ಬ್ರೇಕಿಂಗ್ ನ್ಯೂಸ್
01-09-20 06:11 pm Mysore Reporter ಕ್ರೈಂ
ಮೈಸೂರು, ಸೆಪ್ಟೆಂಬರ್ 1: ನೀವು ಬೆಲ್ ಬಾಟಮ್ ಸಿನಿಮಾ ನೋಡಿರಬಹುದು. ಯಾವುದೇ ಕುರುಹೇ ಇಲ್ಲದ ರೀತಿ ಮನೆ ಕಳ್ಳತನ ಮಾಡೋ ಕತೆ ಅದರಲ್ಲಿತ್ತು. ಈಗ ನಿಜ ಜೀವನದಲ್ಲೂ ಅದೇ ಮಾದರಿಯ ಕಳ್ಳತನ ಆಗಿರುವುದು ಪೊಲೀಸರನ್ನು ದಂಗುಬಡಿಸಿದೆ. ಮನೆಯ ಬಾಗಿಲು ಮುರಿಯದೇ, ಬೀರುವಿನ ಬೀಗವನ್ನೂ ಒಡೆಯದೆ ಬರೋಬ್ಬರಿ ಎರಡು ಕೆ.ಜಿ ಚಿನ್ನವನ್ನು ಎಗರಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಶೇಷ ಅಂದ್ರೆ, ಈ ಕಳವು ನಡೆದಿದ್ದು ಕಳ್ಳರನ್ನು ಹಿಡಿಯೋ ಪೊಲೀಸರ ಮನೆಯಲ್ಲಿ..!
ಮೈಸೂರಿನ ಸರಸ್ವತಿಪುರಂನ 5ನೇ ಕ್ರಾಸ್‌ನಲ್ಲಿರುವ ವಿಜಯ್ ಕುಮಾರ್ ಮತ್ತು ಪತ್ನಿ ವನಜಾಕ್ಷಿ ಅವರ ಮನೆಯಲ್ಲಿ ಕಳ್ಳತನ ಆಗಿದೆ. ವನಜಾಕ್ಷಿ ಮೈಸೂರಿನ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಕೆಲಸ ಮಾಡುವ ಪೊಲೀಸ್ ಸಿಬಂದಿ. ಇವರ ಮನೆಯಲ್ಲಿ ಸೋಮವಾರ ಮಧ್ಯರಾತ್ರಿ ಕಳ್ಳತನ ನಡೆದಿದ್ದು ಬರೋಬ್ಬರಿ 2 ಕೆಜಿ ಚಿನ್ನವನ್ನ ಕಳ್ಳರು ಕುರುಹೇ ಇಲ್ಲದ ರೀತಿ ಎಗರಿಸಿದ್ದಾರೆ.
ಕಳ್ಳತನ ಕೃತ್ಯದ ಬಗ್ಗೆಯೇ ಈಗ ಸಂಶಯ ಉಂಟಾಗಿದೆ. ಕಳ್ಳರು ಮನೆಗೆ ಹೇಗೆ ನುಗ್ಗಿದ್ದಾರೆ ಎನ್ನುವುದೇ ಪೊಲೀಸರು ಮತ್ತು ಮನೆಯವರ ಚಿಂತೆಗೆ ಕಾರಣವಾಗಿದೆ. ಯಾಕಂದ್ರೆ, ಮನೆಯ ಯಾವುದೇ ಬಾಗಿಲು ಅಥವಾ ಕಿಟಕಿಗಳನ್ನು ಮುರಿದಿಲ್ಲ. ಜತೆಗೆ ಚಿನ್ನ ಇದ್ದ ಬೀರುವಿನ ಬೀಗವನ್ನೂ ಒಡೆದಿಲ್ಲ. ಮನೆಯ ಒಳಗೆ ಕಳ್ಳರು ಬಂದಿದ್ದಾರೆ ಎನ್ನುವ ಕುರುಹೇ ಇಲ್ಲದ ರೀತಿ ಚಿನ್ನ ಎಗರಿಸಿದ್ದಾರೆ. ವಿಶೇಷ ಅಂದ್ರೆ, ಘಟನೆ ನಡೆಯುವ ವೇಳೆ ವಿಜಯ್ ಕುಮಾರ್ ಅವರ ಮಗಳು ಅದೇ ಜಾಗದಲ್ಲಿ ಮಲಗಿದ್ದರು. ಇವರಿಗೆ ಕಳ್ಳತನ ಆಗಿದ್ದೇ ಗೊತ್ತಿಲ್ಲ.
ಕಳ್ಳರು ಹೊತ್ತೊಯ್ದ ಚಿನ್ನದಲ್ಲಿ ನಮ್ಮ ಸಂಬಂಧಿಕರ ಚಿನ್ನವೂ ಇದೆ. ಬ್ಯಾಂಕ್ ಕಚೇರಿ ಸ್ಥಳಾಂತರ ಆಗುತ್ತಿದ್ದ ಕಾರಣ ನಾವು ಚಿನ್ನ ತಂದು ಮನೆಯಲ್ಲೇ ಇಟ್ಟಿದ್ದೆವು. ರಾತ್ರಿ ತಾಯಿಗೆ ಅನಾರೋಗ್ಯ ಆಗಿದ್ದರಿಂದ ಹೊರಗೆ ಹೋಗಿದ್ದೆವು. ಮಗಳು ಮಾತ್ರ ಮನೆಯಲ್ಲಿ ಇದ್ದಳು ಎಂದು ವಿಜಯ್ ಕುಮಾರ್ ಹೇಳಿದ್ದಾರೆ.
ಕಳ್ಳತನ ಬಗ್ಗೆ ಪೊಲೀಸರು ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳ್ಳತನ ನಡೆದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಕ್ಕಪಕ್ಕದ ಮನೆಯ ಸಿಸಿಟಿವಿಗಳನ್ನೂ ಹುಡುಕಾಡಿದ್ದಾರೆ. ಯಾವುದೇ ಸಾಕ್ಷಿ ಸಿಕ್ಕಿಲ್ಲ. ಕಳ್ಳತನವಾದ ಮನೆಯಲ್ಲಿ ಒಂದೇ ಒಂದು ಕುರುಹು ಇಲ್ಲದಿರುವುದು ಕೃತ್ಯದ ಬಗ್ಗೆಯೇ ಸಂಶಯ ಹುಟ್ಟಿದೆ. ಮನೆಯವರೇ ಕಳ್ಳತನದ ಕತೆ ಕಟ್ಟಿದ್ದಾರೆಯೇ ಅನ್ನುವ ಅನುಮಾನ ಕೇಳಿಬಂದಿದೆ.
ಎರಡು ಕೆಜಿ ಚಿನ್ನವೆಂದರೆ ಇಂದಿನ ಮಾರುಕಟ್ಟೆ ಬೆಲೆಯಲ್ಲಿ ಬರೋಬ್ಬರಿ 1 ಕೋಟಿಗೂ ಹೆಚ್ಚಿನ ಮೌಲ್ಯ ಆಗಲಿದೆ. ಅಪರಾಧ ವಿಭಾಗದ ಡಿಸಿಪಿ ಗೀತ ಪ್ರಸನ್ನ ಅವರು, ಸ್ಥಳ ಪರಿಶೀಲನೆ ಮಾಡಿ ಮಾಹಿತಿ ಪಡೆದುಕೊಂಡರು.
09-10-25 12:57 pm
Bangalore Correspondent
ಕಾಂತಾರ ಭರ್ಜರಿ ರೆಸ್ಪಾನ್ಸ್ ; ಏಳೇ ದಿನಕ್ಕೆ 450 ಕೋ...
08-10-25 11:04 pm
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
09-10-25 05:33 pm
HK News Desk
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
Navi Mumbai International Airport, PM Narendr...
08-10-25 08:57 pm
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಮತ್ತೆ ಆರ...
08-10-25 05:49 pm
09-10-25 08:22 pm
Mangalore Correspondent
ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟಿನಲ್ಲಿ ಹಿನ್ನಡೆ ;...
09-10-25 07:23 pm
13 ವರ್ಷಗಳ ಬಳಿಕ ಮನೆ ಸೇರಿದ ಯುವಕ ; ಪಿಯುಸಿ ಪರೀಕ್ಷ...
09-10-25 01:59 pm
ರಾಜಕೀಯ ಲಾಭಕ್ಕೆ ಶಾರದೋತ್ಸವ ಘಟನೆಯನ್ನ ಬಿಜೆಪಿ ಹಿಂದ...
09-10-25 11:58 am
Ullal, Fish Meal Factory Fire Breaks: ಉಳ್ಳಾಲ...
08-10-25 10:09 pm
09-10-25 05:30 pm
Mangalore Correspondent
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm