ಬ್ರೇಕಿಂಗ್ ನ್ಯೂಸ್
28-05-21 01:57 pm Bangalore Correspondent ಕ್ರೈಂ
ಬೆಂಗಳೂರು, ಮೇ 28: ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಮೂಲದ ನಿವಾಸಿಗಳು ನಿರ್ಭಯಾ ಪ್ರಕರಣದ ರೀತಿಯಲ್ಲೇ ಅಮಾನುಷ ಕೃತ್ಯ ಎಸಗಿದ್ದಾರೆ. ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರು ಮಹಿಳೆಯರು ಮತ್ತು ಯುವಕರು ಸೇರಿಕೊಂಡು ತಮ್ಮದೇ ದೇಶದ ಯುವತಿಯನ್ನು ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಲ್ಲದೆ, ಗುಪ್ತಾಂಗಕ್ಕೆ ಬೀಯರ್ ಬಾಟಲಿ ತೂರಿಸಿ ಮೃಗೀಯವಾಗಿ ನಡೆದುಕೊಂಡಿದ್ದರು. ಅಲ್ಲದೆ, ತಮ್ಮ ವಿಕೃತ ಕಾಮದ ಘಟನೆಯನ್ನು ಮೊಬೈಲಿನಲ್ಲಿ ಚಿತ್ರೀಕರಿಸಿ, ಬಾಂಗ್ಲಾ ಮೂಲದ ವಾಟ್ಸಪ್ ಗ್ರೂಪ್ಗಳಲ್ಲಿ ಹರಿಯಬಿಟ್ಟಿದ್ದಾರೆ.
ಹದಿನೈದು ದಿನಗಳ ಹಿಂದೆ ನಡೆದಿರುವ ಘಟನೆ ಬೆಳಕಿಗೆ ಬಂದಿದ್ದೇ ರೋಚಕ. ಯುವತಿಗೆ ಚಿತ್ರಹಿಂಸೆ ಕೊಟ್ಟು ವಿಕೃತಿ ಮೆರೆದ ವಿಡಿಯೋ ಬಾಂಗ್ಲಾ ಮತ್ತು ಈಶಾನ್ಯ ರಾಜ್ಯಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಲ್ಲಿನ ಪೊಲೀಸರು ಅಲರ್ಟ್ ಆಗಿದ್ದರು. ಬಾಂಗ್ಲಾ ಮೂಲದ ಯುವಕರು ಅನ್ನೋದು ಬೆಳಕಿಗೆ ಬರುತ್ತಿದ್ದಂತೆ ಘಟನೆ ಎಲ್ಲಿ ಆಗಿದೆ ಅನ್ನೋದ್ರ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಅಸ್ಸಾಂನಲ್ಲಿ ಸಾಕಷ್ಟು ಬಾಂಗ್ಲಾ ನಿವಾಸಿಗಳು ಇರೋದ್ರಿಂದ ಅಲ್ಲಿನ ಪೊಲೀಸರ ನೆರವು ಪಡೆದು ತನಿಖೆ ನಡೆಸಿದ್ದಾರೆ.
ಇಷ್ಟಾಗುತ್ತಿದ್ದಂತೆ, ಯುವತಿಯ ಸಂಬಂಧಿಕರು ಬಾಂಗ್ಲಾದಲ್ಲಿ ಪತ್ತೆಯಾಗಿದ್ದು, ಅವರು ನೀಡಿದ ಮಾಹಿತಿಯಂತೆ ಬಾಂಗ್ಲಾ ಪೊಲೀಸರು ಬೆಂಗಳೂರಿನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭೀಭತ್ಸ ಘಟನೆಯ ವಿಡಿಯೋ ಬಗ್ಗೆ ಹೇಳಿ, ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಯುವತಿ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಶುಕ್ರವಾರ ಕಾರ್ಯಾಚರಣೆ ನಡೆಸಿದ್ದು
ಐವರನ್ನು ಬಂಧಿಸಿದ್ದಾರೆ. ಈ ವೇಳೆ, ಪೊಲೀಸರಿಗೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ್ದು ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದಾರೆ.
ಯುವತಿ ಮೇಲಿನ ಚಿತ್ರಹಿಂಸೆಗೆ ಮಹಿಳೆಯರ ಸಾಥ್
ಬಾಂಗ್ಲಾ ಮೂಲದ ಯುವಕರು, ಒಂದಷ್ಟು ಮಹಿಳೆಯರು ಸೇರಿ ಕೆಲವು ಕುಟುಂಬಸ್ಥರು ರಾಮಮೂರ್ತಿ ನಗರದ ಎನ್ಆರ್ ಲೇಔಟ್ ನಲ್ಲಿ ವಾಸವಿದ್ದು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು. ಆದರೆ, ಇವರ ಜೊತೆಗಿದ್ದ 22 ವರ್ಷದ ಯುವತಿಯೊಬ್ಬಳು ಮಹಿಳೆಯರ ದಂಧೆಗೆ ಸಹಕರಿಸದೇ ರಾಂಗ್ ಆಗಿ ನಡೆದುಕೊಂಡಿದ್ದಳು. ಹೀಗಾಗಿ ಹದಿನೈದು ದಿನಗಳ ಹಿಂದೆ ನಾಲ್ವರು ಯುವಕರು ಆಕೆಯನ್ನು ತಮ್ಮ ಕೊಠಡಿಯಲ್ಲಿ ಕೂಡಿಹಾಕಿ, ಪ್ಯಾಂಟ್ ಬಿಚ್ಚಿಸಿ ಅಮಾನುಷವಾಗಿ ವರ್ತಿಸಿದ್ದಾರೆ.
ಅಲ್ಲದೆ, ಯುವತಿಗೆ ವಿಕೃತವಾಗಿ ಚಿತ್ರಹಿಂಸೆ ನೀಡಿರುವ ವಿಡಿಯೋವನ್ನು ನಿನ್ನ ಊರಿನಲ್ಲೇ ವೈರಲ್ ಮಾಡುವುದಾಗಿ ಹೇಳಿ ವಿಡಿಯೋ ಮಾಡಿ ಬಾಂಗ್ಲಾ ಮೂಲದವರ ವಾಟ್ಸಾಪ್ ಗ್ರೂಪ್ ಗಳಿಗೆ ಹರಿಯಬಿಟ್ಟಿದ್ದಾರೆ. ಬಾಂಗ್ಲಾ ಮೂಲದ ಮತಾಂಧರ ಕೃತ್ಯ ಈಶಾನ್ಯ ರಾಜ್ಯಗಳಲ್ಲಿ ವೈರಲ್ ಆಗಿದ್ದು, ಅಸ್ಸಾಂನಲ್ಲಿ ಜನಾಂಗೀಯ ದ್ವೇಷದ ಕಿಚ್ಚು ಹಚ್ಚಿತ್ತು. ಅಸ್ಸಾಂ ಮೂಲದ ಯುವತಿಯನ್ನು ಬಾಂಗ್ಲಾ ವಲಸಿಗರು ಸೇರಿ ವಿಕೃತವಾಗಿ ನಡೆದುಕೊಂಡಿದ್ದಾರೆಂದು ಆಕ್ರೋಶ ವ್ಯಕ್ತವಾಗಿತ್ತು. ಆದರೆ, ವಿಡಿಯೋದಲ್ಲಿ ಯುವತಿ ಮತ್ತು ಯುವಕರ ಮುಖ ಸ್ಪಷ್ಟವಾಗಿ ಕಂಡುಬಂದಿದ್ದರಿಂದ ಅಲರ್ಟ್ ಆದ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.
The Bengaluru police on Thursday arrested five people in connection with a case of alleged rape and torture of a woman in Ramamurthy Nagar. The arrests were made after a video clip of the purported incident went viral on social media in Assam. The police believe the accused and the victim are Bangladesh nationals.
20-03-25 10:48 pm
Bangalore Correspondent
Honey Trapped, Minister, Probe: ಅಧಿವೇಶನದಲ್ಲಿ...
20-03-25 09:52 pm
Bangalore Marriage case, Srikanth Bindushree:...
20-03-25 01:07 pm
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
20-03-25 10:40 pm
HK News Desk
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm