Dharmasthala case, Chinnayya: ಜಾಮೀನು ಸಿಕ್ಕರೂ 23 ದಿನಗಳಿಂದ ಶಿವಮೊಗ್ಗ ಜೈಲಿನಲ್ಲೇ ಉಳಿದಿದ್ದ ಚಿನ್ನಯ್ಯನಿಗೆ ಕಡೆಗೂ ಬಿಡುಗಡೆ ಭಾಗ್ಯ 

17-12-25 08:54 pm       Mangalore Correspondent   ಕರಾವಳಿ

ಧರ್ಮಸ್ಥಳ ಪ್ರಕರಣದಲ್ಲಿ ಆರೋಪಿಯಾಗಿ ಶಿವಮೊಗ್ಗ ಜೈಲು ಸೇರಿರುವ ಮಂಡ್ಯ ಮೂಲದ ಚಿನ್ನಯ್ಯನಿಗೆ 23 ದಿನಗಳ ನಂತರ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. 

ಬೆಳ್ತಂಗಡಿ, ಡಿ.17: ಧರ್ಮಸ್ಥಳ ಪ್ರಕರಣದಲ್ಲಿ ಆರೋಪಿಯಾಗಿ ಶಿವಮೊಗ್ಗ ಜೈಲು ಸೇರಿರುವ ಮಂಡ್ಯ ಮೂಲದ ಚಿನ್ನಯ್ಯನಿಗೆ 23 ದಿನಗಳ ನಂತರ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. 

ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಎಸ್ಐಟಿಯಿಂದ ಬಂಧಿಸಲ್ಪಟ್ಟಿರುವ ಚಿನ್ನಯ್ಯನನ್ನು ಶಿವಮೊಗ್ಗ ಜೈಲಿನಲ್ಲಿ ಇರಿಸಲಾಗಿತ್ತು. ಹಲವು ಸಮಯದ ವಾದ ಸರಣಿಯ ಬಳಿಕ ನ.24ರಂದು ಚಿನ್ನಯ್ಯನಿಗೆ 12 ಷರತ್ತುಗಳೊಂದಿಗೆ ದ.ಕ ಜಿಲ್ಲಾ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. 

ಆದರೆ, ಒಂದು ಲಕ್ಷದ ಬಾಂಡ್ ಮತ್ತು ಇಬ್ಬರು ಜಾಮೀನುದಾರರ ಕೊರತೆಯಿಂದಾಗಿ 23 ದಿಗಳಿಂದ ಬಿಡುಗಡೆಯಾಗದೆ ಶಿವಮೊಗ್ಗ ಜೈಲಲ್ಲೇ ಉಳಿದಿದ್ದ. ಇದೀಗ ಚಿನ್ನಯ್ಯನ ಪತ್ನಿ ಮಲ್ಲಿಕಾ ಒಂದು ಲಕ್ಷದ ಬಾಂಡ್ ನೀಡಲು ಇಬ್ಬರು ಜಾಮೀನುದಾರರೊಂದಿಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಬಂದಿದ್ದು ಕಾನೂನು ಪಕ್ರಿಯೆ ಮುಗಿಸಿದ್ದಾರೆ. ಕೋರ್ಟ್ ಅನುಮತಿ ಪಡೆದು ಚಿನ್ನಯ್ಯನ ಪತ್ನಿ ಹಾಗು ವಕೀಲರು ಶಿವಮೊಗ್ಗ ಜೈಲಿನತ್ತ ತೆರಳಿದ್ದು ಇಂದು ರಾತ್ರಿ ವೇಳೆಗೆ ಜೈಲಿನಿಂದ
 ಬಿಡುಗಡೆಯಾಗುವ ಸಾಧ್ಯತೆಯಿದೆ.

Chinnayya, a native of Mandya and an accused in the Dharmasthala case, has finally secured his release after spending 23 days in Shivamogga jail despite being granted bail earlier. He was arrested by the SIT in connection with the alleged conspiracy case and had been lodged in Shivamogga prison.