the team have worked hard in nabbing the gang.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm