20 ವರ್ಷ ಹಳೆಯ ಕೊಲೆ ಪ್ರಕರಣ ; ದುಬೈಗೆ ಪರಾರಿಯಾಗಿದ್ದ ಆರೋಪಿ ಬಂಧನ

17-04-21 10:49 am       Mangalore Correspondent   ಕ್ರೈಂ

ಇಪ್ಪತ್ತು ವರ್ಷಗಳ ಹಿಂದೆ ನಡೆದಿದ್ದ ಗುತ್ತು ಜಯರಾಮ ಶೆಟ್ಟಿ ಎಂಬವರ ಕೊಲೆ ಪ್ರಕರಣದ ಆರೋಪಿ ಮಹಮ್ಮದ್ ಹಸನ್ ಎಂಬಾತನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಪಡುಬಿದ್ರೆ, ಎ.17 : ಇಪ್ಪತ್ತು ವರ್ಷಗಳ ಹಿಂದೆ ನಡೆದಿದ್ದ ಮಜೂರು ಕರಂದಾಡಿ ಗುತ್ತು ಜಯರಾಮ ಶೆಟ್ಟಿ ಎಂಬವರ ಕೊಲೆ ಪ್ರಕರಣದಲ್ಲಿ ಆಪಾದಿತನಾಗಿ ತಲೆಮರೆಸಿಕೊಂಡಿದ್ದ ಆರೋಪಿ ಬಡಾ ಎರ್ಮಾಳ್ ನಿವಾಸಿ ಇಲಿಯಾಸ್ ಯಾನೆ ಮಹಮ್ಮದ್ ಹಸನ್ (45) ಎಂಬಾತನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಜಯರಾಮ ಶೆಟ್ಟಿ ಅವರನ್ನು 2000ನೇ ಇಸವಿಯಲ್ಲಿ ಅವರ ಸಹೋದರ ಉದಯ ಶೆಟ್ಟಿ ಯಾನೆ ದಾಡೆ ಉದಯ ಎಂಬಾತ ಆಸ್ತಿ ತಕರಾರಿನ ಹಿನ್ನೆಲೆಯಲ್ಲಿ ಸುನಿಲ್ ಶೆಟ್ಟಿ, ಇಲಿಯಾಸ್ ಯಾನೆ ಮಹಮ್ಮದ್ ಹಸನ್ ಮತ್ತು ಅಬೂಬಕ್ಕರ್ ಸಿದ್ದಿಕ್ ಎಂಬವರ ಜೊತೆ ಸೇರಿಕೊಂಡು ಕೊಲೆ ಮಾಡಿದ್ದ. 

ಆರೋಪಿಗಳ ಬಂಧನವಾಗಿ ಪ್ರಕರಣದ ವಿಚಾರಣೆ ಕೋರ್ಟಿನಲ್ಲಿ ಪ್ರಗತಿಯಲ್ಲಿದ್ದಾಗ, 2007ರಿಂದ ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಬಳಿಕ ಮಹಮ್ಮದ್ ರಫೀಕ್ ಎಂಬ ಹೆಸರಲ್ಲಿ ನಕಲಿ ಪಾಸ್‌ಪೋರ್ಟ್ ಮಾಡಿಸಿಕೊಂಡು ಸೌದಿ ಅರೇಬಿಯಾಕ್ಕೆ ಪರಾರಿ ಆಗಿದ್ದ. ಇತ್ತೀಚೆಗೆ ಈತ ಊರಿಗೆ ಬಂದಿರುವ ಮಾಹಿತಿ ಪಡೆದ ಕಾಪು ಠಾಣೆ ವಾರಂಟ್ ಸಿಬ್ಬಂದಿ ಹೆಡ್ ಕಾನ್ ಸ್ಟೇಬಲ್‌ಗಳಾದ ಸುಧಾಕರ ಭಂಡಾರಿ, ರಫೀಕ್, ರವೀಂದ್ರ, ಪಿ.ಸಿ. ಸಂದೇಶ್ ಭಂಡಾರಿ ಆರೋಪಿಯನ್ನು ಬಂಧಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

Police of Kaup station arrested a warrant accused who was absconding since 2008. Ilyas alias Mohammed Hassan alias Mohammed Rafiq is the accused who was arrested by the warrant personnel of Kaup police station.